ಜ್ಞಾನೋತ್ಕರ್ಷ ಸ್ಪರ್ಧಾ ಹಬ್ಬ: ಸಿ.ಕೆ.ಚಿಂಚಲಿ ಪ್ರೌಢಶಾಲೆಗೆ ಚಾಂಪಿಯನ್‌ಶಿಪ್
Gyanotkarsha Competition Festival: C.K. Chinchali High School wins championship
ಮಹಾಲಿಂಗಪುರ 28: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಏರಿ್ಡಸಿದ್ದ ಜ್ಞಾನೋತ್ಕರ್ಷ-2025 ಎಂಬ ಉಚಿತ ಸ್ಪರ್ಧಾ ಹಬ್ಬದಲ್ಲಿ ಸಿ.ಕೆ.ಚಿಂಚಲಿ ಪ್ರೌಢಶಾಲೆ ಚಾಂಪಿಯನ್‌ಶಿಪ್ ಪಡೆದಿದೆ. ಸಂಗಾನಟ್ಟಿ ಸರಕಾರಿ ಪ್ರೌಢಶಾಲೆ ರನ್ನರ್‌ಅಪ್ ಸ್ಥಾನ ಪಡೆದಿದೆ.
ಟ್ಯಾಲೆಂಟ್ ಟೆಸ್ಟ್‌ನಲ್ಲಿ ತನುಜಾ ಸುತಾರ ಪ್ರಥಮ, ರಮ್ಯಾ ಪೂಜೇರಿ, ಶ್ರುತಿ ನಾಗನೂರ ದ್ವಿತೀಯ, ಭಾಗ್ಯಶ್ರೀ ಕಾಂಬಳೆ, ನಿವೇದಿತಾ ಗುಣದಾಳ, ಸಚಿನ ಅಂಕಲಗಿ, ಗಂಗೂ ಯಲ್ಲಡಗಿ ತೃತೀಯ ಸ್ಥಾನ ಪಡೆದಿದ್ದಾರೆ. ಗುಂಪು ನೃತ್ಯದಲ್ಲಿ ಶ್ರವಣ ಕೊಣ್ಣೂರ ತಂಡ, ಗಾಯನದಲ್ಲಿ ವೈಷ್ಣವಿ ಬಡಿಗೇರ, ಚರ್ಚಾ ಸ್ಪರ್ಧೆಯಲ್ಲಿ ಪವಿತ್ರಾ ಕರೋಶಿ, ಏಕಪಾತ್ರಾಭಿನಯದಲ್ಲಿ ಸಹನಾ ಗುರವ, ರಂಗೋಲಿಯಲ್ಲಿ ಸಂಗೀತಾ ಉಳ್ಳಾಗಡ್ಡಿ ತಂಡ, ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರವೀಣ ಕುಲಗೋಡ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶದೊಂದಿಗೆ ಏರಿ್ಡಸಿದ್ದ 7 ಸ್ಪರ್ಧೆಗಳಲ್ಲಿ ಸುತ್ತಲಿನ 30ಕ್ಕೂ ಹೆಚ್ಚು ಪ್ರೌಢಶಾಲೆಗಳಿಂದ 900ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಇಡೀ ಕಾಲೇಜು ಆವರಣ ರಂಗೋಲಿಯ ಚಿತ್ತಾರ, ವಿದ್ಯಾರ್ಥಿಗಳ ಕಲರವ, ಮೋಜಿನ ಸೆಲ್ಫೀ ಸ್ಟ್ಯಾಂಡ್ ಗಳಿಂದ ಪ್ರತಿಭಾ ಜಾತ್ರೆಯ ಅನುಭವ ನೀಡಿತು. ಎಲ್ಲ ಸ್ಪರ್ಧಾಳುಗಳು ಪ್ರತಿಭಾ ಪ್ರದರ್ಶನ ಮಾಡಿ ಜಿಲೇಬಿ, ಮಸಾಲೆ ರೈಸ್, ಸಾಂಬಾರ ಭೋಜನ ಸವಿದರು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ, ಆಕರ್ಷಕ ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ ಬೆಳಗ್ಗೆ ಉದ್ಘಾಟಿಸಿದರು. ಸಂಜೆ ಸಮಾರೋಪ ಸಮಾರಂಭದಲ್ಲಿ ಉಪಪ್ರಾಚಾರ್ಯ ಬಿ.ಎನ್.ಅರಕೇರಿ ಭಾಗವಹಿಸಲಿದ್ದಾರೆ. ಸಮಾರೋಪದಲ್ಲಿ ಮಹಾಲಿಂಗಪ್ಪ ಜಕ್ಕನ್ನವರ, ಮಹೇಶ ತೇಲಿ, ಬಸವರಾಜ ಪಾಲಭಾಂವಿ, ಲಕ್ಷ್ಮಣ ತಿಮ್ಮಾಪೂರ, ಬಸವರಾಜ ಕರೆಹೊನ್ನ, ಯೋಗೇಶ ಖಾನಗೌಡ ಬಹುಮಾನ ವಿತರಿಸಿದರು.
ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಕಾಲೇಜಿನ ಸಿಬ್ಬಂದಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮೇಲ್ವಿಚಾರಕರಾಗಿ, ನಿರ್ಣಾಯಕರಾಗಿ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಎಲ್.ಬಿ.ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಎಂ.ಬಿ.ತೇಲ್ಕರ, ಆರ್.ಎನ್.ಪಟ್ಟಣಶೆಟ್ಟಿ, ಜಿ.ಬಿ.ಜತ್ತಿ, ಜಿ.ವೈ.ಕಿತ್ತೂರ, ಎಸ್.ಎಚ್.ಮೆಳವಂಕಿ, ಬಿ.ಬಿ.ಯಲ್ಲಟ್ಟಿ, ಬಿ.ಎಂ.ಸಿದ್ನಾಳ, ರವೀಂದ್ರ ಕಲ್ಲೋಳಿ, ಜಯಶ್ರೀ ಪೂಜೇರಿ, ಆನಂದ ಪಾಟೀಲ, ಸಿದ್ದಯ್ಯ ಪೂಜಾರಿ, ಆರ್.ಎಂ.ಕಂಬಾರ, ಬಿ.ಎನ್. ಹಂದಿಗುಂದ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 