ಲೋಕದರ್ಶನ ವರದಿ
ಬಳ್ಳಾರಿ: ಬೆಳೆ ನಷ್ಟ ಮೊದಲಾದ ಕಾರಣಗಳಿಂದ ಗಂಡ. ಹೆಂಡತಿ ಆತ್ಮಹತ್ಯ ಮಾಡಿಕೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಆ ಗ್ರಾಮದಲ್ಲಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಒತ್ತಾಯಿಸಿ ನ. 15ರಂದು ಚಿಕ್ಕಕರೆಯಾಗಿನ ಹಳ್ಳಿಯಿಂದ ಸೊಂಡುರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಕನರ್ಾಟಕ ಪ್ರಾಂತ ರೈತಸಂಘದ ರಾಜ್ಯ ಕಾರ್ಯದಶರ್ಿ ಯು.ಬಸವರಾಜ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಆರುವರೆ ಎಕರೆ ಜಮೀನು ಹೊಂದಿದ ಚಿಕ್ಕಕರೆಯಾಗಿನ ಹಳ್ಳಿ ರೈತ ಬಾಲಪ್ಪ(32), ತನ್ನ ಜಮೀನಿಗೆ ನೀರಿಗಾಗಿ ಐದುಬಾರಿ ಬೊರ್ ಕೊರೆಸಿದ್ದರೂ ನೀರು ಬರಲಿಲ್ಲ. ಜೊತೆಗೆ ಪೂರಕವಾಗಿ ಇಟ್ಟಗೆ ಉದ್ಯೇಮ ನಡೆಸುತ್ತಿದ್ದ. ಅತೀಯಾದ ಮಳೆಯಿಂದ ಇಟ್ಟಿಗೆಯ ಬಟ್ಟಿಯು ನಷ್ಟವಾಯಿತು. ಇದಕ್ಕಾಗಿ ಆತ ಬ್ಯಾಂಕಿನಲ್ಲಿ 2.5 ಲಕ್ಷ ರೂ ಹಾಗೂ ಖಾಸಗೆಯಾಗಿ 10ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ. ಸಾಲದ ಬಾದೆ ಹೆಚ್ಚಾಗಿ ಜಮೀನಿನಲ್ಲಿಯೇ ಆತ್ಮಹತ್ಯ ಮಾಡಿಕೊಂಡಿದ್ದ. ನಂತರ ಒಂದು ತಿಂಗಳು ಕಳೆದರೂ ಸಕರ್ಾರ ಪರಿಹಾರ ನೀಡದ ಕಾರಣ ಸಾಲಗಾರರ ಒತ್ತಡಕ್ಕೆ ಬಾಲಪ್ಪನ ಹೆಂಡತಿ ಶೋಭಾ ಅವರು ಆತ್ಮಹತ್ಯ ಮಾಡಿಕೊಂಡರು. ಈಗ ಅವರ ಮೂರು ಜನ ಮಕ್ಕಳು ಅಜ್ಜಿ ಹಾರೈಕೆಯಲ್ಲಿ ಬೆಳೆಯಬೇಕಾಗಿದೆ. ಈಡಿ ಕುಟುಂಬ ಬಹಳ ಸಂಕಷ್ಟದಲ್ಲಿದೆ. ಆದರೂ ಈ ವರೆಗೆ ಜಿಲ್ಲಾಧಿಕಾರಿಗಳಾಗಲಿ, ಶಾಸಕರಾಗಲಿ, ಸಚಿವರಾಗಲಿ ಭೇಟಿ ನೀಡಿ ಸಾಂತ್ವಾನ ಹೇಳಿಲ್ಲ. ಈ ಮನೆಯಲ್ಲಿ ಮತ್ತಷ್ಟು ಸಂಕಟ ಹೆಚ್ಚಾಗದಂತೆ ಮಾಡಲು ಕುಟುಂಬದ ನೆರವಿಗೆ ತಲಾ 10 ಲಕ್ಷರೂ ಪರಿಹಾರ ನೀಡಬೇಕು.
ಈ ಮೂರು ಜನ ಮಕ್ಕಳ ಮುಂದಿನ ಭವಿಷ್ಯ ನೋಡಬೇಕು. ಸಾಲವೆನ್ನೆಲ್ಲಾ ತೀರಿಸಬೇಕು, ಹಾಗೂ ಗ್ರಾಮದಲ್ಲಿ ಬರಪರಿಹಾರ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರಾಮದಿಂದ ಸಂಡೂರುವರೆಗೆ 35 ಕಿ.ಮೀ ಪಾದಯಾತ್ರೆಯನ್ನು ನ.15ರಂದು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಂತೆಯೇ ರೈತರ ಆತ್ಮಹತ್ಯ ತಪ್ಪಿಸಲು ಕೇಂದ್ರ ಸಕರ್ಾರ ಸ್ವಾಮಿನಾಥನ್ ಕೃಷಿ ಆಯುಗದ ಪ್ರಕಾರ ಬೆಂಬಲ ಬೆಲೆ ಸಿಗಲು ಖಾಯ್ದೆ ಮಾಡಬೇಕು. ಸಾಲ ನೀತಿಗೆ ಖಾಯ್ದೆ ಬೆಲೆ ನಷ್ಟಕ್ಕೆ ಸಾಲಮನ್ನಾ ಆಗಲು ಕ್ರಮ ಆಗುವಂತೆ ಕಾನೂನು ರೂಪಿಸಲು ನ.29, ಮತ್ತು 30ರಂದು ದೇಶದ 200 ರೈತಸಂಘಟನೆಯಿಂದ ದೆಹಲಿ ಚಲೋ ಹಮ್ಮಿಕೊಂಡಿದ್ದು. ರಾಜ್ಯದ ಹತ್ತು ರೈತಸಂಘಟನೆಗಳಿಂದ 5000 ರೈತರು ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಿವಶಂಕರ, ಮತ್ತಿತರರು ಉಪಸ್ಥಿತರಿದ್ದರು.