ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಮ್ಜಾ ನದಾಫ್ ಅವರಿಗೆ ಸನ್ಮಾನ

ವಿವಿಧ ಜಿಲ್ಲೆಗಳ ಮುಖ್ಯಸ್ಥರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಮ್ಜಾ ನದಾಫ್ ಅವರಿಗೆ ಸನ್ಮಾನ  

ಕೊಪ್ಪಳ 27: ನಗರದ ಸರದಾರದಲ್ಲಿ ಪಂಚ್ ಕಮಿಟಿ ವತಿಯಿಂದ ಹಜರತ್ ಮಹಬೂಬ ಸುಭಾನಿ ಗ್ಯಾರವಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಿದ 12 ಜೋಡಿಗಳ ಸಾಮೂಹಿಕ ವಿವಾಹ ನಿಖಾ ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವೃತ್ತಿ ಶಿಕ್ಷಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಗೊಂಡ ಪ್ರಶಸ್ತಿ ಪುರಸ್ಕೃತ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್ ರವರಿಗೆ ಮುಸ್ಲಿಂ ಪಂಚ್ ಕಮಿಟಿ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. 

ಸದರಿಯವರು ವೃತ್ತಿ ಶಿಕ್ಷಣ ಕ್ಷೇತ್ರ ಸಾಮಾಜಿಕ ಕ್ಷೇತ್ರ ದಲ್ಲಿನ ಉತ್ತಮ ಸೇವೆ ಗಾಗಿ ಇವರಿಗೆ ವಿವಿಧ ಪ್ರಶಸ್ತಿ ಲಭಿಸಿರುವುದು ನಮ್ಮೆಲ್ಲರಿಗೆ ಹರ್ಷ ಉಂಟು ಮಾಡಿದೆ ಎಂದು ಕಾಲೇಜಿನ ಉಪ ಪರಾಚಾರ್ಯರಾದ ಎಂಎ ಖಯ್ಯುಮ್ ಮತ್ತು ಸಹ ಶಿಕ್ಷಕರ ಬಳಗ ದವರು ಹರ್ಷ ವ್ಯಕ್ತಪಡಿಸಿ ಮುಂಬರುವ ದಿನಗಳಲ್ಲಿ ಇವರಿಗೆ ಇನ್ನೂ ಉತ್ತಮ ಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಶುಭ ಹಾರೈಸಲಾಯಿತು, ಈ ಸಂದರ್ಭದಲ್ಲಿ ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷರಾದ ಖಾದರ್ ಸಾಬ್ ಕುದುರೆಮೋತಿ ಗೌರವಾಧ್ಯಕ್ಷರಾದ ಶಾಬೂದ್ದೀನ್ ಸಾಬ್ ನೂರ್ ಭಾಷಾ ಕಾರ್ಯದರ್ಶಿ ಎಮ್ ಪಾಶಾ ಮಾನ್ವಿ ಮುಸ್ತಫ ಕುದುರೆಮೋತಿ ಗೌಸ ಸಾಬ್ ಸರ್ದಾರ್, ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ಪದಾಧಿಕಾರಿಗಳು ವಿವಿಧ ಜಿಲ್ಲೆಗಳ ಮುಖ್ಯಸ್ಥರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.