ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ, ಅದುವೆ ನಿಜವಾದ ಸಂಪತು

Health is the destiny of everyone, it is the real wealth

 ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯ, ಅದುವೆ ನಿಜವಾದ ಸಂಪತು 

 ಮಾಂಜರಿ  24: ನಿಜವಾದ ಸಂಪತ್ತು ನಮ್ಮ ಬಳಿ ಎಲ್ಲವೂ ಇದ್ದು ಆರೋಗ್ಯ ಇಲ್ಲದೆ ಹೋದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಅದಕ್ಕಾಗಿ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಕೆಎ??? ಶಿಕ್ಷಣ ಸಂಸ್ಥೆಯ ಚಕೋಡಿಯಲ್ಲಿರುವ ಡಾ ಪ್ರಭಾಕರ್ ಕೋರೆ ಆಸ್ಪತ್ರೆಯ   ಮುಖ್ಯಸ್ಥ ಡಾ. ಧೀರಜ್ ಕೋಳ  ಹೇಳಿದರು. ಮಂಗಳವಾರ ತಾಲೂಕಿನ ಯಡೂರ ವಾಡಿ  ಗ್ರಾಮದಲ್ಲಿ ಶುರುಗುಪ್ಪಿಯ ಕೆ ಎಲ್ ಈ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ ಎ??????ಸ್ ಘಟಕದ   ಸಹಯೋಗದಲ್ಲಿ ಏಳು ದಿನಗಳವರೆಗೆ ಆಯೋಜಿಸಲಾದ ವಿಶೇಷ ಶಿಬಿರದಲ್ಲಿ  ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

 ಕೆಎ??? ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಪ್ರಭಾಕರ್ ಕೋರೆ ಇವರ ನೇತೃತ್ವದಲ್ಲಿ ಲಕ್ಷಾಂತರ ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಈ ಶಿಬಿರದಲ್ಲಿಯೂ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರನ್ನು ನಮ್ಮ ವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿ ಅವರವರ ಗ್ರಾಮಗಳಿಗೆ ತಲುಪಿಸಲಾಗುವುದು. ಇವತ್ತು ನಮ್ಮ ಜೊತೆಗೆ ಈ ಗ್ರಾಮದವರೇ ಆದ ಎಲುಬು ಕೀಲು ತಜ್ಞ ಡಾ ಅಭಿಷೇಕ್ ರಾಯ್ಕರ್  ಆಸ್ಪತ್ರೆಯ ತಜ್ಞ ವೈದ್ಯರು ಕೈಜೋಡಿಸಿ ವಿವಿಧ ರೋಗಗಳ ತಪಾಸಣೆ ನಡೆಸಲಿದ್ದಾರೆ ಶಿಬಿರದ ಸದುಪಯೋಗವನ್ನು ತಾವೆಲ್ಲರೂ ಮಾಡಿಕೊಳ್ಳಬೇಕು ಎಂದರು. 

 ಇಂದು  ನಡೆದ ಈ ಶಿಬಿರದಲ್ಲಿ 195 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು ಪ್ರಮೋದ್ ಕುಂಬಾರ್ ಬಿ ಆರ್ ನರವಾಡಿ ರಾಯಗೌಡ ಪಾಟೀಲ್ ಶಿವಾನಂದ ಪಾಟೀಲ್ ಕಾಕಾಸಾಹೇಬ್ ಫಾಟಿಗೆ ಬಾಳು ಧನಗರ್ ಸುರೇಶ್ ಯಳವಂತೆ ಮಚ್ಚೇಂದ್ರ ಧನಗರ ಹಾಗೂ ಇನ್ನಿತರರು ಹಾಜರಿದ್ದರು ಶ್ವೇತಾ ಖೋತ್ ಸ್ವಾಗತಿಸಿ ನಿರೂಪಿಸಿದರು ರಂಜನಾ ಪಾಟೀಲ್ ವಂದಿಸಿದರು