ಲೋಕದರ್ಶನ ವರದಿ
ಬೆಳಗಾವಿ 19: ನಗರದ ಜೈನ್ ಪಾಲಿಟೆಕ್ನಿಕ್ನ ಎನ್ಎಸ್ಎಸ್ ಘಟಕ ಖಾನಾಪುರ ತಾಲೂಕು ಗಣೆಬೈಲ್ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಿಶೇಷ ಶಿಬಿರದಲ್ಲಿ ಬೆಳಗಾವಿಯ ಬಿಎಚ್ಎಸ್ ಲೇಕ್ವ್ಯೂವ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಗ್ರಾಮದ ನೂರಾರು ನಾಗರಿಕರು ಪಡೆದುಕೊಂಡರು.
ನಾಗರಿಕರು ಅನುಸರಿಸಬೇಕಾದ ಆಹಾರ ಕ್ರಮ, ವ್ಯಾಯಾಮ, ತೂಕ ನಿಯಂತ್ರಣ ಸೇರಿದಂತೆ ಇತರ ಆರೋಗ್ಯಕರ ಚಟುವಟಿಕೆಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಮೂಳೆ ಚಿಕಿತ್ಸೆ, ಬಂಜೇತನ ಸೇರಿದಂತೆ ಇತರ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಲೇಕ್ವ್ಯೂವ್ ಆಸ್ಪತ್ರೆಯ ಆತರ್ೋಪೆಡಿಕ್ ಸರ್ಜನ್ ಡಾ. ಬಸವರಾಜ ಪಾಟೀಲ, ಡಾ. ಜಯಶ್ರೀ ಪಾಟೀಲ ಹಾಗೂ ಸಿಬ್ಬಂದಿ 120ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಪ್ರಾಚಾರ್ಯ ವಿಜಯ ಕಲ್ಮಣಿ, ಡಾ. ಆನಂದ ಬಿಂಗೆ, ವಷರ್ಾ ದೇಸಾಯಿ, ಸಾತೇರಿ ನಾರಾಯಣ ಗುರವ, ಭೈರು ಗುರವ, ಡಾ. ಕಣನಾಥ್ ಶೆಟ್ಟಿ, ಡಿ ಕಾತರ್ಿ ಗುಣ, ವಾಸುದೇವ್, ಡಾ. ಗುರುಪ್ರಸಾದ ಹಗರ, ಪ್ರೊ. ಬಲರಾಮ ಕಾಮ್ಕರ, ಪ್ರೊ. ಸೂರಜ್ ಸುತಾರ, ಪ್ರೊ. ಪ್ರಕಾಶ ಸೋನ್ವಾಲ್ಕರ ಮತ್ತಿತರು ಉಪಸ್ಥಿತರಿದ್ದರು.