ಹಷರ್ಾ ಶುಗರ್ಸ್ ಪ್ರಾ.ಲಿ, ಭಾನುವಾರ ಚೊಚ್ಚಲ ಕಬ್ಬು ನುರಿಸುವ ಹಂಗಾಮು ಪ್ರಾರಂಭ

ಬೆಳಗಾವಿ28 : ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಸಕ್ಕರೆ ಕಾಖರ್ಾನೆ ಆರಂಭಗೊಂಡಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹಷರ್ಾ ಶುಗರ್ಸ್ ಪ್ರಾ.ಲಿ, ಭಾನುವಾರ ಚೊಚ್ಚಲ ಕಬ್ಬು ನುರಿಸುವ ಹಂಗಾಮು ಆರಂಭಿಸಿದೆ. 

ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ಹತ್ತಿರ ನೂರಕ್ಕೂ ಹೆಚ್ಚು ಎಕರೆ ವಿಶಾಲ ಪ್ರದೇಶದಲ್ಲಿ ನಿಮರ್ಿಸಲಾಗಿರುವ ಹಷರ್ಾ ಶುಗರ್ಸ್ನಲ್ಲಿ ಭಾನುವಾರ ಮುಂಜಾನೆಯಿಂದ ಹೋಮ, ಹವನ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಇದಾದ ಬಳಿಕ ಧಾಮರ್ಿಕ ಗುರುಗಳ ಸಮ್ಮುಖದಲ್ಲಿ ಧಾಮರ್ಿಕ ವಿಧಿ ವಿಧಾನಗಳೊಂದಿಗೆ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸವದತ್ತಿ, ಬೆಳಗಾವಿ ತಾಲೂಕು ಸೇರಿದಂತೆ ಜಿಲ್ಲೆಯ ಮುಖಂಡರು ಭಾಗವಹಿಸಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಭಿನಂದಿಸಿ ಹಾರೈಸಿದರು.

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ನಾನು ಒಬ್ಬ ರೈತನ ಮಗಳಾಗಿದ್ದೇನೆ. ರೈತರಿಗಾಗಿ ಏನಾದರೂ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಕನಸು ಕಂಡಿದ್ದೆ. ಈ ಕನಸು ಇಂದು ನನಸಾಗಿದೆ. ದೇವಿ ಯಲ್ಲಮ್ಮನ ಸನ್ನಿಧಿಯಲ್ಲಿ ಕಾಖರ್ಾನೆಯನ್ನು ಆರಂಭಿಸಿದ್ದೇನೆ. ಈ ಕಾಖರ್ಾನೆಯಲ್ಲಿ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈ ಕಾಖರ್ಾನೆಯಿಂದ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲತೆಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.

ಕಾಖರ್ಾನೆಯ ವ್ಯವಸ್ಥಾಪಕ ನಿದರ್ೇಶಕ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಾಖರ್ಾನೆ ಆರಂಭವಾದ ಮೊದಲ ಹಂಗಾಮಿನಲ್ಲಿ 6 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಾಖರ್ಾನೆಯಲ್ಲಿ ಉಪ ಉತ್ಪನ್ನಗಳನ್ನು ಹೆಚ್ಚಿಸಿ ಹಂತ, ಹಂತವಾಗಿ ಹೆಚ್ಚಿನ ಲಾಭ ಪಡೆದು ಅದರ ಲಾಭವನ್ನು ಕಬ್ಬು ಬೆಳೆಗಾರರಿಗೆ ನೀಡುತ್ತೆವೆ. ಕಾಖರ್ಾನೆಯ ಮೂಲಕ ರೈತರಿಗೆ ನ್ಯಾಯ ದೊರಕಿಸಿ ಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಸುತ್ತ ಮುತ್ತಲ್ಲಿನ ಭಾಗದ ರೈತರು ಕಾಖರ್ಾನೆಗೆ ಕಬ್ಬು ಪೂರೈಸಿ ರೈತರ ಹಿತೈಷಿಯಾಗಿರುವ ರೈತನ ಮಗಳಾಗಿರುವ ಹೆಬ್ಬಾಳಕರ ಅವರ ಉದ್ಯಮಕ್ಕೆ ಪ್ರೋತ್ಸಾಹಿಸಬೇಕು ಎಂದು ಚನ್ನರಾಜ ಹಟ್ಟಿಹೊಳಿ ರೈತರ ಸಮುದಾಯದಲ್ಲಿ ಮನವಿ ಮಾಡಿಕೊಂಡರು.