ಲೋಕದರ್ಶನ ವರದಿ
ಕೊಪ್ಪಳ 19: ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾಮರ್ಿಕರ ಶ್ರಮ ದೊಡ್ಡದು, ಪೌರ ಕಾಮರ್ಿಕರು ಸ್ವಚ್ಛತೆ ಮಾಡುವ ಭರದಲ್ಲಿ ಆರೋಗದ ಕಡೆ ಗಮನ ಹರಿಸಬೇಕು ಎಂದು ಜೆ.ಡಿ.ಎಸ್. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿಗಳಾದ ವೀರೇಶ್ ಮಹಾಂತಯ್ಯನಮಠ ಹೇಳಿದರು.
ಅವರು ಜಿಲ್ಲೆಯ ಯಲಬುಗರ್ಾದ ಪಟ್ಟಣ ಪಂಚಾಯಿತಿ ಕಛೇರಿ ಆವರಣದಲ್ಲಿ ಜೆ.ಡಿ.ಎಸ್. ಜಿಲ್ಲಾ ಘಟಕ ಮತ್ತು ತಾಲ್ಲೂಕು ಘಟಕದಿಂದ ಪೌರ ಕಾಮರ್ಿಕರಿಗೆ ಮಾಸ್ಕ್ ಮತ್ತು ನ್ಯಾನಿಟೇಸರ್ ಹಾಗೂ ವಿವಿಧ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸದ್ಯ ದೇಶವೇ ಲಾಕ್ ಡೌನ್ ಆಗಿದೆ. ಆದರೆ, ತಮಗೆ ತಾವು ಮಾಡುವ ನಿತ್ಯ ಕೆಲಸಕ್ಕೆ ಮಾತ್ರ ಸರಕಾರಗಳು ನಿಬರ್ಂಧ ಹಾಕದೇ, ಕೆಲಸ ಮಾಡಿಸಿಕೊಳ್ಳುತ್ತಿವೆ. ಕೋವಿಡ್-19 ಕೊರೊನಾ ವೈರಸ್ ಹರಡುವಂತಹ ಕಠಿಣ ಪರಸ್ಥಿತಿಯಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸಿದೇ ಸ್ವಚ್ಛತೆ ಕೆಲಸದಲ್ಲಿ ಮುಂದಾಗಿದ್ದೀರಿ. ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೆಲಸ ಮಾಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು. ಸರಕಾರ ತಮ್ಮ ಕುಂದು ಕೊರತೆಗಳನ್ನು ಈಡೇರಿಸಲು ಮುಂದಾಗಬೇಕು. ಪೌರ ಕಾಮರ್ಿಕರಿಗೆ ಯಾವಾಗಲೂ ಬೆಂಬಲವಾಗಿರುತ್ತೇವೆ ಎಂದು ಧೈರ್ಯ ತುಂಬಿದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ವಿಜಕಯಮಾರ್ ಕರಂಡಿ ಮಾತನಾಡಿ, ಭಯದ ವಾತಾರಣದಲ್ಲಿಯೂ ಸಹ ಪಟ್ಟಣದ ಸ್ವಚ್ಛತೆಗೆ ಮುಂದಾಗಿರುವ ಪೌರ ಕಾಮರ್ಿಕರಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ ಪೌರ ಕಾಮರ್ಿಕರನ್ನು ಮೇಲಿಂದ ಮೇಲೆ ಆರೋಗ್ಯ ತಪಾಸಣೆಗೆ ಒಳಪಡಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಕಿರಿಯ ಅಭಿಯಂತ ಉಮೇಶ ಬೇಲಿ, ಜೆಡಿಎಸ್ ಮುಖಂಡರಾದ ಶರಣಪ್ಪ ಕರಂಡಿ, ಶಿವಪ್ಪ ದಿಬ್ಬದ, ಸಂಗಪ್ಪ ಕೊಪ್ಪಳ, ಬಸವರಾಜ ಗುಳಗುಳಿ, ಜೀಲಾನಸಾಬ ಖಾಜಿ, ಪೌರ ಕಾಮರ್ಿಕ ಸಂಘದ ಅಧ್ಯಕ್ಷ ಹನುಮಂತ ಛಲವಾದಿ, ಗಂಗಾಧರ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಸುಭಾಷ ಭಾವಿಮನಿ, ಬಸಲಿಂಗಪ್ಪ ಭಾಸ್ಕರ್, ಶಿವಕುಮಾರ್ ಹೊಸಮಠ ಮತ್ತು ಫಾಯಜ್ ಗೊಲಿಸೋಢಾ, ಮಾರುತಿ ಮತ್ತೀತರರು ಉಪಸ್ಥಿತರಿದ್ದರು.