ಬಾಗಲಕೋಟೆ 24: ಇಂದಿನ ಯಾಂತ್ರಿಕೃತ ಜೀವನಕ್ಕೆ ಮಾರು ಹೋದ ಜನತೆಯ ಒತ್ತಡ ಕಡಿಮೆ ಮಾಡಲು ಹವ್ಯಾಸಗಳು ಸಹಕಾರಿಯಾಗಿದೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಮಾಹಿ ಕುಲಪತಿ ಡಾ.ಮೀನಾ ಚಂದಾವಕರ ಹೇಳಿದರು.
ನಗರದ ಕಾಳಿದಾಸ ಕಲ್ಯಾಣ ಮಂಟಪದಲ್ಲಿಂದು ಭಾರತೀಯ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ಅಂಚೆ ಚೀಟಿ ಸಂಗ್ರಹದ ಪ್ರದರ್ಶನದ ಬಾಗಪೆಕ್ಸ್-2018 ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಅವರು ವ್ಯಕ್ತಿಯ ವ್ಯಕ್ತಿತ್ವ ರೂಪುಗಳೊಳ್ಳಲು ಹವ್ಯಾಸ ಮುಖ್ಯವಾಗಿದ್ದು, ಶಾಲಾ-ಕಾಲೇಜು ಮಕ್ಕಳಷ್ಟೇ ಅಲ್ಲದೇ ವಯೋವೃದ್ದರು ಸಹ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದಾಗಿದೆ. ಇದರಿಂದ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ದೇಶದ ಉತ್ಕೃಷ್ಟ ನಾಗರಿಕನಾಗಲು ಸಹಕಾರಿಯಾಗುತ್ತದೆ ಎಂದರು.
ಭಾರತೀಯ ಅಂಚೆ ಇಲಾಖೆ ತನ್ನದೇ ಆದಂತ ಇತಿಹಾಸ ಹೊಂದಿದ್ದು, 1856 ರಲ್ಲಿ ಹೊರತರುವ ಮೂಲಕ ಅಂಚೆ ಇಲಾಖೆಯ ಕಾರ್ಯವೈಖರಿ ಮನಮುಟ್ಟುವಂತೆ ಪರಿಚಯಿಸುತ್ತಿರುವಾಗ 1947 ರಲ್ಲಿ ಸ್ವತಂತ್ರೋತ್ಸವ ಸಮಾರಂಭದ ಅಂಚೆ ಚೀಟಿ ಹೊರತರುವ ಮೂಲಕ ಸ್ವಾತಂತ್ರೋತ್ಸವ ಅಭಿಮಾನವನ್ನು ಹೊರಹಾಕಲಾಗಿತ್ತು. ಅಂಚೆ ಚೀಟಿ ಸಂಗ್ರಹಣೆ ಹಾಗೂ ಭಾರತೀಯ ಸಂಸ್ಕೃತಿ ಇತಿಹಾಸ, ಮಹಾಪುರುಷರ ಭಾವಚಿತ್ರಗಳನ್ನೊಳಗೊಂಡ ಅಂಚೆ ಚೀಟಿಗಳು ಹೊರಬಂದಿದ್ದು, ಈ ಎಲ್ಲ ಅಂಚೆ ಚೀಟಿಗಳ ಸ್ವ-ವಿವರ ಹಾಗೂ ಅದರ ಮಹತ್ವ ಗತಕಾಲದ ಅಂಚೆಯ ಸೇವೆಯ ವಿವರಣೆಯನ್ನು ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿಕೊಡಬೇಕೆಂದರು.
ಅಂಚೆ ಚೀಟಿ ಸಂಗ್ರಹಣೆ ಕೇವಲ ಒಂದು ಹವ್ಯಾಸವಲ್ಲ 1856 ರಲ್ಲಿ ಹೊರತಂದ ಕೆಲವು ಅಂಚೆ ಚೀಟಿಗಳು 1 ಕೋಟಿ ರೂ.ಗಳಿಗೆ ಹರಾಜಾಗಿ ದಾಖಲೆ ನಿಮರ್ಿಸಿವೆ. ಸ್ವತಂತ್ರದ ನಂತರ ಹೊರಬಂದ ಅಂಚೆ ಚೀಟಿಗಳು ಲಕ್ಷಾಂತರ ರೂ.ಗಳ ಬೆಳೆಗಳಲ್ಲಿ ಹರಾಜಾಗಿವೆ. ಇವೆಲ್ಲವನ್ನು ಗಮನಿಸಿದಾಗ ಅಂಚೆ ಚೀಟಿ ಸಂಗ್ರಹಣೆ ಕೇವಲ ಹವ್ಯಾಸವಲ್ಲ. ಇದು ಆಥರ್ಿಕ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದರು. ಅಂಚೆ ಇಲಾಖೆ ಉತ್ತರ ಕನರ್ಾಟಕದ ಉಸಿರಾಟವೇ ಎನಿಸಿಕೊಂಡಿದ್ದ ಇಲಕಲ್ಲಿನ ಪ್ರಸಿದ್ದ ಸೀರೆಯ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಈ ನಾಡಿಗೆ ಗೌರವ ತಂದಿದೆ ಎಂದ ಅವರು ಇಲಕಲ್ಲ ಸೀರೆ ಕೇವಲ ಉತ್ತರ ಕನರ್ಾಟಕಕ್ಕಲ್ಲ, ರಾಜ್ಯಕ್ಕಲ್ಲ ಅಮೇರಿಕಾ ದೇಶದಲ್ಲೂ ಕೂಡಾ ಪ್ರದರ್ಶನದಲ್ಲಿ ಇಡಲಾಗಿದನ್ನು ಕಂಡು ಅಭಿಮಾನ ಉಕ್ಕಿ ಬಂದಿತು. ಆ ದೇಶೆಯಿಂದ ಪ್ರತಿಯೊಬ್ಬರು ವರ್ಷಕ್ಕೆ ಒಂದು ಬಾರಿ ಯಾದರೂ ಇಲಕಲ್ಲ ಸೀರೆಯನ್ನು ಖರೀದಿಸಿ ಈ ಭಾಗದ ನೇಕಾರರ ಆಥರ್ಿಕ ಅಭಿವೃದ್ದಿಗೆ ಕೈ ಜೋಡಿಸಬೇಕೆಂದರು.
ಬಾಗಪೇಕ್ಸ್-2018 ಪ್ರದರ್ಶನ ಉದ್ಘಾಟನೆ ಹಾಗೂ ಇಲಕಲ್ಲ ಸೀರೆ ವಿಶೇಷ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ ವೀಣಾ ಶ್ರೀನಿವಾಸ ಮಾತನಾಡಿ ಅಂಚೆ ಚೀಟಿಗಳು ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಗಾಂಧೀಜಿಯವರನ್ನು ಒಳಗೊಂಡಂತೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನೊಳಗೊಂಡು ದೇಶದ ಜನತೆಗೆ ಸ್ವತಂತ್ರ ಮಹತ್ವ ತಿಳಿಸುವದಲ್ಲದೇ ಅಂಚೆ ಇಲಾಖೆಯ ನಿರಂತರ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಲಾಗಿದ್ದು, ಹಿಂದಿನ ಕಾಲದಿಂದಲೂ ಅಂಚೆ ಇಲಾಖೆ ಸೇವೆ ಮಹತ್ವ ಪಡೆದುಕೊಂಡಿದೆ ಎಂದರು.
ಇಲಕಲ್ಲಿನ ರೇಶ್ಮೆ ಸೀರೆ ಉತ್ಪಾದಕ ಎಸ್.ಪಿ.ಸರೋದೆ, ಬಾಗಲಕೋಟ ವಿಭಾಗದ ಅಂಚೆ ಅಧೀಕ್ಷಕ ಕೆ.ಮಹಾದೇವಪ್ಪ ವೇದಿಕೆ ಮೇಲೆ ಇದ್ದರು, ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಎನ್.ಸ್.ಹಿರೇಮಠ, ಎಚ್.ಬಿ.ಹಸಬಿ, ಎಸ್.ಆರ್.ಜಾದವ, ವಿ.ವಿ.ನಿಂಬರಗಿ, ಎಸ್.ಐ.ಜತ್ತಿ, ಎಂ.ಆರ್.ಮಧುಸಾಗರ, ಶಂಕರ ಬಸರಕೋಡ, ಮಹಾಂತೇಶ ತೊಗರಿ, ಎಂ.ಆರ್.ಸಿಂಗದ, ಕಾಶಿನಾಥ ಗದ್ಯಾಳ, ಸಿ.ಎಂ.ಅಂಗಡಿ, ಎಸ್.ಎಚ್.ಜಿನ್ನದ ಉಪಸ್ಥಿತರಿದ್ದರು. ನಂತರ ಅಂಚೆ ಚೀಟಿ ಸಂಗ್ರಹದ ಪ್ರದರ್ಶನವನ್ನು ವಿವಿಧ ಶಾಲಾ-ಕಾಲೇಜು ವಿದ್ಯಾಥರ್ಿಗಳು ವೀಕ್ಷಿಸಿದರು.