ಆಂತರಿಕ ಪ್ರೇರಣೆಯಿಂದ ಸೇವೆ ಮಾಡಿದ್ದಲ್ಲಿ ಸಂತೋಷ: ಶೆಟ್ಟಿ

ಧಾರವಾಡ 08: ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ದಿ ಯೋಜನೆಯ ಆಶಯಗಳನ್ನು ಯಾವುದೇ ಲೋಪವಿಲ್ಲದೆ ಜನರಿಗೆ ತಲುಪಿಸುವಂತಹ ಸೇವೆಯನ್ನು ಸೇವಾಪ್ರತಿನಿಧಿಗಳು ಮಾಡಬೇಕು. ಸ್ವ ಇಚ್ಚೆಯಿಂದ ಸೇವಾ ಪ್ರೇರಣೆಯನ್ನು ಬೆಳೆಸಿಕೊಂಡು ಸೇವೆ ಮಾಡಿದರೆ ಸೇವೆಯಲ್ಲಿ ಸಂತೋಷ ಅನುಭವಿಸಬಹುದು ಎಂದು ಧಾರವಾಡ ಪ್ರಾದೇಶಿಕ ನಿದರ್ೇಶಕ ಸೀತಾರಾಮ ಶೆಟ್ಟಿಯವರು ಅಭಿಪ್ರಾಯಪಟ್ಟರು.

ರಾಯಪೂರದ ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಮತ್ತು ನವಲಗುಂದ ತಾಲೂಕಿನಲ್ಲಿ ಹೊಸದಾಗಿ ಯೋಜನೆಗೆ ಸೇವೆ ಸಲ್ಲಿಸಲು ಆಯ್ಕೆಯಾದ ಸೇವಾಪ್ರತಿನಿಧಿಗಳ ಪ್ರಥಮ ಹಂತದ ತರಬೇತಿ ಕಾರ್ಯಗಾರವನ್ನು ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿದರ್ೇಶಕಿ ಮನೋರಮಾ ಭಟ್ ಮಾತನಾಡಿ ಧರ್ಮಸ್ಥಳ ಯೋಜನೆಯಲ್ಲಿ ಸೇವೆ ಮಾಡುವ ಅವಕಾಶವನ್ನು ಪಡೆದುಕೊಂಡಂತಹ ಸೇವಾಪ್ರತಿನಿಧಿಗಳು ಮುಂದೊಂದು ದಿನ ಉತ್ತಮ ಪ್ರಜೆಯಾಗಿ ಗ್ರಾಮಗಳಲ್ಲಿ ಕುಟುಂಬಗಳನ್ನು ಅಭಿವೃದ್ಧಿ ಪಡಿಸಲು ನಾಯತ್ವದ ಗುಣವನ್ನು ಹೊಂದಿ ಹೊರಹೊಮ್ಮುತ್ತಾರೆ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯ ನಿದರ್ೇಶಕ ದಿನೇಶ್ ಎಮ್ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯರ ಕುಟುಂಬದ ಬಗ್ಗೆ ಕಿರು ಪರಿಚಯವನ್ನು ಮಾಡಿ ಗ್ರಾಮಾಭಿವೃದ್ಧಿ ಯೋಜನೆಯನ್ನು ಸಾಮಾನ್ಯ ಜನರ ಆಥರ್ಿಕ ಅಭಿವೃದ್ಧಿ, ವ್ಯವಹಾರ ಜ್ಞಾನ, ಮತ್ತು ಒಂದು ಕುಟುಂಬದ ಸವರ್ಾಂಗೀಣ ಉದ್ದೇಶದಿಂದ ಈ ಯೋಜನೆಯನ್ನು ಹುಟ್ಟು ಹಾಕಿದರು. ಸೇವಾ ಪ್ರತಿನಿಧಿಗಳು ಸೇವಾ ಮನೋಭಾವನೆಯಿಂದ ಯೋಜನೆಯ ಕಾರ್ಯಕ್ರಮಗಳನ್ನು ಸಾಮಾನ್ಯ ಜನರಿಗೆ ಅಚ್ಚುಕಟ್ಟಾಗಿ ತಲುಪಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಧಾರವಾಡ ತಾಲೂಕಿನ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ರವರು ಸೇವಾಪ್ರತಿನಿಧಿಗಳಿಗೆ ಸ್ವ-ಸಹಾಯ ಸಂಘ, ಪ್ರಗತಿಬಂಧು, ಜ್ಞಾನ ವಿಕಾಸ ಗುಂಪುಗಳ  ಮಹತ್ವ ಹಾಗೂ ಯೋಜನೆಯ ಸೇವಾಪ್ರತಿನಿಧಿಯಾಗಿ ಜನರೊಂದಿಗೆ ವ್ಯವಹರಿಸುವ ರೀತಿ, ಕರ್ತವ್ಯದಲ್ಲಿ ವಹಿಸಬೇಕಾದ ಕಾಳಜಿಯ ಬಗ್ಗೆ ಹಾಗೂ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ಹುಬ್ಬಳ್ಳಿ ತಾಲೂಕಿನ ಯೋಜನಾಧಿಕಾರಿ ಮಂಜುನಾಥ ನಾಯ್ಕ್ ಅವರು ಸ್ವ-ಸಹಾಯ ಸಂಘಗಳ ಗುಣ ಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಹಾಗೂ ಪ್ರತಿ ತಂಡದ ವಾರದ ಸಭೆಯಲ್ಲಿ  ದಾಖಲಾತಿಗಳ ಪರೀಶಿಲನೆ, ಶಿಸ್ತು ಬದ್ಧ ವ್ಯವಹಾರವನ್ನು ನಡೆಸಿಕೊಂಡು ಹೊಗುವ ಬಗ್ಗೆ ಮಾಹಿತಿಯನ್ನು ನೀಡಿದರು.

 ಜಿಲ್ಲೆಯ ಯೋಜನಾಧಿಕಾರಿ ವನಿತಾ ಸಂಘಗಳು ಮಾಡುವ ಆಥರ್ಿಕ ವ್ಯವಹಾರ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಧಾರವಾಡ ಪ್ರಾದೇಶಿಕ ಕಛೇರಿಯ ಆಡಳಿತ ಯೋಜನಾಧಿಕಾರಿ ನಾರಾಯಣ ಪಾಲನ್ ಅವರು ಯೋಜನೆಯಲ್ಲಿ ಸೇವೆ ಸಲ್ಲಿಸುವಾಗ ಅನುಷ್ಠಾನ ಮಾಡಬೇಕಾದ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಹಣಕಾಸು ಪ್ರಬಂಧಕ ಶೇಖರ್ ನಾಯ್ಕ್, ಉಮೇಶ್ ಇತರರು ಉಪಸ್ಥಿತರಿದ್ದರು.