ಲೋಕದರ್ಶನ ವರದಿ
ಗದಗ23: ಸೋಂಕಿನಿಂದ ಬರುವ ಎಚ್1 ಎನ್1 ರೋಗಕ್ಕೆ ಔಷಧಿಯಿದ್ದು ಅನಾವಶ್ಯಕವಾಗಿ ಆತಂತಕಕ್ಕೆ ಒಳಗಾಗದಿರಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಮ್. ಹೊನಕೇರಿ ಅವರು ತಿಳಿಸಿದರು.
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿಗಳ ಕಚೇರಿಯಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಎಚ್ 1 ಎನ್ 1 ಸೋಂಕಿನಿಂದ ಹರಡುವ ರೋಗವಾಗಿದೆ. ಇನ್ಫ್ಲುಎಂಜಾ ಅಥವಾ ಫ್ಲೂದಂತೆ ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಚಳಿ, ಸುಸ್ತು ಇದ್ದಲ್ಲಿ ತಕ್ಷಣ ವೈದ್ಯರನ್ನು ಸಂಪಕರ್ಿಸಬೇಕು. ಈ ರೋಗದಲ್ಲಿ 3 ಹಂತಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಸಾಮಾನ್ಯ ಜ್ವರ ಹಾಗೂ ಗಂಟಲು ನೋವು, 2ನೇ ಹಂತದಲ್ಲಿ ಜ್ವರದ ತಾಪ ಹೆಚ್ಚಿದ್ದು ಗಂಟಲು ಬೇನೆ ಹೆಚ್ಚಾಗುತ್ತದೆ. 3 ನೇ ಹಂತದಲ್ಲಿ ಇದು ಇನ್ನೂ ಹೆಚ್ಚಾಗಿ ಮೈ ನೀಲಿ ಆಗುವ ಲಕ್ಷಣಗಳು ಕಂಡುಬರುತ್ತವೆ. ಈ ರೋಗಿಗಳು ಕೆಮ್ಮಿದಾಗ , ಸೀನಿದಾಗ , ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗು ಬಾಯಿ ಮುಚ್ಚಿದಾಗ ರೋಗದ ವೈರಸ್ಗಳು ಪ್ರಸಾರವಾಗುತ್ತವೆ. ಈ ರೋಗದ ತಡೆಗೆ ಮುಂಜಾಗ್ರತಾ ಕ್ರಮಾಗಿ ಕೆಮ್ಮು ಸೀನು ಇದ್ದಾಗ ಕೈವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕೈ ಬಾಯಿಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಿಕೊಳ್ಳಬೇಕು. ಸೋಂಕಿರುವ ವ್ಯಕ್ತಿಗಳ ಹತ್ತಿರ ಹೋಗಬಾರದು. ಅನಿವಾರ್ಯವಾಗಿದ್ದಲ್ಲಿ ಮೂಗು ಬಾಯಿಗೆ ಮಾಸ್ಕ ಧರಿಸಬೇಕು ಮಕ್ಕಳಲ್ಲಿ ತೀವ್ರ ಉಸಿರಾಟ, ನೀಲಿ ಮೈ , ದ್ರವ ಪದರ್ಥ ಸೇವನೆಗೆ ತೊಂದರೆ, ತೀವ್ರ ಜ್ವರ ಕೆಮ್ಮು , ಮೈಮೇಲೆ ಗಂಧೆಗಳು ಹಾಗೂ ದೊಡ್ಡವರಲ್ಲಿ ಉಸಿರಾಟದಲ್ಲಿ ತೊಂದರೆ , ಎದೆ ಹಾಗೂ ಹೊಟ್ಟೆ ನೋವು ತಲೆ ಸುತ್ತು ವಿಕೆ, ವಾಂತಿ, ಕೆಲಸದಲ್ಲಿ ಗೊಂದಲ ಇತ್ಯಾದಿಗಳು ಸೋಂಕಿತರ ಅಪಾಯದ ಚಿಹ್ನೆಗಳಾಗಿವೆ. ಜಿಲ್ಲೆಯಲ್ಲಿ ಈವರೆಗೆ ವರದಿಯಾದ 83 ಪ್ರಕರಣಗಳ ಪೈಕಿ 23 ಎಚ್ 1 ಎನ್ 1 ರೋಗ ದೃಢಪಟ್ಟಿದ್ದು ಅದರಲ್ಲಿ ಒಂದು 5 ವರ್ಷದ ಮಗು ನ್ಯುಮೋನಿಯಾ ನಂತರ ಎಚ್ 1 ಎನ್ 1 ದಿಂದಾಗಿ ಮೃತಪಟ್ಟ ಪ್ರಕರಣ ವರದಿಯಾಗಿದೆ ಎಂದು ಡಾ. ಹೊನಕೇರಿ ತಿಳಿಸಿದರು.
ಡಾ. ಸತೀಶ ಬಸರಿಗಿಡದ ಮಾತನಾಡಿ ಗ್ರಾಮ ಹಾಗೂ ನಗರಗಳಲ್ಲಿ ಆರೋಗ್ಯ ಕಾರ್ಯಕರ್ತರ , ಆಶಾ ಹಾಗೂ ವೈದ್ಯಾಧಿಕಾರಿಗಳು ಈ ರೋಗದ ಕುರಿತು ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜಿಲ್ಲಾ ತಾಲೂಕಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳ ವಾಡರ್ುಗಳನ್ನು ತೆರೆಯಲಾಗಿದೆ ಎಂದು ನುಡಿದರು.