ಲೋಕದರ್ಶನ ವರದಿ
ಬೆಳಗಾವಿ 06: ಇಂದು ಪ್ರತಿಯೊಬ್ಬರು ಕೂಡ ಏಡ್ಸ್ ರೋಗದ ಕುರಿತಾಗಿ ಅರಿತುಕೊಳ್ಳುವುದು ಅತ್ಯವಶ್ಯ. ಅದರಲ್ಲೂ ಶಾಲಾ ಮಕ್ಕಳಲ್ಲಿ ಇದರ ಬಗೆಗೆ ತಿಳಿಸಿಕೊಡುವದರಿಂದ ಆರೋಗ್ಯವಂತ ಸಮಾಜ ನಿಮರ್ಿಸಲು ಇದು ಸಹಕಾರಿಯಾಗುತ್ತದೆ ಎಂದು ಕೆಎಲ್ಇ ವಿವಿ ಜ.ನ. ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಸಹಪ್ರಾಧ್ಯಾಪಕರಾಗಿರುವ ಡಾ. ಆಶಾ ಬೆಲ್ಲದ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಬೆಳಗಾವಿಯ ಅಶೋಕ್ ನಗರ ಆರೋಗ್ಯ ಕೇಂದ್ರದಲ್ಲಿ ಶಾಲಾ ವಿದ್ಯಾಥರ್ಿಗಳಿಗಾಗಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಏಡ್ಸ್ ದಿನ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ರೋಗ, ಅದು ಹರಡುವ ಪ್ರಕ್ರಿಯೆ ಹಾಗೂ ಅದರ ಆಪತ್ತಿನ ಕುರಿತಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಅವಿನಾಶ ಕವಿ ಅವರು ಏಡ್ಸ್ರೋಗದ ಚಿಕಿತ್ಸಾಕ್ರಮ, ಹಾಗೂ ಅದನ್ನು ತಡೆಗಟ್ಟುವ ಕುರಿತಾಗಿ ತಿಳಿಸಿಕೊಟ್ಟರು.
ಮನೋವೈದ್ಯ ಶಾಸ್ತ್ರದ ಸ್ನಾತಕೋತ್ತರ ವಿದ್ಯಾಥರ್ಿಗಳಾದ ಡಾ.ರಾಮಕೃಷ್ಣ ಹಾಗೂ ಡಾ.ಅಕ್ಷಯ್ ನಾಯಕ್ ಈ ರೋಗದಿಂದ ಮನಸ್ಸಿನ ಮೇಲಾಗುವ ಪರಿಣಾಮ ಮತ್ತು ಆಪ್ತ ಸಮಾಲೋಚನೆಯ ಕುರಿತು ವಿದ್ಯಾಥರ್ಿಗಳಲ್ಲಿ ಅರಿವು ಮೂಡಿಸಿದರು. 'ವಿಶ್ವ ಏಡ್ಸ್ ದಿನ' ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಸಂಗೀತರವರು ವಹಿಸಿಕೊಂಡಿದ್ದರು. ಸ್ನಾತಕೋತ್ತರ ವಿದ್ಯಾಥರ್ಿ ಡಾ.ಜ್ಯೋತಿ ಸಿಂಗ್, ಅಶೋಕ್ ನಗರ ಕನ್ನಡ ಶಾಲೆಯ ಶಿಕ್ಷಕಿಯಾದ ಮೂಲಿಮನಿ, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಪುಷ್ಪರಾಜ್ ಅವರು ಪ್ತಾಸ್ತಾವಿಕ ನುಡಿಗಳನ್ನಾಡಿ ಸ್ವಾಗತ ಕೋರಿದರು. ಹಾಗೂ ಡಾ. ಹರ್ಷವರ್ಧನ್ ಅವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು.