ವೀರ ರಾಣಿ ಕಿತ್ತೂರಚನ್ನಮ್ಮಾ ಅವರ ವೀರ ಪುಣ್ಯಸ್ಮರಣೆ
ಹುಬ್ಬಳ್ಳಿ 14 : ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ ಹೊರಾಡಿದ ್ರ್ರಥಮ ಮಹಿಳೆ ವೀರ ರಾಣಿಕಿತ್ತೂರಚನ್ನಮ್ಮಾಜಿಯ ವೀರ ಪುಣ್ಯಸ್ಮರಣೆಯ ನಿಮಿತ್ತ ಹುಬ್ಬಳ್ಳಿಯ ಮಧ್ಯಭಾಗದಲ್ಲಿರುವ ರಾಣಿಚನ್ನಮ್ಮಾ ಪ್ರತಿಮೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ್ಣ ಮಾಡಿ ಗೌರವ ಸೂಚಿಸಲಾಯಿತು. ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ, ಚನಬಸಪ್ಪಧಾರವಾಡ ಶೆಟ್ಟರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಪ್ರಮೋದ ಬದ್ದಿ, ಮುಂತಾದವರು ಭಾಗವಹಿಸಿದ್ದರು.ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಮಾತನಾಡಿ ವೀರರಾಣಿಕಿತ್ತೂರ ಚನ್ನಮ್ಮನ ಸಾಹಸ, ದೈರ್ಯ, ದಿಟ್ಟತನ, ಮುಂತಾದ ಗುಣಗಳನ್ನು ಮುಕ್ತ ಕಂಠದಿಂದ ಸ್ಮರಿಸಿದರು.