ಮತ್ತೆ ಓರ್ವ ಪೊಲೀಸ್ ಸಿಬ್ಬಂದಿ ಕೋವಿಡ್ನಿಂದ ಗುಣಮುಖ

ಬಾಗಲಕೋಟೆ 09: ಮುಧೋಳನ  ಓರ್ವ ಪೊಲೀಸ್ ಸಿಬ್ಬಂದಿ ಕೋವಿಡ್ನಿಂದ ಗುಣಮುಖರಾಗಿದ್ದು, ಮೇ 9 ರಂದು ಸಂಜೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಪ್ರಮಾಣ ಪತ್ರ ನೀಡುವ ಮೂಲಕ ಬೀಳ್ಕೊಟ್ಟರು.

ನವನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮುಧೋಳನ 32 ವರ್ಷದ ಪೊಲೀಸ್ ಸಿಬ್ಬಂದಿ ಪಿ-372 ಕೋವಿಡನಿಂದ ಗುಣಮುಖರಾದವರು. ಜಿಲ್ಲೆಯಲ್ಲಿ ಇಲ್ಲಿವರೆಗೆ ಗುಣಮುಖರಾಗದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಜವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  

ಜಿಲ್ಲೆಯ ಮತ್ತೆ 44 ಸ್ಯಾಂಪಲ್ಗಳ ವರದಿ ನೆಗಟಿವ್ ವರದಿಯಾಗಿದ್ದು, ಇನ್ನು 90 ಸ್ಯಾಂಪಲ್ಗಳ ವರದಿ ಬರಬೇಕಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದವರು 938, ಇನ್ಸಿಟ್ಯೂಟ್ ಕ್ವಾರಂಟೈನ್ನಲ್ಲಿ ನಿಗಾದಲ್ಲಿ ಇದ್ದವರು 327, ಇಲ್ಲಿವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 4158, ಈ ಪೈಕಿ 4006 ನೆಗಟಿವ್ ಪ್ರಕರಣ, 51 ಪಾಜಿಟಿವ್ ಪ್ರಕರಣ, ಒಂದು ಮೃತ ಪ್ರಕರಣಗಳು ವರಿಯಾಗಿವೆ. 6 ಸ್ಯಾಂಪಲ್ಗಳು ರಿಜೆಕ್ಟ ಆಗಿದ್ದು, ಇನ್ನು 31 ಜನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಒಟ್ಟು ಕಂಟೈನ್ಮೆಂಟ್ ಝೋನಗಳು 12 ಇವೆ. ಇಲ್ಲಿಯವರೆಗೆ ಒಟ್ಟು 198 ಜನ 28 ದಿನಗಳ ಕ್ವಾರಂಟೈನ್ನಿಂದ ಬಿಡುಗಡೆ ಹೊಂದಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.