ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದಲಿ ಐ.ಸಿ.ಎ.ಆರ್ ಕೃಷಿ ವಿಜ್ಞಾನಕೇಂದ್ರ, ಇಂಡಿ ಇವರ ವತಿಯಿಂದ "ಲಿಂಬೆ ಬೆಳೆಯ ಕ್ಷೇತ್ರೋತ್ಸವ" ಕಾರ್ಯಕ್ರಮವನ್ನು ಜರುಗಿತು.
ಈ ಸಂದರ್ಭದಲ್ಲಿ ವಿಜ್ಞಾನಿಗಳು(ತೋಟಗಾರಿಕೆ) ಶ್ರೀಮತಿ ಹೀನಾ ಎಮ್.ಎಸ್, ಅವರು ರೈತರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವ ಚಟುವಿಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿ ಕೃಷಿಯಲ್ಲಿ ಯಶಸ್ಸು ಕಾಣಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ ಲಿಂಬೆ ಬೆಳೆಯ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ ಲಿಂಬೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಲಘುಪೋಷಕಾಂಶಗಳು ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ ಐ.ಐ.ಹೆಚ್.ಆರ್ಅಭಿವೃದ್ಧಿ ಪಡಿಸಿರುವ ಅಕರ್ಾಲಿಂಬೆ ಸ್ಪೇಷಲ್ನ್ನು ಸಿಂಪಡಿಸಿದರೆ ಲಘುಪೋಷಕಾಂಶಗಳ ಕೊರತೆಯನ್ನು ಸರಿದೂಗಿಸಬಹುದು. ಇದರಿಂದಾಗಿ ಉತ್ತಮ ಗಾತ್ರದ ಒಳ್ಳೆಯ ಗುಣಮಟ್ಟದ ಕಾಯಿಗಳನ್ನು ಪಡೆಯುವುದರಿಂದ ಇಳುವರಿ ಹೆಚ್ಚಿಸಬಹುದು ಎಂದರು.
ಲಿಂಬೆಗೆ ಕಾಡುವ ರೋಗ ಮತ್ತು ಕೀಟ ಬಾದೆಗಳ ನಿರ್ವಹಣೆಯ ಬಗ್ಗೆ ವಿಜ್ಞಾನಿಗಳು (ಸಸ್ಯರೋಗಶಾಸ್ತ) ಡಾ. ಸಯ್ಯದ ಸಮೀನಾ ಅಂಜುಮ್ ಅವರು ಸಂಪೂರ್ಣವಾಗಿ ತಿಳಿಸಿಕೊಟ್ಟರು ಮತ್ತು ಕೊಟ್ಟಿಗೆ ಗೊಬ್ಬರದ ಜೊತೆಗೆ ಜೈವಿಕ ಪೀಡೆ ನಾಶಕಗಳಾದ ಟ್ರೈಕೊಡರ್ಮ, ಸುಡೋಮೊನಾಸ್ ಮುಂತಾದವುಗಳನ್ನು ಹೆಚ್ಚಾಗಿ ಬಳಸಿ ಎಂದರು.
ಕಾರ್ಯಕ್ರಮದಲ್ಲಿ ಭಾಗವಗಹಿಸಿದ ಡಾ.ಸಂತೋಷ ಶಿಂದೆ, ವಿಜ್ಞಾನಿಗಳು(ಪಶು ವಿಜ್ಞಾನ) ಅವರು ಕೃಷಿ ಹೊಂಡದಲ್ಲಿ ಮೀನುಸಾಕಾಣಿಕೆಯ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು. ಕಡಿಮೆ ಕಚರ್ಿನಲ್ಲಿ ಅಧಿಕ ಲಾಭ ಪಡೆಯಬಹುದಾಗಿದೆ. ಸರಿ ಸುಮಾರು ಒಂದು ಹೊಂಡದಿಂದ 6 ತಿಂಗಳಲ್ಲಿ 50,000 ಲಾಭಗಳಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಣ್ಣು ವಿಜ್ಞಾನಿಗಳಾದ ಡಾ.ಸಬಿತಾ.ಬಿ ಅವರು ರೈತರಿಗೆ ಮಣ್ಣು ರೈತನ ಕಣ್ಣು ಮಣ್ಣೇ ಆರೋಗ್ಯವಾಗಿ ಇಲ್ಲವಾದರೆ ಕೃಷಿಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ, ಮಣ್ಣು ಮತ್ತು ನೀರು ಪರೀಕ್ಷೆಯನ್ನು ಮಾಡಿಸಿ ಎಂದು ಒತ್ತಿ ಹೇಳಿದರು ಹಾಗೆಯೇ ಪರೀಕ್ಷೆಗೆ ಮಣ್ಣು ಮತ್ತು ನೀರು ಮಾದರಿ ಸಂಗ್ರಹಿಸುವುದು ಹೇಗೆ ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಾದ ರವಿ ಅವರು ಇವತ್ತಿನ ಕಾರ್ಯಕ್ರಮ ಬಹಳ ಉಪಯುಕ್ತವಾದ ಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜ್ಞಾನಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ, ಪ್ರಾತ್ಯಕ್ಷತೆಯನ್ನು ಕೈಗೊಂಡ ರೈತರು ಅಕರ್ಾ ಲಿಂಬೆ ಸ್ಪೇಷಲ್ ಸಿಂಪರಣೆಯಿಂದ ಉತ್ತಮ ಗುಣಮಟ್ಟದ ಲಿಂಬೆ ಲಭಿಸಿದೆ, ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಶೇ. 20ರಷ್ಟು ಇಳುವರಿ ಹೆಚ್ಚಾಗಿದೆ. ತಮ್ಮ ಅನುಭವ ಹಂಚಿಕೊಂಡರು ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಸುಮಾರು 35ಜನ ರೈತರು ಭಾಗವಹಿಸಿದರು ಹಾಗು ರೈತರ ಹೊಲಕ್ಕೆ ಭೇಟಿ ನೀಡಿ ಹರ್ಷವನ್ನು ವ್ಯಕ್ತಪಡಿಸಿದರು. ಹೀನಾ ಎಮ್.ಎಸ್., ಅವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.