ಲೋಕದರ್ಶನ ವರದಿ
ಕೊಪ್ಪಳ 05: ನಗರದ ಶ್ರೀ ಮಹಷರ್ಿ ವಾಲ್ಮೀಕಿ ಭವನದಲ್ಲಿ ಸೋಮುವಾರ ಶ್ರೀ ರಾಜವೀರ ಮದಕರಿ ನಾಯಕ ಜಯಂತ್ಯೋತ್ಸವವನ್ನು ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾ ಕೊಪ್ಪಳ ತಾಲೂಕ ಘಟಕದ ವತಿಯಿಂದ ಸಮಾಜದ ಹಿರಿಯರು ಮತ್ತು ಯುವಕರು ಸೇರಿಕೊಂಡು ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಸುರೇಶ ಹೆಚ್. ದೊಣ್ಣೆ ಹಾಗೂ ತಾಲೂಕಾ ಅಧ್ಯಕ್ಷ ಶರಣಪ್ಪ ನಾಯಕರವರ ನೇತೃತ್ವದಲ್ಲಿ ಸಡಗರ ಸಂಭ್ರದಿಂದ ಆಚರಿಸಲಾಯಿತು.
ಜಯಂತಿ ಪ್ರಯುಕತ ಶ್ರೀ ವೀರ ಮದಕರಿ ನಾಯಕರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮ ಸಲ್ಲಿಸಿದ ಸಮಾಜದ ರಾಜ್ಯ ಸಂಘಟನ ಕಾರ್ಯದಶರ್ಿ ಸುರೇಶ ದೊಣ್ಣೆ ಅವರು ಮಾತನಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿತ್ರದುರ್ಗದ ನಾಯಕರ ಕಲ್ಲಿನ ಕೊಟೆ, ಉಕ್ಕಿನ ದೆಹವನ್ನು ಹೊಂದಿದಂತ ರಾಜಾಧಿ ರಾಜರುಗಳಲ್ಲಿ ಶ್ರೀ ರಾಜಾ ವೀರ ಮದಕರಿ ನಾಯಕ ಅತ್ಯಂತ ಬಲಿಷ್ಠನು ಹಾಗೂ ಉತ್ತಮ ರಾಜನಾಗಿದ್ದನು, ಹೈದರಾಲಿಯ ವಿರುಧ್ಧ ಹೋರಾಡಿ ಕೆಚ್ಚೆದೆಯ ವೀರನೆಂದು ಅವರು ಹೇಳಿದರು. ಅಲ್ಲದೆ ಈ ವರ್ಷದಿಂದ ಪ್ರತಿ ವರ್ಷವು ಜಯಂತ್ಯೋತ್ಸವವನ್ನು ಅಗಸ್ಟ 04 ರಂದು ಆಚರಿಸಲು ಸಮಾಜಬಾಂಧವರಿಗೆ ಕರೆ ಕೊಟ್ಟರು.
ಈ ಕಾರ್ಯಕ್ರಮದಲ್ಲಿ ತಾಲೂಕಾಧ್ಯಕ್ ಶರಣಪ್ಪ ನಾಯಕ ಸೇರಿದಂತೆ ಹನುಮಂತಪ್ಪ ಗುದಗಿ, ವಿರುಪಾಕ್ಷ ಗೌಡ ಗಂಗನಾಳ, ಉಮೇಶ ಗೌಡ ಹನುಕುಂಟಿ, ಮಹೇಶ ತಳವಾರ, ಮಾರುತಿ ಡೆಕೊರೆಷನ್, ಬಸವರಾಜ ಅಗಸಿ, ನಾಗರಾಜ ತಳವಾರ, ಮಂಜುನಾತ ಎನ್. ಗುದಗಿ, ಮಂಜುನಾತ ಎಸ್. ಗುದಗಿ, ಪ್ರಕಾಶ ಗುದಗಿ, ಹನುಮಂತಪ್ಪ ಬನ್ನಿಕೊಪ್ಪ, ಪರಶುರಾಮ ಗುದಗಿ, ಉಮೇಶ ನಾಯಕ, ನಿಂಗಪ್ಪ ವಾಲ್ಮೀಕಿ, ದೇವರಾಜ ಗುದಗಿ, ರವಿಚಂದ್ರ ವಾಲಿಕಾರ, ಮಹಾಂತೇಶ ತಳವಾರ, ಹನುಮಂತಪ್ಪ ತಳವಾರ ಸೇರಿದಂತೆ ವಾಲ್ಮೀಕಿ ಸಮಾಜದ ಹಿರಿಯರು ಮತ್ತು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.