ಕಿರುಕುಳ: ಸಾರ್ವಜನಿಕರಿಂದ ಮೈಕ್ರೋಪೈನಾನ್ಸ್‌ ಸಿಬಂದಿ ತರಾಟೆಗೆ

Harassment: From the public to the microfinance team

ಕಿರುಕುಳ: ಸಾರ್ವಜನಿಕರಿಂದ ಮೈಕ್ರೋಪೈನಾನ್ಸ್‌ ಸಿಬಂದಿ ತರಾಟೆಗೆ  

ಜಮಖಂಡಿ  27: ಮೈಕ್ರೋಫೈನಾನ್ಸ ಸಿಬ್ಬಂದಿಯಿಂದ ನಿಲ್ಲದ ದಾದಾಗಿರಿ, ಸಾಲ ವಸೂಲಿಗೆ ಮನೆಮುಂದೆ ಕುಳಿತ ಸಿಬ್ಬಂದಿಗಳಿಂದ ಕಿರುಕುಳ, ಮೈಕ್ರೋಫೈನಾನ್ಸ ಸಿಬ್ಬಂದಿಗಳ ದಾದಾಗಿರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ಮುಂದಾಗಿದೆ. ಫೈನಾನ್ಸ ಸಿಬ್ಬಂದಿಯ ಕಿರುಕುಳದಿಂದಾಗಿ ಆತ್ಮ ಹತ್ಯೆ ಎಂತಹ ಪ್ರಕರಣಗಳು ನಡೆಯದಂತೆ ಕ್ರಮ ಜರುಗಿಸಲಾಗುತ್ತಿದೆ ಆದರೂ ನಗರದ ಅವಟಿಗಲ್ಲಿಯ ಮನೆಯೊಂದಕ್ಕೆ ಮೈಕ್ರೋಫೈನಾನ್ಸ ಸಿಬ್ಬಂದಿಗಳು ಆಗಮಿಸಿ ಸಾಲ ತುಂಬುವಂತೆ ಒತ್ತಾಯಿಸಿದ ಪ್ರಕರಣ ನಡೆದಿದೆ. 

ಮನೆಯಲ್ಲಿ ಗಂಡಸರು ಇಲ್ಲದ ಸಮಯದಲ್ಲಿ ಸಾಲ ವಸೂಲಾತಿಗೆ ಸಿಬ್ಬಂದಿಗಳು ಬಂದಿರುವದನ್ನು ಕಂಡು ಜನರು ಜಮಾಯಿಸಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಫೀಕ್‌ಬಾರಿಗಡ್ಡಿ ಅವರು ಸಾಲ ವಸೂಲಿಗೆ ದಬ್ಬಾಳಿಕೆ ಮಾಡಬೇಡಿ, ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿ ಎಂದರು. ಸಿಬ್ಬಂದಿಗಳು ಅವರ ಮಾತಿಗೆ ಕ್ಯಾರೆ ಮಾಡಲಿಲ್ಲ. ಫೈನಾನ್ಸನ ಮ್ಯಾನೇಜರ ಜತೆ ಫೋನ್‌ನಲ್ಲಿ ಮಾತನಾಡುವಂತೆ ಮುಖಂಡರಿಗೆ ತಿಳಿಸಿದ್ದಾರೆ.  

ನಂತರ ಮ್ಯಾನೇಜರ ಮುಖಂಡರ ಮಾತಿಗೂ ಗೌರವ ನೀಡದೇ ಸಂಭಾಷಣೆಯಲ್ಲಿ ತೊಡಗಿದಾಗಿ ಪ್ರಕರಣ ದಾಖಲಿಸುವದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಸಿಬ್ಬಂದಿಗಳು ಬಂದಿರುವದನ್ನು ನೋಡಿದ ತಕ್ಷಣ ಮ್ಯಾನೇಜರ ತನ್ನ ಮಾತಿನ ವರಸೆಯನ್ನು ಬದಲಿಸಿದರು. ಕ್ಷಮೆಕೋರಿ ಪ್ರಕರಣ ದಾಖಲಿಸದಂತೆ ಮನವಿ ಮಾಡಿದ ಘಟನೆ ನಡೆದಿದೆ. 

ಅವಟಿಗಲ್ಲಿಯ ನಿವಾಸಿ ಅಯೂಬ ಕಂಕಣವಾಡಿ ಎಂಬುವರ ಮನೆಗೆ ಸಾಲ ವಸೂಲಿಗೆ ಬಂದಿದ್ದ ಸಿಬ್ಬಂದಿಗಳು ಸಾರ್ವಜನಿಕರು ಹಾಗೂ ಮುಖಂಡರಿಂದ ಸಮಜಾಯಿಷಿ ಪಡೆದ ನಂತರ ಜಾಗಾ ಖಾಲಿ ಮಾಡಿದ್ದಾರೆ ಎಂದು ಸೈಯದ್ ಬಾಷಾ ತಿಳಿಸಿದ್ದಾರೆ. 

ಅಲ್ಲಿದ ಜನರು ದೂರು ದಾಖಲಿಸುವದಾಗಿ ತಿಳಿಸಿದ ನಂತರ ಮ್ಯಾನೇಜರ ಕ್ಷಮೆ ಯಾಚಿಸಿದ್ದಾರೆ. ನಗರದಲ್ಲಿ ಹಲವಾರು ಮಹಿಳೆಯರು ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದಿದ್ದು ಸಾಕಷ್ಟು ಬಾರಿ ಕಿರುಕುಳ ಅನುಭವಿಸಿದ್ದಾರೆ. ಕಳೆದ ತಿಂಗಳು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪೋಲಿಸ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡರಿಗೆ ಮನವಿಗಳನ್ನು ಸಲ್ಲಿಸಿದ್ದು ಆಗಿದೆ ಆದರೂ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಪ್ಪಿಲ್ಲ ಎಂದು ಅಲ್ಲಿ ಸೇರಿದ ಜನರು ಹೇಳಿದರು.