ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ ಅವರಿಗೆ ಮನವಿ
ಹಾವೇರಿ 17 :ಜಿಲ್ಲೆಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಹಾಗೂ ಶೌಚಾಲಯ ಶುಲ್ಕಗಳನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಪಡೆಯುತ್ತಿರುವದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ವಾಯುವ್ಯ ರಸ್ತೆ ಸಾರಿಗೆ ನಿಗಮದ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿದರು. ಬಸ್ ನಿಲ್ದಾಣಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ಪಾರ್ಕಿಂಗ್ ನಿಲುಗಡೆ,ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿರುವ ಇರುವವರ ಬಗ್ಗೆ ಮೊನ್ನೆಯ ದಿನ ಉಪಲೋಕಾಯುಕ್ತರು ಪರೀಶೀಲಿಸಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಸಹ ಸಂಬಂಧಿಸಿದ ಗುತ್ತಿಗೆದಾರರು ಲೋಕಾಯುಕ್ತ ಆದೇಶಕ್ಕೆ ಕ್ಯಾರೇ ಅನ್ನದೇ ಮತ್ತೆ ಹಳೆಯ ಚಾಳಿ ಮುಂದುವರೆಸಿ ಹೆಚ್ಚಿಗೆ ಶುಲ್ಕ ಪಡೆಯುತ್ತಿದ್ದಾರೆ.ಕೂಡಲೇ ತಾವು ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳ ವಾಹನ ನಿಲುಗಡೆಯ ಗುತ್ತಿಗೆ ಪಡೆದ ಗುತ್ತಿಗೆದಾರರ ಅನುಮತಿ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಇದಕ್ಕೆಲ್ಲ ತಮ್ಮ ನಿಲ್ದಾಣ ಅಧಿಕಾರಿಗಳ ಬೆಂಬಲ ಇರುವುದು ಕಂಡು ಬರುತ್ತದೆ. ಶೌಚಾಲಯಗಳು ಸ್ವಚ್ಚತೆ ಇಲ್ಲದೇ ಇರುವುದರಿಂದ ಸಾರ್ವಜನಿಕರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ ಅನೇಕ ಬಸ್ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಇದ್ದರೂ ಸಾರ್ವಜನಿಕರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ತಮ್ಮ ನಿತ್ಯದ ಕೆಲಸಕ್ಕೆ ಹೋಗುತ್ತಿದ್ದಾರೆ.ಕೂಡಲೇ ತಾವು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಪ್ರತಿ ಬಸ್ ನಿಲ್ದಾಣಗಳಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ,ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ,ಜಿಲ್ಲಾ ಉಪಾಧ್ಯಕ್ಷರುಗಳಾದ ಫಕ್ಕೀರೇಶ ಕಟ್ಟಿಮನಿ ಮುಖಂಡರಾದ ಪರಶುರಾಮ ದುರಗಣ್ಣನವರ,ಮಾಲತೇಶ ಜಿ.ಕೆ.ಕುಮಾರ ಸುಳ್ಳನವರ,ಜಗದೀಶ ಮಲ್ಲಾಡದ,ವಿಜಯಕುಮಾರ ಹಿಡಿಯಾಲ.ದ್ಯಾಮಣ್ಣ ಮಲ್ಲಾಡದ.ಶೇಖಪ್ಪ ದೀಪಾವಳಿ ಇತರರಿದ್ದರು.