ಸಕಾರಾತ್ಮಕ ಗುಣ ಹಾಗೂ ಸಕ್ರೀಯತೆಯಿಂದ ಮನೋಲ್ಲಾಸ ಸಾಧ್ಯ : ಡಾ. ಸುವರ್ಣಾ ನಿಡಗುಂದಿ

Happiness is possible with positive qualities and activity: Dr. Suvarna Nidgundi

ಸಕಾರಾತ್ಮಕ ಗುಣ ಹಾಗೂ ಸಕ್ರೀಯತೆಯಿಂದ ಮನೋಲ್ಲಾಸ ಸಾಧ್ಯ  : ಡಾ. ಸುವರ್ಣಾ ನಿಡಗುಂದಿ  

 ಗದಗ 11 : ನಮ್ಮ ನಕಾರಾತ್ಮಕ ಗುಣಗಳು ಹಾರ್ಮೋನ್‌ಗಳ ಸ್ರವಿಸುವಿಕೆಯನ್ನು ನಿಷ್ಕ್ರಿಯಗೊಳಿಸುತ್ತವೆ. ಅದು ಅನೇಕ ವ್ಯಾದಿಗಳಿಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ನಾವು ಯಾವಾಗಲೂ ಸಕಾರಾತ್ಮಕ ಗುಣಗಳನ್ನು ಹೊಂದಿ ಸಕ್ರಿಯವಾಗಿ ಎಲ್ಲದರಲ್ಲೂ ಪಾಲ್ಗೊಳ್ಳುವುದರಿಂದ ನಮ್ಮ ಮನಸ್ಸು ಯಾವಾಗಲೂ  ಪ್ರಫುಲ್ಲಿತವಾಗಿರುತ್ತದೆ ಎಂದು ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿಯರಾದ ಡಾ. ಸುವರ್ಣಾ ನಿಡಗುಂದಿಯವರು ಹೇಳಿದರು.  ನಗರದ  ಕರಿಯಮ್ಮ ದೇವಿ ಮಹಿಳಾ ಮಂಡಳವು ಆಚರಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿ,  ಮಹಿಳೆಯು ತನ್ನ ದೈನಂದಿನ ಎಲ್ಲಾ ಚಟುವಟಿಕೆಯಲ್ಲಿ ತನ್ನ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ ಮುಂದೆ ಬರಬಹುದಾದ ಅನೇಕ ಕಾಯಿಲೆಗಳನ್ನು ದೂರವಿಡಬಹುದು. ಪ್ರಸನ್ನ ಚಿತ್ತ ಮನಸ್ಸು ಸದಾ ಚೈತನ್ಯವಿರುವಂತೆ ಮಾಡುತ್ತದೆ ಎಂದು ಹೇಳುತ್ತಾ ಕೆಲವು ಆರೋಗ್ಯ ಸಲಹೆಗಳನ್ನು ನೀಡಿದರು. ಸಂಘದ ಕಾರ್ಯದರ್ಶಿಗಳಾದ ಅನಿತಾ ಜಕಬಾಳ ಅವರು ಪ್ರಸ್ತಾವಿಕವಗಿ ಮಾತನಾಡಿ,  ಒಂದು ಮಗುವನ್ನು ಸತ್ಪ್ರಜೆಯನ್ನಾಗಿ ಮಾಡುವಲ್ಲಿ ತಾಯಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.  ಡಾ. ಸಂಗೀತಾ ಹುಡೇದ ಅವರು ಮಾತನಾಡಿ,  ಮಹಿಳೆಯು ಮಾತೃತ್ವ, ನೇತೃತ್ವ ಹಾಗು ಕರ್ತೃತ್ವ ಎಂಬ ತತ್ವದ ಅಡಿಯಲ್ಲಿ ತನ್ನನ್ನು ತಾನು ನಿರೂಪಿಸುತ್ತಾ ಬಂದಿದ್ದಾಳೆ ಹಾಗೂ ಯಶಸ್ಸಿನ ಮುಂಚೂಣಿಯಲ್ಲಿ ನಿಂತಿದ್ದಾಳೆ ಎಂದು ಹೇಳಿದರು.  ಅಧ್ಯಕ್ಷತೆ ವಹಿಸಿ ಮಾತನಾಡಿದ ರೇಣುಕಾ ಕೇಸರಿಯವರು ಸಂಘದ ಸದಸ್ಯರ ಸಹಕಾರವು ಸಂಘಟನೆಯ ಬಲವರ್ಧನೆ ಕಾರಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮವು ಅನ್ನಪೂರ್ಣಾ ಹುಳ್ಳಿ, ಪುಷ್ಪಲತಾ ಚಿಕ್ಕನ್ನವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ತನುಜಾ ಗೋವಿಂದಪ್ಪನವರ  ಸ್ವಾಗತಿಸಿದರು.  ಲಕ್ಷ-್ಮವ್ವ ಕುರಿಯವರು ಪುಷ​‍್ಾರೆ್ಪಣಗೈದರು. ಶ್ರೀದೇವಿ ಗುಡ್ಲಾನೂರ ವಂದಿಸಿದರು. ನಿರ್ಮಲಾ ಹವಳನ್ನವರ ನಿರೂಪಿಸಿದರು. ಅನ್ನಪೂರ್ಣಾ ದೇವರವರ ಹಾಗೂ ಅಕ್ಕಮಹಾದೇವಿ ಕಳ್ಳಿಯವರು ಊಟದ ನಿರ್ವಹಣೆ ಮಾಡಿದರು.