ತಹಸೀಲ್ದಾರ್ ವರ್ಗಾವಣೆ ಆದೇಶಕ್ಕೆ ಹೈ ತಡೆ. ಮತ್ತೆ ಅಧಿಕಾರ ಸ್ವೀಕಾರ
ದೇವರಹಿಪ್ಪರಗಿ 11 : ತಹಸೀಲ್ದಾರ್ ಪ್ರಕಾಶ ಸಿಂದಗಿ ವರ್ಗಾವಣೆ ಆದೇಶಕ್ಕೆ ಕಲಬುರ್ಗಿ ಹೈಕೋರ್ಟ್ ತಡೆಯಾಜ್ಞೆ ನೀಡುವ ಮೂಲಕ ಕಾರ್ಯನಿರ್ವಹಿಸಲು ಆದೇಶಿಸಿದೆ. ದೇವರಹಿಪ್ಪರಗಿ ತಾಲ್ಲೂಕು ತಹಸೀಲ್ದಾರ್ ಆಗಿದ್ದ ಪ್ರಕಾಶ ಸಿಂದಗಿ ಅವರನ್ನು ಫೆ.24ರಂದು ಸರ್ಕಾರವು ಸ್ಥಳ ತೋರಿಸದೆ ವರ್ಗಾವಣೆ ಮಾಡಿ ಸ್ಥಳಕ್ಕೆ ಯಡ್ರಾಮಿ ತಾಲೂಕಿನ ತಹಸೀಲ್ದಾರ್ ಶಶಿಕಲಾ ಪಾದಗಟ್ಟಿ ನೇಮಿಸಿದ ಕಾರಣ ದಿ.ಮಾ-03 ರಂದು.ಸರ್ಕಾರದ ಆದೇಶದಂತೆ ಅಧಿಕಾರ ವಹಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ತಹಸೀಲ್ದಾರ್ ಪ್ರಕಾಶ ಸಿಂದಗಿ ಅಧಿಕಾರ ವಹಿಸಿಕೊಂಡ ಒಂದುವರೆ ವರ್ಷದೊಳಗೆ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿತು. ಇದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ಮಂಡಳಿ (ಕೆಐಟಿ)ಗೆ ಹಾಗೂ ಕಲಬುರ್ಗಿ ಹೈಕೋರ್ಟ್‌ಗೆ ಹೋಗಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿ ಅದೇ ಸ್ಥಾನಕ್ಕೆ ಹಾಜರಾಗಲು ಅವಕಾಶ ಕಲ್ಪಿಸಿದ್ದು. ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಮತ್ತೆ ಇಲಾಖೆಯ ಅನುಮತಿ ಪಡೆದು ದಿ.10-03-2025 ರಂದು ಅಧಿಕಾರ ಸ್ವೀಕಾರ ಮಾಡಿದರು. ಮತ್ತೆ ಅಧಿಕಾರ ಸ್ವೀಕಾರ ಮಾಡಿದ ತಹಸೀಲ್ದಾರ್ ಪಟ್ಟಣದ ಪ್ರಮುಖರು ತಾಲೂಕಿನ ಗಣ್ಯರಿಂದ ಸನ್ಮಾನಿಸಿ ಅಭಿನಂದಿಸಲಾಯಿತು.