ಲೋಕದರ್ಶನ ವರದಿ
ಕೊಪ್ಪಳ 25: ಇದು ಸ್ಪರ್ಧಾತ್ಮಕ ಯುಗ. ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಸಹಜ. ಹಾಗಾಗಿ ಒತ್ತಡದಿಂದ ಅನಾರೋಗ್ಯವೂ ಅಚ್ಚರಿ ಏನಲ್ಲ. ಇಂಥ ಒತ್ತಡದ ಬದುಕನ್ನ ಸಮರ್ಥವಾಗಿ ನಿಭಾಯಿಸಿ, ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದರೆ ಕ್ರೀಡಾ ಚಟುವಟಿಕೆ ಅಗತ್ಯ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡ ಕನರ್ಾಟಕ ವಾರಿಯಸರ್್ ಸ್ಪೋಟ್ಸರ್್ ಕ್ಲಬ್ನ ಈ ವರ್ಷದ ಫ್ರೆಂಡ್ಶಿಪ್ ಕಪ್-2019 ಟೂರ್ನಮೆಂಟ್ಗೆ ರಿಬ್ಬನ್ ಕತ್ತರಿಸಿ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗೆ ಜಾತಿ-ಮತದ ಹಂಗಿಲ್ಲ. ಎಲ್ಲರೂ ಆರೋಗ್ಯವಾಗಿರಬೇಕು ಎಂದು ಬಯಸುವ ಏಕೈಕ ಕ್ಷೇತ್ರ. ಕನರ್ಾಟಕ ವಾರಿಯಸರ್್ ಸ್ಪೋಟ್ಸರ್್ ಕ್ಲಬ್ನ ಸದಸ್ಯರು ಕ್ರಿಯಾಶೀಲರಾಗಿದ್ದು, ಸಮಾಜದ ಇತರ ಯುವಕರಿಗೆ ಮಾದರಿಯಾಗಿರಬೇಕು. ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.
ಕೇವಲ ಕ್ರೀಡೆ ಮಾತ್ರವಲ್ಲದೇ ಸಮಾಜಪರ ಕೆಲಸಗಳಲ್ಲಿಯೂ ಯುವಕರು ತೊಡಗಿಕೊಳ್ಳುವ ಮೂಲಕ ಜನಪರ ಕೆಲಸ ಮಾಡಿ ಭರವಸೆಯ ನಾಯಕರೆನಿಸಿಕೊಳ್ಳಬೇಕು. ಆಟದಲ್ಲಿ ಸೋಲು-ಗೆಲುವು ಸಹಜ. ಗೆದ್ದಾಗ ಬೀಗಿ ಇತರರಿಗೆ ನೋವುಂಟು ಮಾಡದೇ, ಸೋತಾಗ ಕುಗ್ಗಿ ಹತಾಶರಾಗದೇ ಏಳು-ಬೀಳುಗಳನ್ನು ಸಮಚಿತ್ತದಿಂದ ಕಾಣಬೇಕು ಎಂದು ಆಶಿಸಿದರು.
ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿ.ವಿ.ಚಂದ್ರಶೇಖರ, ಡಾ.ರಾಂಪುರ ಹಾಗೂ ಇತರ ಗಣ್ಯರನ್ನು ಕ್ಲಬ್ನಿಂದ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಗಣ್ಯರು ಟೂರ್ನಮೆಂಟ್ಗೆ ಶುಭ ಕೋರಿದರು. ಕ್ಲಬ್ನ ಮಾಧ್ಯಮ ಪ್ರತಿನಿಧಿ ಬಸವರಾಜ ಕರುಗಲ್ ಕಾರ್ಯಕ್ರಮ ನಿರ್ವಹಿಸಿದರು.
ಈ ವೇಳೆ ಕ್ಲಬ್ನ ಸದಸ್ಯರಾದ ಗಿರೀಶ್ ಮುಂಡಾ, ಪ್ರವೀಣ ಇಟಗಿ, ವಿನೋದ ಚಿನ್ನಿನಾಯ್ಕರ್, ಗಂಗಾಧರ ನೇವಾರ, ಪುಲ್ಲಾರೆಡ್ಡಿ, ಸುರೇಶ, ಸಿದ್ದು, ಮಂಜುನಾಥ, ಜಗದೀಶ್, ಕನಕಪ್ಪ, ಈರಣ್ಣ, ಶಿವು ನಾಲ್ವಾಡ್, ನಾಗರಾಜ ಕೋಟೆ, ಪರಶುರಾಮ, ಸಂತೋಷ್, ಗವಿ, ಸಾಗರ, ಕಿರಣ್, ಕೃಷ್ಣ, ನಾಗಪ್ಪ, ಸೂರಿ ಇತರರು ಇದ್ದರು.