ನಿರ್ದೇಶಕರಾಜಾರಾಮ್ ಪಾಸಲೆ ಅವರಿಗೆ ಸತ್ಕಾರ
ಸಂಬರಗಿ 10: ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ನಿರ್ದೇಶಕರಾಜಾರಾಮ್ ಪಾಸಲೆ ಅವರು ಸಂಘದನಿರ್ದೇಶಕರು ಆಯ್ಕೆಯ ನಂತರ ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ವಿಲಾಸ್ ಟೋಣೇ ಉಪಾಧ್ಯಕ್ಷ ಅಣ್ಣಪ್ಪ ಮಿಸಾಳ ಹಾಗೂ ಇನ್ನಿತರ ಸಂಚಾಲಕರು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ವಿಲಾಸ ಟೋಣೆ ಮಾತನಾಡಿ ಸಂಘದ ಅಭಿವೃದ್ಧಿಗಾಗಿ ಎಲ್ಲಾ ನಿರ್ದೇಶಕರು ಪ್ರಾಮಾಣಿಕವಾಗಿ ಸೇವೆ ಮಾಡಬೇಕು ರೈತರ ಅಭಿವೃದ್ಧಿಗಾಗಿ ಸರಕಾರದಿಂದ ವಿವಿಧ ಯೋಜನೆ ತಂದು ರೈತರಿಗೆ ತಲುಪಿಸುವ ಎಲ್ಲರ ಗುರಿ ಇರಬೇಕು.
ಸಂಘದ ಉಪಾಧ್ಯಕ್ಷ ಅಣ್ಣಪ್ಪ ಮೀಸಾಳ ಮಾತನಾಡಿ ಶಾಸಕ ಲಕ್ಷ್ಮಣ ಸವದಿ ಶಾಸಕ ರಾಜು ಕಾಗೆಇವರ್ ಮಾರ್ಗದರ್ಶನದಲ್ಲಿ ಸಂಘದಿಂದ ರೈತರಿಗೆ ಹಲವಾರು ಯೋಜನೆಗಳು ತಂದಿದ್ದಾರೆ ರೈತರಿಗೆ ಸಾಲವನ್ನು ಬಡ್ಡಿ ರಹಿತ್ ಯೋಜನೆಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿದ್ದಾರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದಿಂದ ಗ್ಯಾರಂಟಿ ಯೋಜನೆ ನಿಂದ ಬಡವರಿಗೆ ಅನುಕೂಲ ಆಗಿದ್ದು ಬಸ್ ಉಚಿತ ಪ್ರಯಾಣದಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಮಹಿಳೆಯರಿಗೆ ಅನುಕೂಲವಾಗಿದ್ದು ಉಚಿತ ಬಸ್ ಪ್ರಯಾಣವು ರಾಜ್ಯದ ಅನೇಕ ದೇವತೆಗಳ ದರ್ಶನಕ್ಕೆ ಮಹಿಳೆಯರಿಗೆ ಅನುವು ಮಾಡಿಕೊಟ್ಟಿದೆ ಈ ಭಾಗದ ಖೇಳೆಗಾಂವ ಬಸವೇಶ್ವರ ನೀರು ಸರಬರಾಜು ಯೋಜನೆಯು ವೇಗದಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಈ ಯೋಜನೆ ಪೂರ್ಣಗೊಂಡು ಈ ಕ್ಷೇತ್ರವನ್ನು ಸಂಪೂರ್ಣ ಬರ ಮುಕ್ತ ಹಾಗೂ ಹಸಿರು ಕ್ರಾಂತಿ ಮಾಡಲು ಉಭಯ ಶಾಸಕರ ಸಹಕಾರ ಮಹತ್ತರವಾಗಿದೆ ಎಂದರು.
ಸಂಘದ ನಿರ್ದೇಶಕ ತುಕಾರಾಮ ಶೇಳಕ್, ದೀಪಕ್ ಮಾಣಿ, ಪರಶುರಾಮ್ ನಾಟಿಕರ, ಅರುಣ್ ಟೋಣೆ, 369 ಧರ್ಮೋ ನರುಟೆ, ಟೋಪಾಜಿ ಅವಳೇಕರ, ಗೌರಕ್ಕಾ ವಿಠಲ ಗಸ್ತಿ, ಸುಷ್ಮಾ ಭಜರಂಗ ದೇವಮಾನಿ, ಸಾವಿತ್ರಿ ದತ್ತ ಅವಳೆಕರ ಅಬ್ದುಲ್ ಮುಲ್ಲಾ, ಅಮೃತ್ ಮೀಸಾಳ, ರಾಮಚಂದ್ರ ಟೋನಿ, ಸರ್ಜರಾವ ಮನೆ, ಬಾಬಾಸಾಹೇಬ್ ಅವಳೇಕರ್, ಕೊಂಡಿಬಾ ಮಿಸಾಳ, ಸುಖದೇವ ಕಂಠೇಕರ್ ಸೇರಿದಂತೆ ಗಣ್ಯರು ಸಂಘದ ಎಲ್ಲ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.