ಲೋಕದರ್ಶನ ವರದಿ
ಕಾಗವಾಡ 17: ಐನಾಪೂರದಲ್ಲಿ ಜರುಗಿರುವ ಕುದುರೆ ಮೇಲೆ ಕುಳಿತು ಓಡಿಸುವ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಭೀರಪ್ಪ ಹಿರೆಕುರಬರ ಪ್ರಥಮ ಸ್ಥಾನ ಪಡೆದುಕೊಡಿದ್ದಾನೆ.
ಶುಕ್ರವಾರರಂದು ಬೆಳಿಗ್ಗೆ ಐನಾಪೂರದ ಸಿದ್ಧೇಶ್ವರ ದೇವರ 50ನೇ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಕುದುರೆ ಮೇಲೆ ಕುಳಿತು ಓಡಿಸುವ ಸ್ಪಧರ್ೆಜರುಗಿತು.
ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ರಾಯಬಾಗ ತಾಲೂಕಿನ ಚಿಂಚಲಿಯ ಮಧುಕುಮಾರ ಪೂಜಾರಿ, ತೃತೀಯ ಸ್ಥಾನ ರಾಯಬಾಗ ತಾಲೂಕಿನ ಆಲಕನೂರದ ರಾಜು ಆಲಕನೂರ, ಮತ್ತು ರಾಯಬಾಗ ತಾಲೂಕಿನ ಚಿಂಚಲಿಯ ಸಿದ್ದಾರ ನಾನು ಮಸಾಲಜ ಉತ್ತೇಜಕ ಸ್ಥಾನ ಪಡೆದುಕೊಂಡರು. ಸ್ಪಧರ್ಾ ವಿಜೇತರಿಗೆ ಅನುಕ್ರಮವಾಗಿ 5001, 4001, 3001, 1001 ಬಹುಮಾನ ನೀಡಿದರು.
ಈ ವೇಳೆ ಜಾತ್ರಾ ಕಮೀಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡಾ ಪಾಟೀಲ, ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ನಾಯ್ಯವಾದಿ ಸಂಜಯ ಕೂಚನೂರೆ, ದಶ್ರತತೇರದಾಳೆ, ರಾಹುಲ ಬಣಜವಾಡ, ರಮೇಶದೊಡ್ಮನಿ, ಸಿಕಂದರ ನದಾಫ, ಅನೀಲ ಸತ್ತಿ, ಶಂಕರಕೊರಬು, ಅಮಗೊಂಡ ವಡೆಯರ, ಸೋಮಣಾ ವಡೆಯರ, ಸೇರಿದಂತೆಅನೇಕರು ಉಪಸ್ಥಿತರಿದರು.