ಹರಪನಹಳ್ಳಿ: ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಸಬೇಕು ಪರಶುರಾಮಪ್ಪ ಕರೆ

ಲೋಕದರ್ಶನ ವರದಿ

ಹರಪನಹಳ್ಳಿ 22: ಜೂನ್ 25 ಮಂಗಳವಾರದಂದು ಬೆಳಿಗ್ಗೆ 10 ಘಂಟೆಗೆ ಬೆಂಗಳೂರಿನ ಫ್ರೀಡಂ ಪಾಕರ್್ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಹರಪನಹಳ್ಳಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಬೇಕು ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ನಿಚ್ಚವ್ವನಹಳ್ಳಿ ಪರಶುರಾಮಪ್ಪ ವಾಲ್ಮೀಕಿ ಸಮಾಜದ ಬಾಂಧವರಿಗೆ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜನಹಳ್ಳಿಯಿಂದ ರಾಜಧಾನಿಯವರೆಗೆ ಎಂಬ ಶೀರ್ಶಿಕೆಯಲ್ಲಿ  ಪರಿಶಿಷ್ಠ ಪಂಗಡಕ್ಕೆ (ಎಸ್ಟಿ) ಶೇ.7.5% ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ವಾಲ್ಮೀಕಿ ಮಹಾಸಂಸ್ಥಾನದ  ಪೀಠಾಧ್ಯಕ್ಷರಾದ ರಾಜನಹಳ್ಳಿ ಗುರುಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಕೈಗೊಂಡ ಪಾದಾಯಾತ್ರೆಗೆ ರಾಜ್ಯಾಂದ್ಯಾಂತ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದ್ದು ಹರಪನಹಳ್ಳಿ ತಾಲೂಕು ವಾಲ್ಮೀಕಿ ಸಮಾಜವು ಜೂನ್ 25 ಮಂಗಳವಾರದಂದು ಬೆಂಗಳೂರಿನ ಫ್ರೀಡಂ ಪಾಕರ್್ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ತಾ.ಪಂ.ಸದಸ್ಯರಾದ ಕಂಭಟ್ರಳ್ಳಿ ಬಸಣ್ಣ, ಸಿಂಗ್ರಳ್ಳಿ ನಾಗರಾಜ್, ಕಸವನಹಳ್ಳಿ ನಾಗೇಂದ್ರಪ್ಪ, ಗ್ರಾ.ಪಂ.ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಪುರಸಭೆ ಸದಸ್ಯರಾದ ವಕೀಲ ಟಿ.ವೆಂಕಟೇಶ್, ದ್ಯಾಮಜ್ಜಿ ರೊಕ್ಕಪ್ಪ, ವಾಲ್ಮೀಕಿ ಸಮಾಜದ ಮುಖಂಡರಾದ ಗಿಡ್ಡಳ್ಳಿ ನಾಗರಾಜ್, ಟಿ.ಹಾಲಪ್ಪ ತೆಲಿಗಿ, ಟಿ.ಯೊಗೀಶ್ ತೆಲಿಗಿ, ಇಟ್ಟಿಗುಡಿ ಅಂಜಿನಪ್ಪ, ನಾಗರಾಜ್ ಪಟ್ನಾಮದ, ಕೊರಶೆಟ್ಟಿ ಉಚ್ಚಂಗೆಪ್ಪ, ವಕೀಲರಾದ ಪ್ರಾಣೇಶ್, ನೀಲಗುಂದ ವಾಗೀಶ್, ನೀಲಗುಂದ ಮನೋಜ್ ಮತ್ತು ಆಲೂರು ಶ್ರೀನಿವಾಸ, ಬಾಣದ ಅಂಜಿನಪ್ಪ, ಘಾಟಿನ ರಾಜಪ್ಪ, ಮತ್ತು ತಾಲೂಕು ವಾಲ್ಮೀಕಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ರಾಮಪ್ಪ, ಮತ್ತಿತರರು ಉಪಸ್ಥಿತರಿದ್ದರು.