ತಾಲ್ಲೂಕು ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ -ಶಾಸಕ ಕೃಷ್ಣ ನಾಯ್ಕ
ಹೂವಿನಹಡಗಲಿ 26 : ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಕ್ಕೆ ನಾನು ಮೊದಲ ಆದ್ಯತೆ ನೀಡಿದ್ದೇನೆ ಜತೆಗೆ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಶಾಸಕ ಕೃಷ್ಣ ನಾಯಕ್ ತಿಳಿಸಿದರು.ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸಮ ಸಮಾಜದ ಪರಿಕಲ್ಪನೆಯಲ್ಲಿ ರೂಪಿತವಾದ ಭಾರತದ ಸಂವಿಧಾನ ವಿಶ್ವಮಾನ್ಯತೆ ಹೊಂದಿದೆ ಎಂದರು. ರಾಜಪ್ರಭುತ್ವದಿಂದ ಮುಕ್ತಿಹೊಂದಿ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಳ್ಳಲು ನಮ್ಮ ಸಂವಿಧಾನ ಕಾರಣವಾಗಿದೆ.ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಜಿ. ಸಂತೋಷಕುಮಾರ್ ಮಾತನಾಡಿ, ದೇಶದ ಸಂವಿಧಾನದದಿಂದಲೇ ಎಲ್ಲರಿಗೂ ಹಕ್ಕು, ಕರ್ತವ್ಯಗಳು ದೊರೆತಿವೆ. ಏಕತೆ, ಸಮಾನತೆಯ ಮೌಲ್ಯಗಳನ್ನು ಎಲ್ಲ ನಾಗರಿಕರು ಪಾಲಿಸಬೇಕು ಎಂದು ಹೇಳಿದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ತಾ.ಪಂ. ಇಒ ಎಂ. ಉಮೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಸಿಡಿಪಿಒ ರಾಮನಗೌಡ, ಬಿಇಒ ಮಹೇಶ್ ಪೂಜಾರ, ಪಿಎಸ್‌ಐ ವಿಜಯ್ ಕೃಷ್ಣ ನೀರು ನೈರ್ಮಲ್ಯ ಇಲಾಖೆ ಎಇಇ ಎಸ್.ಅಂಬೇಡ್ಕರ್, ಟಿಎಚ್‌ಓ ಡಾ. ಸಪ್ನಾ ಕಟ್ಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ಬಿಸಿಎಂ, ವಿಸ್ತರಣಾಧಿಕಾರಿ ಎಂ.ಪಿ.ಎಂ. ಅಶೋಕ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಎಂ.ಪರಮೇಶ್ವರ್ಪ, ವಾರದ ಗೌಸ್ ಮೊಹಿದ್ದೀನ್, ದೀಪದ ಕೃಷ್ಣಪ್ಪ, ಮಲ್ಲಿಕಾರ್ಜುನ ಪೂಜಾರ್, ಚಂದ್ರನಾಯ್ಕ, ಎನ್.ಕೋಟೆಪ್ಪ ಇತರರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೊರೆಗೊಂಡರು.