ಆರೋಗ್ಯವೇ ಅಮೂಲ್ಯ ಸಂಪತ್ತು: ಎಸಿಪಿ ಎ. ಚಂದ್ರಪ್ಪ

ಲೋಕದರ್ಶನ ವರದಿ

ಬೆಳಗಾವಿ: ಜನರು ಹಣದ ವ್ಯಾಮೋಹದಿಂದ ಆರೋಗ್ಯ  ಕಾಪಾಡಿಕೊಳ್ಳಲು  ಬಲಹೀನರಾಗುತ್ತಿದ್ದಾರೆ. ವಿದ್ಯಾರ್ಥಿ ಗಳ ಸಹ ನವಚೇತನ ಜೀವವನ್ನು ನಾಶಮಾಡಿಕೋಳ್ಳುತ್ತಿದ್ದಾರೆ. ಕ್ರೀಡೆಯಿಂದ ಸದೃಢ ಆರೋಗ್ಯ,  ಆರೋಗ್ಯವೇ ಅಮೂಲ್ಯ ಸಂಪತ್ತು  ಎಂದು ಎಸಿಪಿ ಎ. ಚಂದ್ರಪ್ಪಾ ಹೇಳಿದರು.

ಇಲ್ಲಿನ ಸಿಪಿಎಡ್ ಮೈದಾನಲ್ಲಿ ಭಾನುವಾರ 15 ರಂದು ಬಂಟರ ಯಾನೆ ನಾಡವರ ಸಂಘ ವತಿಯಿಂದ ಆಯೋಜಿಸಲಾಗಿದ್ದ, ಬಂಟರ ಯಾನೆ ನಾಡವರ 36ನೇ ವಾಷರ್ಿಕೋತ್ಸವದ ನಿಮಿತ್ತವಾಗಿ ವಿವಿಧ ಕ್ರೀಡಾ ಸ್ಪಧರ್ೆಗಳಿಗೆ ಚಾಲನೆ ನೀಡಿ ಮಾತನಾಡಿ ಅವರು.

ಪಾಲಕರು ಮಕ್ಕಳಿಗೆ ಶೇ 99 ರಷ್ಟು ಫಲಿತಾಂಶಕ್ಕಾಗಿ ಕಾತುರರಾಗಿರುತ್ತಾರೆ ಹೊರತು ಮಕ್ಕಳ ಆರೋಗ್ಯ ಬಗ್ಗೆ ನಿಗಾ ವಹಿಸುದಿಲ್ಲ. ಕ್ರೀಡೆ ಹಾಗೂ ವಿವಿಧ ಚಟುವಟಿಕಗಳಲ್ಲಿ ಭಾಗವಹಿಸಿದರೆ ಮಾತ್ರ ಬುದ್ಧಿವಂತರಾಗಿ ಚೇತನಕೊಂಡು ಶೇ 100 ರಷ್ಟು ಪಲಿತಾಂಶ ತೆಗೆಯಬಹುದು ಎಂದರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಯೊಂದು ರಂಗದಲ್ಲಿ ಬಂಟರ ಯಾನೆ ನಾಡವರ ಸಂಘ ಏಳಿಗೆ ಕಂಡಿದೆ ಜತೆ ಸಮಾಜ ಸೇವೆಗಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಬಂಟರ ಕಾರ್ಯ ಶ್ಲಾಘನೀಯ ಎಂದರು.

ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಆನಂದ ಎನ್.ಶೆಟ್ಟಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿದರೆ ಸದೃಢ ಆರೋಗ್ಯ ಪಡೆದುಕೊಳ್ಳಲು ಸಾದ್ಯ. ಕ್ರೀಡೆಯಲ್ಲಿ ಸೊಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ. ಕ್ರೀಡೆಯಿಂದ ಶಿಸ್ತು ಹಾಗೂ ಆರೊಗ್ಯ ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ  ಖಾನಾಪೂರ ನಾರಾಯಣ ಶೆಟ್ಟಿ, ಉದಯಕುಮಾರ್ ಆರ್ ಶೆಟ್ಟಿ, ಪ್ರಭಾಕರ್ ಕೆ. ಶೆಟ್ಟಿ, ಚೇತನ ಎಸ್. ಶೆಟ್ಟಿ, ಉಮಾಶಂಕರ ಶೆಟ್ಟಿ, ಕೆ ರತ್ನಾಕರ ಶೆಟ್ಟಿ, ಉಳ್ತೂರು ಸಂತೋಷ ಶೆಟ್ಟಿ, ಶರತ್ ಶೆಟ್ಟಿ, ರಘುರಾಮ್ ಶೆಟ್ಟಿ, ಸಂತೋಷ ಶೆಟ್ಟಿ, ಪ್ರಕಾಶ ಹೆಗ್ಡೆ, ವೀರೇಂದ್ರ ಬಿ.ಶೆಟ್ಟಿ,  ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇತರರು ಇದ್ದರು.  ಜ್ಯೋತಿ ಶೆಟ್ಟಿ ಸ್ವಾಗತಿದರು. ಅಭಿಷೇಕ ಶೆಟ್ಟಿ ನಿರೂಪಿಸಿದರು. ಪ್ರಭಾಕರ್ ಶೆಟ್ಟಿ 

ವಂದಿಸಿದರು.