ಐತಿಹಾಸಿಕ ಬಜೆಟ್‌ : ಅಜ್ಜಂಪೀರ ಖಾದ್ರಿ

Historical Budget : Ajjampira Qadri

ಐತಿಹಾಸಿಕ ಬಜೆಟ್‌ : ಅಜ್ಜಂಪೀರ ಖಾದ್ರಿ  

  ಶಿಗ್ಗಾವಿ  08: ಸಿ.ಎಂ ಸಿದ್ದರಾಮಯ್ಯನವರು 16 ನೇ ಮುಂಗಡ ಪತ್ರ ಮಂಡಿಸುವ ಮೂಲಕ ದೇಶದಲ್ಲಿ 16 ಭಾರಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ ಅಲ್ಲದೇ ಐತಿಹಾಸಿಕ ಬಜೆಟ್ ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದ್ದಾರೆ.    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕುರಿತು ಸಿ.ಎಂ ಅವರು 4,09,549 ಕೋಟಿ ರೂ ದಾಖಲೆ ಗಾತ್ರದ ಬಜೆಟ್ ಮಂಡಿಸಿದ್ದಾರೆ.ಎಲ್ಲರ ನೀರೀಕ್ಷೆಯಂತೆ ಈ ಭಾರಿಯೂ 5 ಗ್ಯಾರಂಟಿ ಯೋಜನೆಗೆಳಿಗೆ 51,300 ಕೋಟಿ ಅನುಧಾನ ಮೀಸಲಿಟ್ಟಿದ್ದಾರೆ. ಎಲ್ಲ ಸಮುದಾಯಕ್ಕೆ , ಎಲ್ಲ ವರ್ಗದವರಿಗೆ, ರೈತರಿಗೆ ಹಾಗೂ ರಾಜ್ಯದ ಜನತೆ ಮೆಚ್ಚುವಂತಹ ಬಜೆಟ್ ಇದಾಗಿದೆ. ಈ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆವಸಲ್ಲಿಸುತ್ತೇನೆ ಎಂದರು.