ಚರಂಡಿ ಸ್ವಚ್ಚತೆಗೆೆ ಮುಂದಾದ ಆರೋಗ್ಯ ಅಧಿಕಾರಿ!

ಲೋಕದರ್ಶನ ವರದಿ

ತಾಳಿಕೋಟೆ,16:  ಪಟ್ಟಣದ ಡಿಎಲ್ಬಿ ರಸ್ತೆಯ ಪಕ್ಕದಲ್ಲಿಯ ಚರಂಡಿಯಲ್ಲಿ ತುಂಬಿಕೊಂಡಿದ್ದ ಕಸಕಡ್ಡಿ ಹೂಳನ್ನು ಪುರಸಭೆಯ ಆರೋಗ್ಯ ಅಧಿಕಾರಿ ಎಸ್.ಎ.ಘತ್ತರಗಿ ಅವರು ಸ್ವತಃ ಚರಂಡಿಗೆ ಇಳಿದು ಸ್ವಚ್ಚತೆ ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಡಿಎಲ್ಬಿ ರಸ್ತೆಯ ಪಕ್ಕದಲ್ಲಿಯ ಚರಂಡಿಯ ಮೇಲೆ ಹಾಕಲಾಗಿದ್ದ ಬೆಡ್ನಿಂದ ಸ್ವಚ್ಚತಾ ಕಾಮರ್ಿಕರಿಗೆ ಸ್ವಚ್ಚತೆ ಕೈಗೊಳ್ಳಲು ಆಗಿರಲಿಲ್ಲಾ ಈ ಕಾರಣದಿಂದ ಗಲಿಜು ನೀರು ರಸ್ತೆಯಲ್ಲಿ ಹರಿಯಲಾರಂಬಿಸಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು ಈ ವಿಷಯವನ್ನು ಅರೀತ ಪುರಸಭಾ ಅಧ್ಯಕ್ಷೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ ಹಾಗೂ ಮುಖ್ಯಾಧಿಕಾರಿ ಸುರೇಶ ನಾಯಕ ಅವರ ಸೂಚನೆಯ ಮೇರೆಗೆ ಬುಧವಾರರಂದು ಆರೋಗ್ಯ ಅಧಿಕಾರಿ ಎಸ್.ಎ.ಘತ್ತರಗಿ ಅವರು ಪುರಸಭೆಯ ಜೆಸಿಬಿ ಯಂತ್ರದ ಸಹಾಯದ ಮೂಲಕ ಚರಂಡಿ ಮೇಲೆ ಹಾಕಲಾಗಿದ್ದ ಬೇಡ್ನ್ನು ಎತ್ತಿಸಿ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಕೈ ಜೋಡಿಸಿ ಚರಂಡಿಯಲ್ಲಿ ತುಂಬಿಕೊಂಡಿದ್ದ ಕಸಕಡ್ಡಿ ಹೂಳನ್ನು ತೆಗೆದು ಸ್ವಚ್ಚತೆಗೊಳಿಸಿದರು.

ಈ ಸಮಯದಲ್ಲಿ ಅಧಿಕಾರಿಯನ್ನು ಪತ್ರಿಕೆ ಮಾತನಾಡಿಸಿದಾಗ ಪುರಸಭೆಯಲ್ಲಿ ಸ್ವಚ್ಚತಾ ಸಿಬ್ಬಂದಿಯ ಕೊರತೆ ಇದೆ ಈ ಕಾರಣದಿಂದ ಇದ್ದ ಸಿಬ್ಬಂದಿಗಳ ಮೇಲೆ ಒತ್ತಡ ಹಾಕುತ್ತಾ ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳುತ್ತಿದ್ದೇನೆ ಡಿಎಲ್ಬಿ ರಸ್ತೆಯ ಪಕ್ಕದಲ್ಲಿಯ ಚರಂಡಿಯ ಮೇಲೆ ಬೆಡ್ಹಾಕಿದ್ದರಿಂದ ಒಳಗಡೆ ಕಸಕಡ್ಡಿ ಪ್ಲಾಸ್ಟಿಕ್ ಇನ್ನಿತರ ತುಂಬಿಕೊಂಡಿತ್ತು ಇದನ್ನು ಸ್ವಚ್ಚಗೊಳಿಸಲು ಸಿಬ್ಬಂದಿಗಳಿಂದ ಆಗಿದಿಲ್ಲಾ ಈ ಕುರಿತು ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಕುದ್ದಾಗಿ ನೀವೇ ನಿಂತು ಸ್ವಚ್ಚತೆಗೊಳಿಸಿ ಎಂದು ಸೂಚಿಸಿದ್ದರಿಂದ ಚರಂಡಿಯನ್ನು ಸ್ವಚ್ಚತೆಗೊಳಿಸಿದ್ದೇನೆ ಎಂದರು.