ಜಿಲ್ಲೆಗೊಂದು ಕಟ್ಟಡ ನಿಮರ್ಿಸಿದರೆ ಸೌಹಾರ್ದ ಸಹಕಾರಿಗಳಿಗೆ ಸಹಾಯ: ಉಪ್ಪಿನ

ಲೋಕದರ್ಶನ ವರದಿ

ವಿಜಯಪುರ 1:ಸಂಯುಕ್ತ ಸಹಕಾರಿಯು ಪ್ರತಿ ಜಿಲ್ಲೆಗೊಂದು ಹೊಸ ಕಟ್ಟಡ ನಿಮರ್ಿಸಿದರೆ. ಜಿಲ್ಲೆಯ ಸೌಹಾರ್ದ ಸಹಕಾರಿಗಳಿಗೆ ಹೆಚ್ಚಿನ ಸಹಾಯ ಒದಗಿಸಲು ಸಹಕಾರಿ ಯಾಗುತ್ತದೆ ಎಂದು ಸೌಹಾರ್ದ ಸಂಯುಕ್ತ ಸಹಕಾರಿಯ ನಿದರ್ೇಶಕರು  ಸಿದ್ರಾಮಪ್ಪ ಉಪ್ಪಿನ ಹೇಳಿದರು. ಸಂಯುಕ್ತ ಸಹಕಾರಿ ಜಿಲ್ಲೆಯ ನಿದರ್ೇಶಕರಾದ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, ಜಿಲ್ಲೆಯ ಸಹಕಾರಿಗಳ ಅಭಿವೃದ್ಧಿಗಾಗಿ ಪ್ರತಿ ಜಿಲ್ಲೆಗೊಂದು ಸ್ವಂತ ಕಟ್ಟಡ ನಿಮರ್ಿಸುವ ಯೋಜನೆಯನ್ನು ಪ್ರಸ್ತಾಪಿಸಿದರು. ಸೌಹಾರ್ದ ಸಹಕಾರಿ ಅಧ್ಯಕ್ಷರುಗಳಿಗೆ ಮತ್ತು ಸಿಬ್ಬಂಧಿ ವರ್ಗದವರಿಗೆ ಪ್ರತಿ ತಿಂಗಳು ಶುಭಶ್ರೀ ಹೊಟೇಲ್ಗಳಲ್ಲಿ ತರಬೇತಿಯನ್ನು ಮೂರು ದಿನದ ವರೆಗೆ ಆಯೋಜಿಸಿ ಹೆಚ್ಚಿನ ರೀತಿಯಲ್ಲಿ ಸೌಹಾರ್ದ ಸಹಕಾರಿಗಳು ಭಾಗವಹಿಸಲು ಕರೇ ನೀಡಿದರು. 

ಎಂ.ಜಿ.ಪಾಟೀಲ ನಿದರ್ೇಶಕರು ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರು ಮಾತನಾಡಿ, ಸಹಕಾರಿ ಸೌಹಾರ್ದದ ಅಧ್ಯಕ್ಷರು ಮತ್ತು ಸಿಬ್ಬಂಧಿಗಳು ಸೌಹಾರ್ದ ನಡೆಸಿಕೊಂಡು ಹೋಗಲು ಸಲಹೆ ಹಾಗೂ ಮಾರ್ಗದರ್ಶನ ನೀಡಲು ಸಿದ್ಧರಿದ್ದು ಸಹಕಾರಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸೌಹಾರ್ದವನ್ನು ನಡೆಸಿಕೊಂಡು ಹೋಗಲು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಎಸ್. ಅಭಿವೃದ್ಧಿ ಅಧಿಕಾರಿಗಳು ವಿಜಯಪುರ ಜಿಲ್ಲೆ ಕನರ್ಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ರವರು ಜಿಲ್ಲೆಯಲ್ಲಿ ಬರುವಂತಹ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿಗೆ ಮತ್ತು ಅಧ್ಯಕ್ಷರು ಮುಖ್ಯ ಕಾರ್ಯನಿವರ್ಾಹಕರು ಪ್ರತಿಯೊಂದು ಸಭೆಗೆ ಹಾಜರಾಗಿ ತಮ್ಮ ಸಮಸ್ಯೆಗಳನ್ನು ಹೇಳಿ ಪರಿಹಾರ ಮಾಡಿಕೊಳ್ಳಲು ಸಲಹೆ ನೀಡಿದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಶಾಕೆ ವಿಜಯಪುರದ ನಿದರ್ೇಶಕರಾದಂತಹ ಚನಬಸಯ್ಯ ಹಿರೇಮಠ ಮಾತನಾಡಿ, ಸೌಹಾರ್ದ ಸಹಕಾರಿಗಳಿಗೆ ಹೆಚ್ಚಿನ ನೆರವು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಹಾಯವನ್ನು ಕೋರಿ ಮಹಿಳಾ ಸೌಹಾರ್ದ ಸಹಕಾರಿಗಳಿಗೆ ಸಹಾಯಮಾಡಲು ಮನವರಿಕೆ ಮಾಡಿದರು. ರಾಜ್ಯ ಸಕರ್ಾರದಿಂದ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಆಥರ್ಿಕ ಸಹಾಯ ಮಾಡಿಸುವಂತೆ ಮನವಿ ಮಾಡಿಕೊಂಡರು.

ಅಮರನಾಥ ಬಿರಾದಾರ ಅಧ್ಯಕ್ಷರು ಸಿಂಡಿಕೇಟ್ ಸೌಹಾರ್ದ ವಿಜಯಪುರ ಮಾತನಾಡಿ, ಸಂಯಕ್ತ ಸಹಕಾರಿ ಸ್ಥಾಪನಾ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುವುದು ಅಗತ್ಯವೆಂದು ಹೇಳಿದರು.  ಕಾರ್ಯಕ್ರಮದಲ್ಲಿ ಶ್ರೀ ಗುರುಮಾತೆಯರ ಜಿಲ್ಲಾ ಮಹಿಳಾ ಸೌಹಾರ್ದದ ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಹಿರೇಮಠ , ಮುಖ್ಯ ಕಾರ್ಯನಿವರ್ಾಹಕರಾದ ಸೃಷ್ಠಿ ಬಿದರಿ, ಜ್ಯೋತಿ ಸೌಹಾರ್ದದ ಸಹಕಾರಿಯ ಸಿಇಓ ಎನ್.ಆರ.ಪಂಚಾಳ, ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ವಿಜಯಪುರ ನಗರ ಮತ್ತು ಸುವಿದಾ ಸೋಸಿಯಲ್ ಗ್ರೂಪ್ ಅಧ್ಯಕ್ಷರಾದ ಫಯಾಜ ಕಲಾದಗಿ, ಜುಮನಾಳ ವಿಶ್ವಗುರು ಬಸವಣ್ಣನವರ ಸೌಹಾರ್ದದ ಮುಖ್ಯ ಕಾರ್ಯನಿವರ್ಾಹಕರಾದ ಶ್ರೀಮತಿ ಪವಿತ್ರಾ ಅಮರಪ್ಪಗೋಳ, ಅದೃಷ್ಟ ಕಾಡಸಿದ್ಧೇಶ್ವರ ಸೌಹಾರ್ದದ ಜುಮನಾಳದ ಮುಖ್ಯ ಕಾರ್ಯನಿವರ್ಾಹಕರಾದ ಕುಮಾರಿ ಸಾವಿತ್ರಿ ಇತರರು ಭಾಗವಹಿಸಿದ್ದರು.