ಹಜ್ ಯಾತ್ರೆಯ ಯಾತ್ರಾರ್ಥಿಗಳ ತರಬೇತಿ ಶಿಬಿರ

Hajj pilgrims' training camp

ಹಜ್ ಯಾತ್ರೆಯ ಯಾತ್ರಾರ್ಥಿಗಳ ತರಬೇತಿ ಶಿಬಿರ 

ಹೊಸಪೇಟೆ, 08 : ದಿನಾಂಕ 10/4/2025ರಂದು ನೆಡೆಯುವ 6 ಜಿಲ್ಲೆಗಳ ಹಜ್ ಯಾತ್ರೆಯ  ಯಾತ್ರಾರ್ಥಿಗಳ ತರಬೇತಿ ಶಿಬಿರಕ್ಕೆ ಆಗಮಿಸಲು ತಮಗೆ ಆಹ್ವಾನ ನೀಡುವ ಕುರಿತು.ಗೌರವಾನ್ವಿತರಾದ ತಮಗೆ ಹಜ್ ತರಬೇತಿ ಶಿಬಿರ ಸಮಿತಿಯು ಸವಿನಯ ಮನವಿ ಮಾಡುವುದೇನೆಂದರೆ ದಿನಾಂಕ ವಿಷಯ 10/4/2025ರಂದು ಹೊಸಪೇಟೆ ನಗರದ ಬಸವೇಶ್ವರ ವೃತ್ತದಲ್ಲಿರುವ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ಹೊಸಪೇಟೆಯ ನಮ್ಮ ನಾಡಿನ ಆರು ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ರಾಯಚೂರು, ಹಾಗೂ ಗದಗ ಜಿಲ್ಲೆಗಳಿಂದ ಕರ್ನಾಟಕ ರಾಜ್ಯ ಹಜ್ ಕಮಿಟಿಯು ಆಯ್ದ ಹಜ್ ಯಾತ್ರೆಯ ಯಾತ್ರಾದಿಗಳಿಗೆ ಧಾರ್ಮಿಕ ಶಿಸ್ತು, ಸಂಯಮ, ಸೌಹಾರ್ದತೆಗಳಿಗೆ ಸಂಬಂಧಿಸಿದಂತೆ ಅರ್ಥಪೂರ್ಣ ತರಬೇತಿ ಶಿಭಿರವೊಂದನ್ನು ಸಮಿತಿಯು ಆಯೋಜಿಸಿದೆ. ಈ ಪ್ರಯುಕ್ತ ಮಹತ್ವವಾದ ತರಬೇತಿ ಶಿಬಿರಕ್ಕೆ ಕಾರ್ಯಕ್ರಮವನ್ನು ವರದಿ ಮಾಡಲು ಗೌರವಾನ್ವಿತರಾದ ತಾವುಗಳು ದಿನಾಂಕ 10/4/2025 ರಂದು ಬೆಳಗ್ಗೆ 8 ಗಂಟೆಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ  ಸ್ವಾಗತ ಕೋರುವವರು :- ಹೆಚ್‌. ಎನ್ ಮೊಹಮ್ಮದ್ ಇಮಾಮ್ ನಿಯಾಜಿ, ಅಧ್ಯಕ್ಷರು, ಹಜ್ ತರಬೇತಿ ಶಿಬಿರ, ಹೊಸಪೇಟೆ, ಹಾಗು ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು, ಹಾಗು ಅಧ್ಯಕ್ಷರು, ಅಂಜುಮನ್ ಖಿದ್ಮತೆ ಈ ಇಸ್ಲಾಂ ಸಮಿತಿ, ಹೊಸಪೇಟೆ, ವಿಜಯನಗರ ಜಿಲ್ಲೆ.