ಧರ್ಮಸ್ಥಳ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ದೇವರ ಹಿಪ್ಪರಗಿ 09:ತಾಲೂಕಿನ ಜಾಲವಾದ ವಲಯದ ಕನ್ನೊಳ್ಳಿ ಕಾರ್ಯಕ್ಷೇತ್ರದ ಲಕ್ಷ್ಮೀ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ವತಿಯಿಂದ(ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ) ಆಯೋಜನೆ ಮಾಡಿದ್ದು ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರು ಸಂತೋಷಕುಮಾರ ರೈ ರವರು ಉದ್ಘಾಟನೆ ಮಾಡಿ ದುಶ್ಚಟಗಳಿಗೆ ಬಲಿ ಯಾಗದೆ,ಉತ್ತಮ ಸಂಸ್ಕಾರ ಪಡಕೊಳಬೇಕು,ಯಾವುದೆ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳಬೇಡಿ ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಬದಲಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು,
ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು,ವಿಜಯಪುರ ಜಿಲ್ಲಾ ಜಾಗೃತಿ ವೇದಿಕೆಯ ಸದಸ್ಯರಾದ ಪಂಚಾಕ್ಷರಿ ಮಿಂಚನಾಳ ಅವರು ಮಾತನಾಡಿ,ಮಕ್ಕಳ ಶಿಕ್ಷಣ,ಮುಂದಿನ ಭವಿಷ್ಯ ಉತ್ತಮ ರೀತಿಯಲ್ಲಿ ಇಟ್ಟುಕೊಳಬೇಕಾದರೆ ಇಂದಿನ ಈ ಕಾರ್ಯಕ್ರಮದ ಮಾಹಿತಿ ನಿಮಗೆ ಅಗತ್ಯ ಇದೆ ಎಂದು ತಿಳಿಸಿದರು,ಕಾರ್ಯಕ್ರಮದ ಅಧ್ಯಕ್ಷರಾಗಿ ಸ್ಥಳೀಯ ಪ್ರೌಢಶಾಲೆ ಮುಖ್ಯ ಗುರುಗಳಾದ ಆರ್.ಎಸ್. ಬಿರಾದಾರ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು,ಪ್ರಾಚಾರ್ಯರಾದ ಐ.ಡಿ. ಪಡಶಟ್ಟಿ ಮುಖ್ಯ ಅತಿಥಿಗಳಾಗಿ ಜಿ. ಎಸ್. ಪಾಟೀಲ, ವಲಯದ ಮೇಲ್ವಿಚಾರಕರು ಬಾಬುರಾವ ಗೋಣಿ ಸೇರಿದಂತೆ ಸೇವಾ ಪ್ರತಿನಿಧಿಗಳು,ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು,