ಹಿಟ್ಟಕ್ಕಿ ವಾಹನ ಪ್ರಯಾಣಕ್ಕೆ ಚಾಲನೆ
Hittakki vehicle journey begins
ಲೋಕದರ್ಶನ ವರದಿ
ಮಹಾಲಿಂಗಪುರ 12 : ಮಹಾಲಿಂಗಪುರದ ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸಮಿತಿ ವತಿಯಿಂದ ಶ್ರೀಶೈಲದಲ್ಲಿ 7 ದಿನಗಳ ನಿರಂತರ ಅನ್ನದಾಸೋಹ ನೆರವೇರಿಸಲು 21ನೇ ವರ್ಷವೂ 16 ಟನ್ ಹಿಟ್ಟಕ್ಕಿಯೊಂದಿಗೆ ಭಕ್ತರು ಬುಧವಾರ ರಾತ್ರಿ 11.15 ಗಂಟೆಗೆ ಶ್ರೀಶೈಲಕ್ಕೆ ಪ್ರಯಾಣ ಬೆಳೆಸಿದರು.
ಮಾ.13 ರಿಂದ ಶುಕ್ರವಾರದಿಂದ ಮಾ.19 ಗುರುವಾರ ಯುಗಾದಿ ಪಾಡ್ಯದವರೆಗೆ ಶ್ರೀಶೈಲದಲ್ಲಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರಿಗೆ ನಿರಂತರ ಅನ್ನದಾಸೋಹ ನೆರವೇರಿಸಲಾಗುತ್ತದೆ.
ಶ್ರೀಶೈಲದಲ್ಲಿ ಬೀಡುಬಿಡುವ ಮಹಾಲಿಂಗಪುರದ ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮಿತಿಗೆ ರಾಜ್ಯ ಮತ್ತು ಪರರಾಜ್ಯದ ಯಥೇಚ್ಛ ಹಿಟ್ಟಕ್ಕಿ ನೀಡುವುದರಿಂದ ಮಹಾಲಿಂಗಪುರದಿಂದ ಒಯ್ಯುವ ಹಿಟ್ಟಕ್ಕಿಯ ಎರಡು ಪಟ್ಟು ಹಿಟ್ಟಕ್ಕಿ ಪ್ರತಿ ವರ್ಷ ಸಂಗ್ರಹವಾಗುತ್ತಿರುವುದು ಮಹಾಲಿಂಗಪುರ ಸೇವಾ ಸಮಿತಿಯ ಹೆಗ್ಗಳಿಕೆ.
ಸ್ಥಳೀಯ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಮಠದ ಆಡಳಿತಾಧಿಕಾರಿ ಈಶ್ವರ ಮಠದ ಹಿಟ್ಟಕ್ಕಿ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸೇವಾ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣುಗೌಡ ಪಾಟೀಲ ಕಾರ್ಯದರ್ಶಿ ಶಂಕರ ಮರಗೋಡ, ಖಜಾಂಚಿ ಸಿದ್ರಾಮ ದಲಾಲ, ಸದಸ್ಯರಾದ ವಿಜಯ ಕಂಬಾರ, ಶಿವಾನಂದ ಮಠಪತಿ, ಮಹಾಲಿಂಗಪ್ಪ ಗುರವ, ವೀರಭದ್ರಯ್ಯ ಮಠಪತಿ, ಮಹಾಲಿಂಗಪ್ಪ ಪರೀಟ, ಯಲ್ಲಪ್ಪ ಹಟ್ಟಿ, ಶೇಖರ ವಗ್ಗರ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 