ಮಾ.9 ರಂದು ಹನುಮಂತಪ್ಪ ಅಂಡಗಿ ನುಡಿ ನಮನ ಕಾರ್ಯಕ್ರಮ
ಕೊಪ್ಪಳ 17: ತಾಲೂಕಿನ ಹಿರೇಸಿಂದೋಗಿ ಗ್ರಾಮದ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯರರು ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದ ದಿ.ಡಾ.ಹನುಮಂತಪ್ಪ ಅಂಡಗಿ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಮಾರ್ಚ 9 ರಂದು ನಗರದ ಸರಕಾರಿ ನೌಕರರ ಸಂಘದಲ್ಲಿ ಇರುವ ಸಾಂಸ್ಕೃತಿಕ ಭವನದಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ನುಡಿ ನಮನ ಕಾರ್ಯಕ್ರಮ ಹಾಗೂ ಅದರ ಜೊತೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುವ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಸಮಯದಲ್ಲಿ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಸಾವಿತ್ರಿ ಮುಜುಮದಾರ ಹಾಗೂ ಕಲಬುರಗಿ ವಿಶ್ವವಿದ್ಯಾನಿಯದ ಪ್ರಸಾರರಂಗ ವಿಭಾಗದಿಂದ ರಾಜೋತ್ಸವ ಪ್ರಶಸ್ತಿ ಪಡೆದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ,ಅಲ್ಲಮಪ್ರಭು ಬೆಟ್ಟದೂರು,ವಿಜಯ ಅಮೃತರಾಜ,ಫಕೀರ್ಪ ವಜ್ರಬಂಡಿ,ಸುರೇಶ ಕಂಬಳಿ,ಮಂಜುನಾಥ ಗೊಂಡಬಾಳ, ರವಿ ಕಾಂತನವರ,ನೌಕರರ ಸಂಘದ ನಿರ್ದೇಶಕರಾದ ಶರಣಪ್ಪ ರಡ್ಡೇರ,ಗೋಪಾಲ ದುಬೆ,ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹನುಮಂತಪ್ಪ ಕುರಿ,ಮಲ್ಲಪ್ಪ ಗುಡದನ್ನವರ,ಇರಕಲ್ಲಗಡ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ,ಮಲ್ಲಿಕಾರ್ಜುನ ಹ್ಯಾಟಿ,ಈರ್ಪ ಸಂಗಮೇಶ್ವರ,ಶಿವಶಂಕರ ಗುಡದನ್ನವರ,ಶಿವಪ್ಪ ಹಡಪದ ಮುಂತಾದವರು ಹಾಜರಿದ್ದರು ಎಂದು ಅವರ ಸಹೋದರ ಬೀರ್ಪ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.