ಬೈಲಹೊಂಗಲ: ಐತಿಹಾಸಿಕ ದೊಡ್ಡ ಕೆರೆ ಅಸ್ವಚ್ಛತೆ

ಲೋಕದರ್ಶನ ವರದಿ

ಬೈಲಹೊಂಗಲ 15:  ಪಟ್ಟಣದ ಐತಿಹಾಸಿಕ ದೊಡ್ಡ ಕೆರೆಯು ಅಸ್ವಚ್ಛತೆಯಿಂದ ಗಬ್ಬೆದ್ದು ನಾರುತ್ತಿದ್ದು, ಕೆರೆಯನ್ನು ಸ್ವಚ್ಛಗೊಳಿಸಿ, ಅಭಿವೃದ್ದಿಪಡಿಸಬೇಕೆಂದು ಕರವೇ (ಪ್ರವೀಣ ಶೆಟ್ಟಿ ಬಣ), ಶ್ರೀರಾಮ ಸೇನೆ ಹಿಂದೂಸ್ತಾನ, ಎಬಿವಿಪಿ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಪ್ರತಿಭಟಣಾ ಮೆರವಣಿಗೆ ಮೂಲಕ ತೆರಳಿ, ಇಂಚಲ ಕ್ರಾಸದಲ್ಲಿ ಮಾನವ ಸರಪಳಿ ನಿಮರ್ಿಸಿ, ರಸ್ತೆ ತಡೆ ಮಾಡಿ ಪ್ರತಿಭಟಿಸಿ, ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ನಗರಾಭಿವೃದ್ದಿ ಸಚಿವರಿಗೆ ದಿ.13ರಂದು ಮನವಿ ಸಲ್ಲಿಸಿದರು. 

          ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕಾಧ್ಯಕ್ಷ ಶಿವಾನಂದ ಇಂಚಲ ಮಾತನಾಡಿ, ಕಿತ್ತೂರ ಚನ್ನಮ್ಮಾಜಿ ಕಾಲದಲ್ಲಿ ಆನೆಗಳಿಗೆ, ಪಶು, ಪಕ್ಷಿ, ಜನ, ಜಾನುವಾರಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ನಿಮರ್ಾಣವಾಗಿದ್ದ ಕೆರೆಯು ಇಂದು ಜನ ಪ್ರತಿನಿಧಿಗಳ, ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ದುಸ್ಥಿತಿಗೆ ಒಳಗಾಗಿದೆ. 

          ಮಳೆ ನೀರು ಸಂಗ್ರಹ, ಅಂತರ್ಜಲ ಪುನಚ್ಚೇತನಕ್ಕೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಸಾವಿರಾರು ಕೋಟಿ ಹಣ ವೆಚ್ಚು ಮಾಡಿ ಅತಿಕ್ರಮಣವಾದ ಕೆರೆಗಳನ್ನು ಪುನರಜ್ಜೀವನಗೊಳಿಸುವಾಗ ಇದ್ದ ಕೆರೆಯನ್ನು ಅಭಿವೃದ್ದಿ ಪಡಿಸಲು ಸಕರ್ಾರ ಹಣ ನೀಡಲು ಮುಂದೆ ಬಂದರೂ ನಿರ್ಲಕ್ಷಿಸಲಾಗುತ್ತಿದೆ.

ಅವೈಜ್ಞಾನಿಕವಾಗಿ  ಚರಂಡಿ ನಿಮರ್ಾಣ ಮಾಡಿದ್ದರಿಂದ ಚರಂಡಿ ನೀರು ಹಲವಾರು ವರ್ಷಗಳಿಂದ ಹರಿದು ಕೆರೆಗೆ ಸೇರುತ್ತಿದೆ. ಗಟಾರು ನಿಮರ್ಾಣ ಮಾಡಿದಾಗಿನಿಂದ ಸ್ವಚ್ಚತೆಯನ್ನು ಕಂಡಿಲ್ಲ. ಅಲ್ಲದೇ ಕೆರೆಗೆ ಹೊಂದಿಕೊಂಡ ಮಳಿಗೆಗಳ ತಾಜ್ಯದಿಂದ ರೈತರಿಗೆ ಚರ್ಮ ರೋಗ, ಜಾನುವಾರಗಳಿಗೆ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. 

ಕೆರೆ ಅಭಿವೃದ್ಧಿಗೊಸ್ಕರ ಹತ್ತಾರು ವರ್ಷಗಳ ಹಿಂದೆ ಕೋಟ್ಯಾಂತರ ರೂ ಬಿಡುಗಡೆ ಮಾಡಿದ್ದರು ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ಯೋಜನೆಗಳನ್ನು ರೂಪಿಸಿದ ಕಾರಣ ಕೆರೆಯ ಅಭಿವೃದ್ದಿ ಪ್ರಾಧಿಕಾರದಿಂದ ಬಿಡುಗಡೆಗೊಂಡ ರೂ. 85 ಲಕ್ಷ ಅನುದಾನ ಸ್ಘಗಿತವಾಗಿರುವುದು ಕೆರೆಯ ದುದರ್ೈವವಾಗಿದೆ. 15 ದಿನಗಳಲ್ಲಿ ಕೆರೆ ಸ್ವಚ್ಛಗೊಳಿಸಿ. ಅಭಿವೃದ್ದಿಪಡಿಸಲು ಮುಂದಾಗದಿದ್ದರೆ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. 

  ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಕೂಡಲೇ ಯೋಜನೆ ರೂಪಿಸಿ ಕೆರೆ ಅಭಿವೃದ್ದಿ ಪ್ರಾಧಿಕಾರದಡಿಯಲ್ಲಿ ಅಭಿವೃದ್ದಿಗೆ ಮುಂದಾಗುವದಾಗಿ ಹೇಳಿದರು. 

        ಸಾಯಿರಾಮ ಜಂಬಗಿ, ವೇಂಕಟೇಶ ದಾಸೋಗ, ಬಸವರಾಜ ಯಾಸನ್ನವರ, ಮಂಜು ಮರಶೆಟ್ಟಿ, ಗುರುಪಾದ ಅಂಗಡಿ, ಶ್ರೀಕಾಂತ ಪಾಟೀಲ, ಕಿರಣ ಹಂಜಿ, ರಮೇಶ ಇಂಚಲ, ಗಂಗಾಧರ ದೊಡಗೌಡರ, ಅಜಯ ಭಜಂತ್ರಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.