ಭಾಗ್ಯನಗರ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 09: ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿ 2016-17 ನೇ ಸಾಲಿನ ಹೆಚ. ಕೆ. ಆರ್. ಡಿ.ಬಿ. ಮ್ಯಾಕ್ರೋ ಯೋಜನೆಯಲ್ಲಿ ರೂ 172 ಲಕ್ಷದ ವೆಚ್ಚದಲ್ಲಿ ಕೊಪ್ಪಳ-ಕಿನ್ನಾಳ ರಸ್ತೆ ಡಾಂಬರಿಕರಣ, ಸಿ ಸಿ ಚರಂಡಿ, ರಸ್ತೆ ವಿಭಜಕ ನಿಮರ್ಿಸುವುದು ಹಾಗೂ ಹೈ ಮಾಸ್ಕ ವಿದ್ಯುತ್ ದೀಪ ಅಳವಡಿಸುವ ಕಾಮಾಗಾರಿಗೆ ಭೂಮಿ ಪೂಜೆ ನೆರೆವೆರಿಸಿದ ಬಳಿಕ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳರವರು ಭಾಗ್ಯನಗರ ಪಟ್ಟಣವು ಮುಂದಿನ ದಿನಮಾನಗಳಲ್ಲಿ ಎಲ್ಲಾ 19 ವಾರ್ಡಗಳಲ್ಲಿ ಮೂಲ ಸೌಲಭ್ಯಗಳಾದ ಸಿಸಿ ರಸ್ತೆ, ಚರಂಡಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಗ್ರಂಥಾಲಯ, ಸಮುದಾಯಭವನ್ನು ಒದಗಿಸಲಾಗುವುದೆಂದು ಹೇಳಿದರು.

ತೀವೃಗತಿಯಲ್ಲಿ ಬೆಳಿಯುತ್ತಿರುವ ಭಾಗ್ಯನಗರ ಪಟ್ಟಣಕ್ಕೆ ಇನ್ನು ಹೆಚ್ಚಿನ ಅನುದಾನ ಕಲ್ಪಿಸಿ, ಪಟ್ಟಣದ ಸರ್ವತೊಮುಖ ಅಭಿವೃದ್ಧೀಗೆ ಪ್ರಮಾಣಿಕ ಪ್ರಯತ್ನ ಮಾಡುವೆನು, ಅಂದಾಜೂ ಮೊತ್ತ ರೂ 7 ಕೋಟಿ ವೆಚ್ಚದಲ್ಲಿ ಈಗಾಗಲೇ ರೇಲ್ವೆ ಮೇಲುಸೆತುವೆ ಕಾಮಾಗಾರಿಯು ಭರದಿಂದ ಸಾಗಿದ್ದು, ಬರುವ ದಿನಗಳಳ್ಲಿ ಭಾಗ್ಯನಗ ಜನತೆಗೆ ಸುಮಗ ಸಂಚಾರಕ್ಕೆ ಶಿರ್ಘವೇ ಅವಕಾಶ ಕಲ್ಪಿಸಲಾಗುವುದು, ಪ್ಲೋರೈಡ್ಯುಕ್ತ ನೀರು ಹೊಂದಿದ್ದ ಭಾಗ್ಯನಗರ ಪಟ್ಟಣಕ್ಕೆ 24*7 ಮಾದರಿಯಲ್ಲಿ ತುಂಗಾಭದ್ರಾ ಹಿನ್ನಿರಿನಿಂದ ಪಟ್ಟಣಕ್ಕೆ ಶುದ್ದ ಕುಡೀಯುವ ನೀರು ಸರಬರಾಜು ಮಾಡಿ, ಪಟ್ಟಣ್ಣದ ನೀರಿನ ಭವಣೆ ನೀಗಿಸಲಾಗಿದೆ, ಗುಣ ಮಟ್ಟದ ಕಾಮಾಗಾರಿಗೆ ಪ್ರತಿಯೊಬ್ಬರು ಕೈಜೊಡಿಸಿ ಸರಕಾರ ಕೊಡುವ ಅನುದಾನದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆನೀಡಿ ಪಟ್ಟಣದ ಆಶ್ರಯ ಬಡಾವಣೆಗಳ ನಿವಾಸಿಗಳಿಗೆ ಶಿರ್ಘವೇ ಹಕ್ಕು ಪತ್ರ ಮಂಜೂರು ಮಾಡುವ ವಿಶ್ವಾಸ್ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರು & ಮಾಜಿ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದ್ರಿ, ಭಾಗ್ಯನಗರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶೇಖಮ್ಮ ಸೋಮಣ್ಣ ದೇವರಮನಿ,  ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಯಶೋದಾ ಶಿವಶಂಕರ ಮುರಡಿ, ಸದಸ್ಯರಾದ ಹುಲಿಗೆಮ್ಮ ತಟ್ಟಿ, ಸವಿತಾ ಅಶೋಕ ಗೋರ್ಲಂಟಿ, ರಮೇಶ ಹ್ಯಾಟಿ, ಗಂಗಾಧರ ಕಬ್ಬೇರ್, ಮಂಜುನಾಥ ಸಾಲಿಮಠ, ಹೊನ್ನೂರ ಸಾಬ, ತುಕಾರಾಮಪ್ಪ ಗಡಾದ, ಮಂಜನಾಥ ಗೊಂಡಬಾಳ, ಮುಖಂಡರುಗಳಾದ ಪ್ರಸನ್ನಾ ಗಡಾದ,  ಯಮನೂರಪ್ಪ ಕಬ್ಬೇರ್, ಶ್ರೀನಿವಾಸ ಗುಪ್ತಾ, ಕೃಷ್ಣಾ ಇಟ್ಟಂಗಿ, ದಾನಪ್ಪ ಕವಲೂರ, ಕಿಶೋರಿ ಭೂದನೂರ ಮಠ, ಚನ್ನಪ್ಪ ತಟ್ಟಿ ಕೊಪ್ಪಳ ನಗರ ಸಭೆ ಸದಸ್ಯರಾದ ಅಕ್ಬರ ಪಾಷ ಪಲ್ಟನ್ ಹಾಗು ಇನ್ನು ಅನೇಕರು ಉಪಸ್ಥಿತರಿದ್ದರು.