ಧಾರವಾಡ, 11 : ಅನೇಕ ಶಬ್ದಗಳಲ್ಲಿ ಹಾಗೂ ಸಾಲುಗಳಲ್ಲಿ ಹೇಳಬೇಕಾದುದನ್ನು ಒಂದು ಸುಂದರ ಚಿತ್ರಕಲಾಕೃತಿ ಉಗ್ಗಡಿಸುತ್ತದೆ. ಕಲಾವಿದ ತನ್ನ ಕಲೆಯೊಂದಿಗೆ ಅಭಿವ್ಯಕ್ತಗೊಳಿಸುವ ಅನೇಕ ಸಂಗತಿಗಳು ಪರಿವರ್ತನೆಗೂ ಕಾರಣವಾಗಿವೆ. ಮನುಕುಲದ ಹೃದಯ ಅರಳಿಸುವ ಶಕ್ತಿ ಚಿತ್ರಕಲೆಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕನರ್ಾಟಕ ವಲಯದ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು.
ಬೆಂಗಳೂರಿನ ಕನರ್ಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದ ಪ್ರೌಢ ಶಾಲಾ ವಿದ್ಯಾಥರ್ಿಗಳಿಗೆ ನಡೆಸಿದ ಚಿತ್ರಕಲೆಯ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಗರದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಸಂದರ್ಭದಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ ಸಂದರ್ಶನ ನೀಡಿ ಪರೀಕ್ಷಾ ಮೌಲ್ಯಮಾಪಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಚಿತ್ರಕಲಾ ಪರಂಪರೆ ವಿಶ್ವವ್ಯಾಪಕವಾದುದು. ನಮ್ಮ ರಾಷ್ಟ್ರದ ಅಜಂತಾ ಮತ್ತು ಎಲ್ಲೋರಾ ಗುಹೆಗಳಲ್ಲಿರುವ ಅಪೂರ್ವ ಚಿತ್ರಕಲಾಕೃತಿಗಳು ನಮ್ಮ ರಾಷ್ಟ್ರಕ್ಕೆ ಬಹುದೊಡ್ಡ ಕೀತರ್ಿಯನ್ನು ತಂದು ಕೊಟ್ಟಿವೆ. ಎಲ್ಲ ಪ್ರವಾಸಿಗರ ಗಮನಸೆಳೆದಿವೆ. ವೈಚಾರಿಕತೆ, ಪ್ರಯೋಗಶೀಲತೆ, ಸೂಕ್ಷ್ಮ ಸಂವೇದನೆ, ಸೃಜನಶೀಲ ಅಭಿವ್ಯಕ್ತಿ, ಉನ್ನತ ವ್ಯಕ್ತಿತ್ವ ಸಂಪಾದಿಸುವಲ್ಲಿ ವಿದ್ಯಾಥರ್ಿಗಳಿಗೆ ಚಿತ್ರಕಲೆ ಒಂದು ಉತ್ಕೃಷ್ಟ ಸಾಧನವಾಗಿರುವಂತೆ ಅವರಲ್ಲಿರುವ ಸುಪ್ತ ಕಲಾಶಕ್ತಿಗೆ ಚಾಲನೆ ನೀಡುವಲ್ಲಿ ಅಧ್ಯಾಪಕರೆಲ್ಲರೂ ಆದ್ಯತೆಯೊಂದಿಗೆ ಗಮನ ನೀಡಬೇಕು ಎಂದೂ ಮೇಜರ್ ಸಿದ್ದಲಿಂಗಯ್ಯ ಆಶಯ ವ್ಯಕ್ತಪಡಿಸಿದರು.
ಮೌಲ್ಯಮಾಪನ ಕೇಂದ್ರದ ಮುಖ್ಯ ಅಭಿರಕ್ಷಕ ಇಲ್ಲಿಯ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಛೇರಿಯ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪುಂಡಲೀಕ ಬಾರಕೇರ ಮೌಲ್ಯಮಾಪನದ ವಿವರ ನೀಡಿ, ನಗರದಲ್ಲಿ ಡಿ. 6 ರಿಂದ 10 ರವರೆಗೆ ಜರುಗಿದ ಮೌಲ್ಯಮಾಪನ ಕಾರ್ಯದಲ್ಲಿ 6 ಜನ ಜಂಟಿ ಮುಖ್ಯ ಪರೀಕ್ಷಕರು, 24 ಜನ ಉಪಮುಖ್ಯ ಪರೀಕ್ಷಕರು ಹಾಗೂ 281 ಜನ ಮೌಲ್ಯಮಾಪಕರು ಪಾಲ್ಗೊಂಡಿದ್ದಾರೆ. ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಎಲ್ಲ ಜಿಲ್ಲೆಗಳ 2018-19ನೆಯ ಶೈಕ್ಷಣಿಕ ವರುಷದ ಚಿತ್ರಕಲೆಯ ಲೋವರ್ ಗ್ರೇಡ್ ಪರೀಕ್ಷೆಯ 8186 ಹಾಗೂ ಹೈಯರ್ ಗ್ರೇಡ್ ಪರೀಕ್ಷೆಯ 8166 ಉತ್ತರ ಪತ್ರಿಕೆಗಳೂ ಸೇರಿದಂತೆ ಒಟ್ಟು 16352 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಯಿತು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುಗರ್ಿ ವಿಭಾಗದ ಅಪರ ಆಯುಕ್ತರ ಕಛೇರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಟಿ. ದೇವೇಂದ್ರಪ್ಪ, ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಚಾರ್ಯ ಜಾಯ್ ಪ್ರಕಾಶ್ ಹಾಗೂ ಮುಖ್ಯ ಪರೀಕ್ಷಕ ಅನಿರುದ್ಧ ಜೋಶಿ ಇದ್ದರು.