ಹುಕ್ಕೇರಿ 16: ಪ್ರತಿ ವರ್ಷ ಹುಕ್ಕೇರಿ ಗುರು ಶಾಂತೇಶ್ವರ ಹಿರೇಮಠದಿಂದ ಬಿಡುಗಡೆಗೊಳ್ಳುವ ದಿನದಶರ್ಿಕೆ ಈ ವರ್ಷದ 2019 ನೇ ಸಾಲಿನ ನೂತನ ದಿನದಶರ್ಿಕೆಯನ್ನು ಗುರುಶಾಂತೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ಉಮೇಶ ಕತ್ತಿಯವರು ಶನಿವಾರ ಸಂಜೆ ಶ್ರೀಮಠದಲ್ಲಿ ಬಿಡುಗಡೆಗೊಳಿಸಿದರು.
ದಿನದಶರ್ಿಕೆ ಬಿಡುಗಡೆಗೊಳಿಸಿದ ಶಾಸಕ ಉಮೇಶ ಕತ್ತಿ ಮಾತನಾಡಿ ಶ್ರೀಗಳು ಪ್ರತಿ ವರ್ಷ 20 ಸಾವಿರಕ್ಕೂ ಮಿಕ್ಕಿ ದಿನದಶರ್ಿಕೆಗಳನ್ನು ಮುದ್ರಿಸಿ ವಿತರಿಸುತ್ತಿದ್ದು ಇದು ದೇಶಕ್ಕಷ್ಟೇ ಸೀಮಿತವಾಗದೆ ವಿದೇಶಗಳಲ್ಲಯೂ ವಿತರಣೆಯಾಗುವಂತಾಗಲಿಯೆಂದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕನರ್ಾಟಕದ ಅಭಿವೃದ್ಧಿ ಬಗ್ಗೆ ಚಚರ್ೆಯಾಗುತ್ತಿಲ್ಲ. ಸುವರ್ಣ ಸೌಧದಲ್ಲಿ ಜವಳಿ, ಭೂಗಣಿ, ಕೃಷಿ, ನೀರಾವರಿ, ಸಕ್ಕರೆ, ಅಬಕಾರಿ ಇಲಾಖೆಗಳನ್ನೊಳಗೊಂಡತೆ ಹತ್ತಾರು ಇಲಾಖೆಗಳು ವಗರ್ಾವಣೆಯಾಗಬೇಕೆಂದು ಒತ್ತಾಯಿಸಿದ ಅವರು ಸರಕಾರ ಇದಕ್ಕೆ ಸ್ಪಂದಿಸಬೇಕು. ಇಲ್ಲದೆ ಹೋದಲ್ಲಿ ನಮ್ಮ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಇದನ್ನು ಮಾಡುವದಾಗಿ ತಿಳಿಸಿದರು.
ಮೈಸೂರ ಮಾದರಿಯಲ್ಲಿ ಬೆಳಗಾವಿಯ ಕಿತ್ತೂರ ಚೆನ್ನಮ್ಮ ಪಾಕರ್ಿನಲ್ಲಿ ಮೃಗಾಲಯ ಹಾಗೂ ಮಾರ್ಕಂಡೇಯ ನಡುಗಡ್ಡೆಯಲ್ಲಿ ಬೋಟಿಂಗ ವ್ಯವಸ್ಥೆ ಮಾಡಲು ಸರಕಾರವನ್ನು ಒತ್ತಾಯಿಸಿದರು.
ರಾಜ್ಯದ 60 ಸಕ್ಕರೆ ಕಾರಖಾನೆಗಳಲ್ಲಿ 40 ಸಕ್ಕರೆ ಕಾರಖಾನೆಗಳು ಬೆಳಗಾವಿ, ಬಾಗಲಕೋಟ, ಬೀದರ, ವಿಜಯಪೂರದಲ್ಲಿವೆಯೆಂದರು.
ಸಾನಿಧ್ಯ ವಹಿಸಿದ ಚಂದ್ರಶೇಖರ ಸ್ವಾಮಿಗಳು ಮಾತನಾಡಿ ಸರಕಾರ ಉತ್ತರ ಕನರ್ಾಟಕ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೆ ಮಲತಾಯಿ ಧೋರಣೆ ತಾಳುತ್ತಿರುವುದಕ್ಕೆ ವಿಷಾದ ವ್ಯಕ್ತ ಪಡಿಸಿದರು. ಸರಕಾರ ಉತ್ತರ ಕನರ್ಾಟಕದ ಅಭಿವೃದ್ಧಿಗಾಗಿ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದ ಅವರು ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚಚರ್ಿಸಲು ಶಾಸಕ ಉಮೇಶ ಕತ್ತಿಯವರನ್ನು ಆಗ್ರಹಿಸಿದರು.
ಸಿ.ಎಂ.ದರಬಾರೆ ನಿರೂಪಿಸಿ ವಂದಿಸಿದರು.
ಪ್ರಜ್ವಲ ನಿಲಜಗಿ, ಸಂಜಯ ನಿಲಜಗಿ, ಪರಗೌಡ ಪಾಟೀಲ, ಗುರು ಕುಲಕಣರ್ಿ, ಅಶೋಕ ಪಟ್ಟಣಶೆಟ್ಟಿ, ಸತ್ಯೆಪ್ಪ ನಾಯಿಕ, ಪಿಂಟು ಶೆಟ್ಟಿ, ಅರುಣ ಅಡಿಕೆ, ಸುರೇಶ ಜಿನರಾಳಿ, ಸಂಜಯ ಬಸ್ತವಾಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.