ಎಚ್ ಎಸ್ ಪಾಟೀಲರಿಗೆ ಬಾವೂರ ಗ್ರಾಮಸ್ಥರಿಂದ ಸನ್ಮಾನ

H.S. Patil honored by Bavoor villagers

ಎಚ್ ಎಸ್ ಪಾಟೀಲರಿಗೆ ಬಾವೂರ ಗ್ರಾಮಸ್ಥರಿಂದ ಸನ್ಮಾನ  

ತಾಳಿಕೋಟಿ 11: ಇತ್ತೀಚಿಗೆ ಬೆಂಗಳೂರಿನ ಶಿವಶ್ರೀ ಮಾದ್ಯಮ ಪ್ರೈವೇಟ್ ಲಿಮಿಟೆಡ್ ರಾಜ್ ನ್ಯೂಸ್ ಇವರ ವತಿಯಿಂದ ಖ್ಯಾತ ಉದ್ಯಮಿ ಶ್ರೀ ರತನ ಟಾಟಾರವರ ಸ್ಮರಣಾರ್ಥಕವಾಗಿ ನೀಡುವ ಕರ್ನಾಟಕ ಹೆಮ್ಮೆಯ ಉದ್ದಿಮೆ 2024 ಪ್ರಶಸ್ತಿಯನ್ನು ಎಚ್‌.ಎಸ್‌.ಪಾಟೀಲರಿಗೆ ನೀಡಿ ಗೌರವಿಸಿದ್ದಕ್ಕಾಗಿ ಅವರ ಸ್ವಗ್ರಾಮ ಬಾವೂರಿನಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರವಿವಾರ ಬಾವೂರ ಗ್ರಾಮದ ಸರ್ಕಾರಿ ಶಾಲೆ ಮುಂಭಾಗದ ಆವರಣದಲ್ಲಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗಮೇಶ್ವರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಚ್‌.ಎಸ್‌.ಪಾಟೀಲರು ನನಗೆ ಈ ಪ್ರಶಸ್ತಿ ಲಭಿಸಿದ್ದಕ್ಕಾಗಿ ಹಲವಾರು ಸಂಘ ಸಂಸ್ಥೆಯವರು ಸನ್ಮಾನಿಸಿದ್ದಾರೆ ಆದರೆ ನನ್ನ ಹುಟ್ಟೂರಿನ ಜನ ನನಗೆ ಈ ರೀತಿ ಪ್ರೀತಿಯಿಂದ ಗೌರವಿಸಿದ್ದು ಅತೀವ ಸಂತೋಷ ಮತ್ತು ಅಭಿಮಾನವನ್ನು ತಂದು ಕೊಟ್ಟಿದೆ. ನಿಮ್ಮ ಈ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಹೀಗೆಯೇ ಇರಲಿ ನಾನು ಏನೇ ಸಾಧನೆ ಮಾಡಿದರು ನಿಮ್ಮವನು. ಈ ಗ್ರಾಮದ ಮಗ ಎಂಬುದು ಎಂದೂ ಮರೆಯುವುದಿಲ್ಲ ಎಂದರು.  

ಬಾವೂರ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದನಗೌಡ ಪಾಟೀಲ (ಕೂಚಬಾಳ), ನಿಂಗನಗೌಡ ಬ. ಬಿರಾದಾರ, ಸಿದ್ದನಗೌಡ ಎಂ. ಪಾಟೀಲ, ಗುರುಪಾದ ಹಡಪದ, ಅಕ್ಬರ ಪಟೇಲ, ಬಿ. ಎಸ್‌.ಬಿರಾದಾರ, ರಾಮನಗೌಡ ಬ.ಪಾಟೀಲ, ಬಸನಗೌಡ ಸಾ ಪಾಟೀಲ, ಶಾಂತಗೌಡ ಶ್ಯಾಡದಳ್ಳಿ, ಮುತ್ತು ಸಜ್ಜನ, ಅಧ್ಯಕ್ಷರು ಎಸ್ಡಿಎಂಸಿ, ಎಚ್ ಪಿ ಎಸ್ ಸರಕಾರಿ ಶಾಲೆಯ ಸಿಬ್ಬಂದಿಗಳಾದ ಎಚ್ ಎಲ್ ಬಳಗಾನೂರ, ಮುಖ್ಯ ಗುರುಗಳು, ಸಹ ಶಿಕ್ಷಕರುಗಳಾದ ವಿಶ್ವನಾಥ ಪತ್ತಾರ,ಅಶೋಕ ಹೂಗಾರ, ವಿಜಯಲಕ್ಷ್ಮಿ ಒಣರೊಟ್ಟಿ, ಮಂಜುಳಾ, ಶಿವಕುಮಾರ ಹಡಪದ, ಗ್ರಾಪಂ ಸದಸ್ಯರಾದ ಬೊಮ್ಮನಿಂಗಪ್ಪ ಕೈರೊಡಗಿ, ಬಾಬು ಬಜಂತ್ರಿ, ಗ್ರಾಮದ ಬಂದೇನವಾಜ ನಿಡಗುಂದಿ, ಕುಬೇರ​‍್ಪ ಮುದ್ದೇಬಿಹಾಳ, ಶಂಕರಗೌಡ ಶ್ಯಾಡದಳ್ಳಿ , ಚಂದ್ರು ಬಾಕಲಿ, ಆನಂದ ಬಬಲಾದಿ, ರಾಜು ಮಕ್ತಾಪುರ, ನಾನಾಗೌಡ ಬಿರಾದಾರ, ಅಯ್ಯಪ್ಪ ಅಸ್ಕಿ, ಇಸ್ಮೈಲ ಪಟೇಲ, ಆನಂದ ಬಪ್ಪರಗಿ, ಸದಾಶಿವ ಹಡಪದ, ಶರಣು ಹಡಪದ, ಕೆಂಚಪ್ಪ ಹಡಪದ, ಲಾಲು ನಿಡಗುಂದಿ, ಶಂಕ್ರ​‍್ಪ ಅಸ್ಕಿ, ಶಂಕರಲಿಂಗ ಅರಬಿ, ಗುರುಲಿಂಗಮ್ಮ ತಾಳಿಕೋಟಿ, ಕಿರಣಕುಮಾರ ಪಾಟೀಲ, ರವಿಕುಮಾರ ಪಾಟೀಲ, ಸಚಿನ್ ಪಾಟೀಲ ಮತ್ತು ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.