ಲೋಕದರ್ಶನ ವರದಿ
ಗದಗ 05: ತಂತ್ರಜ್ಞಾನದಲ್ಲಿ ಸಾಪ್ಟವೇರ್ನಷ್ಟು ಹಾಡರ್್ವೇರ್ಗೂ ಮಹತ್ವ ಇದ್ದು ಹಾಡರ್್ವೇರ್ ಹಾಗೂ ನೆಟ್ವಕರ್ಿಂಗ್ ಪರಿಣಿತರಿಗೆ ಉತ್ತಮವಾದ ಬೇಡಿಕೆ ಖಾಸಗಿ ಮತ್ತು ಸರಕಾರಿ ಅಂಗಸಂಸ್ಥೆಗಳಲ್ಲಿ ಇದೆ ಎಂದು ಪ್ರಾಚಾರ್ಯ ಪ್ರೋ. ಪ್ರೇಮಾನಂದ ರೋಣದ ಹೇಳಿದರು.
ನಗರದ ಎಸ್.ಎಂ.ಇ.ಎಸ್ ಸಂಸ್ಥೆಯ ಅಬ್ದುಲ್ ಕಲಾಂ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಾಡರ್್ವೇರ್ ಹಾಗೂ ನೆಟ್ವಕರ್ಿಂಗ್ ಉಚಿತ ಕಾಯರ್ಾಗಾರದಲ್ಲಿ ಅವರು ಮಾತನಾಡಿದರು, ಭಾರತದಲ್ಲಿಯೇ ಅತಿ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದ ಸಾಪ್ಟ್ವೇರ್ ಟೆಕ್ಕಿಗಳಿಗಿಂತ ಇಂದು ಹಾಡರ್್ವೇರ್ ಹಾಗೂ ನೆಟ್ವಕರ್ಿಂಗ್ ಎಂಜಿನಿಯರಿಗಳು ಪಡೆಯುತ್ತಿದ್ದಾರೆ. ಯಾವುದೇ ಒಂದು ತಂತ್ರಜ್ಞಾನ ತಯಾರಾದಾಗ ಅದು ಕಂಪ್ಯೂಟ್ರಿನ ದೈಹಿಕ ವ್ಯವಸ್ಥೆಯ ಮೇಲ್ ಕೆಲಸ ಮಾಡುತ್ತದೆ. ಒಂದು ವೇಳು ಕಂಪ್ಯೂಟರ್ ಅಥವಾ ಮೊಬೈಲ್ನ ಹಾಡರ್್ವೇರ್ ಪಾಟರ್್ಗಳು ಸರಿಯಾಗಿ ಸ್ಪಂದಿಸದೇ ಇದ್ದಲ್ಲಿ ಸಂಪೂರ್ಣ ಪ್ರೋಜೆಕ್ಟ್ ವಿಫಲಗೊಳ್ಳು ಸಾಧ್ಯತೆಗಳು ಇರುತ್ತವೆ ಅದಕ್ಕಾಗಿ ಇಂದಿಗೂ ಮಾರುಕಟ್ಟೆಯಲ್ಲಿ ಎರಡಕ್ಕೂ ಸಮನಾಗಿ ಬೇಡಿಕೆ ಇರುವುದನ್ನು ನಾವು ಕಾಣುತ್ತೇವೆ ಎಂದರು. ವಿದ್ಯಾಥರ್ಿ ತನ್ನ ಜೀವನದಲ್ಲಿ ಏನು ಕಲಿತಿದ್ದಾನೆ. ಎಷ್ಟು ಪದವಿಗಳನ್ನು ಹೊಂದಿದ್ದಾನೆ ಎಂಬುವುದು ಮುಖ್ಯವಲ್ಲ. ಅವನ ಪದವಿಯಲ್ಲಿ ವಿದ್ಯಾಥರ್ಿ ಪಡೆದುಕೊಂಡ ಜ್ಞಾನ ಎಷ್ಟು ಎಂಬುವು ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಕೀವಿ ಮಾತು ಹೇಳಿದರು.
ಆಡಳಿತಾಧಿಕಾರಿ ನಬಿ ಬದಾಮಿ ಮಾತನಾಡಿ, ವಿದ್ಯಾಥರ್ಿಗಳಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಬಹಳ ಮುಖ್ಯ. ನಿರಂತರ ಅಧ್ಯಯನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಯಾವುದೇ ಗುರಿ ತಲುಪಬೇಕಾದರೂ ಶ್ರದ್ಧೆ, ಸಂಯಮ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದರು. ನಂತರ ವಿದ್ಯಾಥರ್ಿಗಳಿಗೆ ಹಾಡರ್್ವೇರ್ ಹಾಗೂ ನೆಟ್ವಕರ್ಿಂಗ್ ಪರಿಣಿತರಿಂದ ಉಚಿತವಾಗಿ ತರಬೇತಿಯನ್ನು ನೀಡಲಾಯಿತು ಹಾಗೂ ಉದ್ಯೋಗಗಳನ್ನು ಹೇಗೆ ಸೃಷ್ಠಿಸಿಕೊಳ್ಳುವುದು ಎನ್ನುವುದರ ಕುರಿತು ತಿಳಿಸಲಾಯಿತು. ಈ ಸಂದರ್ಭದಲ್ಲಿ ಪ್ರೀಯಾ ಪಿ, ತೇಜಶ್ವಿನಿ ಎಸ್. ಗೌರಿ ಎಸ್, ಜಾಕ್ಲೀನ್ ಬಿ ಹಾಗೂ ಸಿಬ್ಬಂದಿ ವರ್ಗ ಇದ್ದರು.