ರೈಲ್ವೆ ಯೋಜನೆಗಳನ್ನು ಪರೀಶೀಲಿಸಲು ರೈಲ್ವೆ ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಹುಬ್ಬಳ್ಳಿ 08 : ಮಾನ್ಯ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಮಾನ್ಯ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಕರ್ನಾಟಕ ಸರ್ಕಾರದ ಗೌರವಾನ್ವಿತ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಹುಬ್ಬಳ್ಳಿ-ಧಾರವಾಡ ಪ್ರದೇಶದ ರೈಲ್ವೆ ಯೋಜನೆಗಳ ಕುರಿತು ನೈಋತ್ಯ ರೈಲ್ವೆಯ ಪ್ರಧಾನ ಕಚೇರಿಯಲ್ಲಿ ಇಂದು ಪರೀಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ, ಮಾನ್ಯ ಶ್ರೀ ಅರವಿಂದ ಬೆಲ್ಲದ, ಹಾಗೂ ಮಾನ್ಯ ಶ್ರೀ ಎಂ.ಆರ್.ಪಾಟೀಲ್ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಹೊಸ ಮಾರ್ಗಗಳಾದ ಧಾರವಾಡ-ಬೆಳಗಾವಿ, ಹುಬ್ಬಳ್ಳಿ-ಅಂಕೋಲಾ, ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ,ಹಾಗೂ ರಸ್ತೆ ಮೇಲ್ಸೇತುವೆ(ಖಓಃ) ಮತ್ತು ರಸ್ತೆ ಕೆಳ ಸೇತುವೆಗಳ (ಖಗಃ) ನಿರ್ಮಾಣ ಮತ್ತು ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ (ಂಃಖಖ) ಅಡಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಯಾಣಿಕರ ಸೌಲಭ್ಯಗಳ ಹೆಚ್ಚಳ ಸೇರಿದಂತೆ ಪ್ರಮುಖ ಯೋಜನೆಗಳನ್ನು ಪರೀಶೀಲಿಸಲಾಯಿತು. ಹುಬ್ಬಳ್ಳಿ ಮತ್ತು ವಾರಣಾಸಿ ನಡುವೆ ವಾರಕ್ಕೆ ಒಂದು ಸಲ ಸಂಚರಿಸುವ ರೈಲು ಸೇವೆಯನ್ನು ವಾರಕ್ಕೆ ಎರಡು ಸಲ ಹೆಚ್ಚಿಸಲು ಮತ್ತು ಹುಬ್ಬಳ್ಳಿಯಿಂದ ಅಜ್ಮೀರ್, ಜೋಧಪುರ, ಅಹಮದಾಬಾದ ನಿಲ್ದಾಣಗಳಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಪರಿಚಯಿಸಲು ಮತ್ತು ಹುಬ್ಬಳ್ಳಿ ಸುತ್ತ ಮುತ್ತಲಿನ ಪ್ರದೇಶವನ್ನು ಹೊಂದಿರುವ ಅಣ್ಣಿಗೇರಿ, ಕುಂದಗೋಳ, ಸಂಶಿ, ಗುಡಿಗೇರಿ ಮತ್ತು ಧಾರವಾಡದಂತಹ ನಿಲ್ದಾಣಗಳೊಂದಿಗೆ ಸಂಪರ್ಕಿಸುವ ಸ್ಥಳೀಯ ಲೋಕಲ್ ಮೆಮು ರೈಲುಗಳನ್ನು ಪ್ರಾರಂಭಿಸಲು ಶ್ರೀ ಪ್ರಲ್ಹಾದ್ ಜೋಶಿ ಯವರು ಒತ್ತಾಯಸಿದರು.ದಾಂಡೇಲಿ ಮತ್ತು ಧಾರವಾಡ ನಡುವೆ ರೈಲು ಸೇವೆ ಆರಂಭಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.
ಭೂಸ್ವಾಧೀನ, ಡಿಪಿಆರ್, ಟೆಂಡರ್ ಪ್ರಗತಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಯೋಜನೆಗಳನ್ನು ಅವುಗಳ ಪೂರ್ವನಿರ್ಧರಿತ ಸ್ಥಿತಿಯೊಂದಿಗೆ ವಿವರವಾಗಿ ಚರ್ಚಿಸಲಾಯಿತು ಮತ್ತು ನಿಗದಿತ ಸಮಯದೊಳಗೆ ಆದ್ಯತೆಯ ಆಧಾರದ ಮೇಲೆ ಯೋಜನೆಗಳನ್ನು ಪೂರ್ಣಗೊಳಿಸಲು ಮಾನ್ಯ ಸಚಿವರು ಎಲ್ಲಾ ರೈಲ್ವೆ ಅಧಿಕಾರಿಗಳಿಗೆ ಸಲಹೆ ನೀಡಿದೆ. ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಅಡತಡೆಗಳನ್ನು ನಿವಾರಿಸುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಶ್ರೀ ಕೆ.ಎಸ್.ಜೈನ್, ಹುಬ್ಬಳ್ಳಿ ವಿಭಾಗದ ಡಿಆರ್ ಎಂ ಶ್ರೀ ಹರ್ಷ್ ಖರೆ, ನೈಋತ್ಯ ರೈಲ್ವೆ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಧಾರವಾಡ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಾ ಪ್ರಭು, ಕೆಐಎಡಿಬಿ ಅಧಿಕಾರಿಗಳು ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.