ಲೋಕದರ್ಶನ ವರದಿ
ಗಜೇಂದ್ರಗಡ 21: ಯೋಗವು ಅತ್ಯಂತ ಪುರಾತನ ಕಾಲದಿಂದಲೂ ಬೆಳೆದುಬಂದಿದೆ ಪತಂಜಲಿ ಮಹಷರ್ಿಯ ಯೋಗ ಸುತ್ರವು ವಿಶೇಷವಾಗಿ ರಾಜಯೋಗವು ನಮ್ಮಂತಹ ಸಾಮಾನ್ಯರಿಗೂ ನಿಲುಕುವಂತದ್ದಾಗಿದೆ ಈ ಯೋಗದಿಂದ ನಾವೆಲ್ಲರೂ ಶುದ್ಧ ಆಚರಣೆ ಉಳ್ಳವರಾದಾಗ ಆರೋಗ್ಯವಂತರು, ಆಯುಷ್ಯವಂತರು ಆಗಲು ಸಾಧ್ಯವಿದೆ ಎಂದು ಜೈನ್ ಆಯರ್ುವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಅಶೋಕ ಬಾಗಮಾರ ಹೇಳಿದರು.
ಅವರು ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಶ್ವ 5 ನೇ ಯೋಗ ದಿನಾಚರಣೆಯನ್ನು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ತಾಂತ್ರಿಕ ಬಳಕೆಯಿಂದಾಗಿ ಯೋಗ ಬದುಕಿನಿಂದ ಬಹಳ ದೂರವಾಗಿದೆ ಮನಸ್ಸಿನ ಸ್ಥಿರತೆ, ಚಿತ್ತ, ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಯೋಗ ಅದರಲ್ಲೂ ಪ್ರಾಣಾಯಾಮ ಅವಶ್ಯವಾದುದಾಗಿದೆ ಎಂದು ಆಯುರ್ವೇವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಕೊಟ್ಟೂರು ಮಾತನಾಡಿದರು.
ಪ್ರಾಣಾಯಾಮ: ಪ್ರಾಣ, ಉಸಿರು ಆಯಾಮ ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವ ಶಕ್ತಿಯ ನಿಯಂತ್ರಣವೆಂದೂ ಸಹಾ ಅಥರ್ೈಸಲಾಗುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಬಾಗಮಾರ, ಡಾ. ಬಿ ವ್ಹಿ ಕಂಬಳ್ಯಾಳ, ಎಸ್ ಎಮ್ ಭೂಮರಡ್ಡಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ ಎಮ್ ಕುದರಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗುರಿಕಾರ, ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಎಲ್ಲ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಪ್ರ ಶಿಕ್ಷಣಾರ್ತಿಗಳು ಉಪಸ್ಥಿತರಿದ್ದರು.
ಯೋಗಾಸನ ತರಬೇತಿಯನ್ನು ಶಿಕ್ಷಕರಾದ ಪ್ರಕಾಶ ಬಾಕಳೆ ಮತ್ತು ತರಬೇತಿ ಪಟು ಯು. ಅಶೋಕ ನಡೆಸಿಕೊಟ್ಟರು