ಕತ್ತಲಲಿದ್ದವರಿಗೆ ಬೆಳಕು ನೀಡಿದ ಹೆಸ್ಕಾಂ ಅಧ್ಯಕ್ಷ ಖಾದ್ರಿ

HESCOM Chairman Qadri gave light to those who were in darkness

ಕತ್ತಲಲಿದ್ದವರಿಗೆ ಬೆಳಕು ನೀಡಿದ ಹೆಸ್ಕಾಂ ಅಧ್ಯಕ್ಷ ಖಾದ್ರಿ 

ಶಿಗ್ಗಾವಿ 16: ಸುಮಾರು 20-25 ವರ್ಷಗಳಿಂದ ಬೆಳಕೆ ಕಾಣದ ಅಲೆಮಾರಿ ಜನಾಂಗ ವಾಸಿಸುವ ಪ್ರದೇಶಕ್ಕೆ ಇಂದು ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ದ್ವೀಪಗಳನ್ನು ಬೆಳಗಿಸುವ ಮೂಲಕ ಇವರ ಕತ್ತಲೆಯ ಬದುಕಿಗೆ ಬೆಳಕು ನೀಡಿರುವದು ಸಂತೋಷ ತಂದಿದೆ ಎಂದು ಹೆಸ್ಕಾಂ ಆಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು. 

ಪಟ್ಟಣದ ಮಾರುತಿ ನಗರದಲ್ಲಿ ಅಲೆಮಾರಿ ಜನಾಂಗದವರು ವಾಸಿಸುವ ಪ್ರದೇಶಕ್ಕೆ ಹೆಸ್ಕಾಂ ಇಲಾಖೆಯಿಂದ ಹಮ್ಮಿಕೊಂಡ ವಿದ್ಯುತ್ ದ್ವೀಪ ಬೆಳಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಲ್ಲಿ ವಾಸಿಸಿರುವ ಎಲ್ಲರಿಗೂ ಮೂಲಭೂತ ಸೌಲಭ್ಯಗಳು ಸಿಗಬೇಕು ಆ ನಿಟ್ಟಿನಲ್ಲಿ ಇಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ವಿದ್ಯುತ್ ಸಂಪರ್ಕ, ಹಾಗೂ ಸಾರ್ವಜನಿಕ ನಳ ಹಾಕಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ, ಈ ವಾಸಿಸುವವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿದ್ದಾರೆ ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕಿದೆ, ಸಿ ಎಂ ಸಿದ್ದರಾಮಯ್ಯನವರು ಕತ್ತಲಲ್ಲಿರುವವರಿಗೆ ಬೆಳಕು ನೀಡು ಎಂದು ಈ ಜವಾಬ್ದಾರಿ ನೀಡಿದ್ದಾರೆ ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ರವಿ ಕೋಣಪ್ಪನವರ, ಅಶೊಕ ಗೊಂದಿ, ಕಿರಣ ಸುಬರಗಟ್ಟಿ, ಗಣಪತಿ ಹಿರಳ್ಳಿ, ರುದ್ರೇಶ ಗುಡಗೇರಿ, ಗಂಗಾಧರಯ್ಯ ಕಲ್ಮಠ, ಎಂ ಸುಭಾನಿ, ಅಣ್ಣಪ್ಪ ನಡಟ್ಟಿ, ಮಹ್ಮದ್ ಅನೀಪ ಅಂಬೂರ, ಸಿ ವಿ ಸಿಕ್ಕಮಠ, ಸಲೀಂ ಫಾರೋಕಿ, ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.