'ಹಂಪಿ ಉತ್ಸವಕ್ಕೆ ಹೆಚ್ಚಿನ ಮಹತ್ವ ನೀಡಿ'

ಲೋಕದರ್ಶನ ವರದಿ

ಗದಗ 01: ಹಂಪಿ ಉತ್ಸವಕ್ಕೆ ಗದಗನ ವಾಟಾಳ್ ಸಂಘಟನೆಯ ಬೆಂಬಲ. ಅಲ್ಲಿಗೆ  ಆಗಮಿಸಿದ್ದ ಕನ್ನಡ ಚಳುವಳಿ ವಾಟಾಳ್ ಸಂಘಟನೆಯ ರಾಜ್ಯಾಧ್ಯಕ್ಷರಾದ ವಾಟಾಳ್ ನಾಗರಾಜ ಅವರು ಹಂಪಿ ಉತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದು ವಾಟಾಳ್ ನಾಗರಾಜ ಅವರು ಹಂಪಿಯಲ್ಲಿ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರೊಂದಿಗೆ ಸುದ್ದಿಗೋಷ್ಟಿ ನಡೆಸಿದರು. 

ಮೈಸೂರು ದಸರಾಕಿಂತಲೂ ಪ್ರಾಚೀನ ಇತಿಹಾಸ ವಿರುವ ಹಂಪಿಯ ಉತ್ಸವಕ್ಕೆ ಹೆಚ್ಚಿನ ಮಹತ್ವ ಕೊಡಿ ಎಂಬುದು ನಮ್ಮ ಉದ್ದೇಶ ಬರಗಾಲದ ನೆಪ ಹೇಳಿ ಕನರ್ಾಟಕ ಸರಕಾರ 9 ದಿನದ ಉತ್ಸವವನ್ನು 6 ದಿನ 3 ದಿನ ಎಂದು ಇಳಿಕೆ ಮಾಡುತ್ತಾ ಸರಕಾರ ಉತ್ಸವ ಮಾಡುತ್ತೇನೆಂದರೆ ನಾವು ಕೇಳುವುದಿಲ್ಲ. ಚಳುವಳಿ ಮಾಡುತ್ತೇವೆ ಉರುಳು ಸೇವೆಯ ಮುಖಾಂತರ ಸರಕಾರವನ್ನು ಎಚ್ಚರಿಸುತ್ತೇವೆ ಬಹಳ ಕಳಕಳಿ ಮಾಡುತ್ತೇನೆ ಸರಕಾರ ಕಾಟಾಚಾರಕ್ಕೆ ಉತ್ಸವಗಳು ಮಾಡುವುದು ನಮಗೆ ಬೇಕಿಲ್ಲ ಬರಗಾಲದ ನೆಪ ಹೇಳಿ ಊಟ, ಊಪಹಾರ ನಿಲ್ಲಿಸುತ್ತೇವೆಯೇ ಇಲ್ಲವಲ್ಲ ವಿಶೇಷ ಪ್ಯಾಕೇಜ್ ಮಾಡಿ ವೈಭವದ ಮೆರವಣಿಗೆ ಆಗಬೇಕೆಂಬುದು ನಮ್ಮ ಬಯಕೆ ಇಲ್ಲವಾದಲ್ಲಿ ರಾಜ್ಯಾದ್ಯಂತ ಚಳುವಳಿ ಮಾಡುತ್ತೇವೆ. ಬೆಂಗಳೂರಿನಿಂದ ಹಂಪಿಗೆ ಬಂದಿರುವ ಉದ್ದೇಶ ಉತ್ಸವವನ್ನು ಅದ್ದೂರಿಗೊಳಿಸಬೇಕೆಂಬುದಕ್ಕೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷರು ಮಾತನಾಡಿದರು. ಇದೆ ಸಂದರ್ಭದಲ್ಲಿ ಗದಗ ಜಿಲ್ಲೆಯ ಕನ್ನಡ ಚಳುವಳಿ ವಾಟಾಳ್ ಸಂಘಟನೆಯ ಗದಗ ಜಿಲ್ಲಾ ಅಧ್ಯಕ್ಷರಾದ ರಾಜು ಎಫ್ ಪೂಜಾರ ಮತ್ತು ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಎಸ್ ಶಾಂತಗೇರಿ ಮತ್ತು ಗದಗ ಜಿಲ್ಲಾ ಸಂಘಟನೆಯ ಸದಸ್ಯರು ಭಾಗಿಯಾಗಿ ರಾಜ್ಯ ಅಧ್ಯಕ್ಷರಿಗೆ ಬೆಂಬಲ ಘೋಷಿಸಿದರು.