ಶುಭ ವಿವಾಹ
ಕೊಪ್ಪಳ 11: ನಗರದ ಸಾನಿಯಾ ಬೆಡ್ಡಿಂಗ್ ವರ್ಕ್ ಮತ್ತು ಫರ್ನಿಚರ್ ವರ್ಕ್ ಶಾಪಿನ ಮಾಲಕರಾದ ಮೈನೂ ಸಾಬ್ ಗಾದಿ ಇವರ ಮಗ ಮೊಮ್ಮದ್ ರಫಿ ಮತ್ತು ಹುಚ್ಚು ಸಾಬ್ ನದಾಫ್ ಮಗಳಾದ ಪ್ಯಾರಿ ಜಾನ್ ಇವರ ಶುಭ ವಿವಾಹ ಸೋಮವಾರ ಜರುಗಿದ್ದು, ಮಂಗಳವಾರ ಬಹದ್ದೂರ್ ಬಂಡಿ ಗ್ರಾಮದಲ್ಲಿ ಜರುಗಿದ ವಲಿಮಾ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಹನುಮಂತ ಹಳ್ಳಿಕೇರಿ ನೇತೃತ್ವದಲ್ಲಿ ಹಿರಿಯ ಪತ್ರಕರ್ತರಾದ ಎಚ್‌ಎಸ್ ಹರೀಶ್, ಎಂ ಸಾಧಿಕ್ ಅಲಿ, ರಾಜು ಬಿ ಆರ್ ಮತ್ತು ಪ್ರಭುಗಾಳಿ ಅಲ್ಲದೆ ಸಂತೋಷ್ ಮಹೇಂದ್ರಕರ್ ಪಾಲ್ಗೊಂಡು ನೂತನ ವಧು ವರರಿಗೆ ಶುಭ ಕೋರಿದರು.