ಇತಿಹಾಸ ತಿಳಿದುಕೊಳ್ಳದೆ ಇದ್ದರೆ ಇತಿಹಾಸ ಸೃಷ್ಟಿಸಲಾಗದು : ನಿರ್ದೇಶಕ ಕಾಳೆ
ಶಿಗ್ಗಾವಿ 05 : ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ನಾವು ಇತಿಹಾಸವನ್ನು ತಿಳಿದುಕೊಳ್ಳದೆ ಇದ್ದರೆ ಇತಿಹಾಸವನ್ನು ಸೃಷ್ಟಿಸಲಾಗದು ಎಂಬ ಮಾತಿನಂತೆ ಒನಕೆ ಓಬವ್ವ ಅವರ ಇತಿಹಾಸ ತಿಳಿದುಕೊಳ್ಳಬೇಕು ಎಂದು ನಿವೃತ್ತ ಸಹಾಯಕ ನಿರ್ದೇಶಕ ಎನ್.ಬಿ ಕಾಳೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ತಾಲೂಕಾ ಛಲವಾದಿ ಮಹಾಸಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ, ಸಂಯುಕ್ತಾಶ್ರಯದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ, ಕಾಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚಿತ್ರದುರ್ಗ ಕೋಟೆಯನ್ನು ರಕ್ಷಣೆ ಮಾಡಿದ ಒನಕೆ ಓಬವ್ವ ಅವರ ಸಾಹಸಮಯ ಜೀವನ ಯುವ ಪೀಳಿಗೆಗೆ ಆದರ್ಶವಾಗಿದೆ ಎಂದು ವಿಶೇಷ ಉಪನ್ಯಾಸ ನೀಡಿದರು.
ತಾಲೂಕ ಅಧ್ಯಕ್ಷ ಪ್ರಮೋದಕುಮಾರ ಛಲವಾದಿ ಅಧ್ಯಕ್ಷತೆವಹಿಸಿ ಮಾತನಾಡಿ ಸಮಾಜದ ಸಂಘಟನೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದರು.
ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ನಗರದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಮೂರ್ತಿ ಪ್ರತಿಷ್ಠಾಪನೆ ಆಗಬೇಕು ಎಂದರು. ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ ವಿಜೇತರಾದ ಚನ್ನಬಸಪ್ಪ ಕಾಳೆ ಚಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾದ ಮಲ್ಲೇಶಪ್ಪ ಮಡ್ಲೆರ್ ಮಾತನಾಡಿದರು. ಸಮುದಾಯದ ಮಹಿಳೆಯರು ಕುಂಭ ಮೇಳದ ಬದಲಾಗಿ ತಲೆಯ ಮೇಲೆ ಸಂವಿಧಾನದ ಪ್ರತಿಯನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವೆನಿಸಿತು. ಗಾರುಡಿ ಗೊಂಬೆ ಡೊಳ್ಳು ನಾಸಿಕ್ ಡೋಲು ಕಹಳೆ ಹಾಗೂ ಜಾಂಜ ಕಲಾ ತಂಡ ಮೆರವಣಿಗೆ ಅಂದವನ್ನು ಹೆಚ್ಚಿಸಿದವು. ಈ ಸಂದರ್ಭದಲ್ಲಿ ಶಂಕರ ಇಂಗಳಗಿ, ಮಹೇಶ ಕಳಸದ, ಹನಮಂತಪ್ಪ ಕಾಳೆ, ಮಹಾಂತೇಶ ಮಾಕಾಪುರ, ವೀರೇಶ ಕಾಳೆ, ಮಂಜುನಾಥ ಕರ್ಜಗಿ, ನೀಲವ್ವ ಕಾಲವಾಡ, ಚಂದ್ರಶೇಖರ ಡೊಲ್ಲೇಶ್ವರ್, ರಾಜು ಕೆಂಭಾವಿ, ಶಿವಪ್ಪ ಈಟಿ, ಚನ್ನಬಸಪ್ಪ ಕಾಳೆ, ಅನಿಲ ಕಾಳೆ, ಪಕ್ಕೀರ್ಪ ಕುಂದೂರ, ಮಲ್ಲಿಕಾರ್ಜುನ ಹಡಪದಉಪಸ್ಥಿತರಿದ್ದರು.
ಜನಪದ ಕಲಾವಿದ ಶರೀಫ ಮಾಕಪ್ಪನವರ ಸಂವಿಧಾನ ಪೀಠಿಕೆ ಬೋಧಿಸಿ ಕಾರ್ಯಕ್ರಮ ನಿರೂಸಿದರು, ಮುಖ್ಯ ಶಿಕ್ಷಕರಾದ ಬಸವರಾಜ ಛಲವಾದಿ ಸ್ವಾಗತಿಸಿದರು, ಗುರುಲಿಂಗಪ್ಪ ಛಲವಾದಿ ಪ್ರಾರ್ಥಿಸಿದರು.