ಉಷಾತಾಯಿ ಗೋಗಟೆ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

 ಬೆಳಗಾವಿ 27:  ಗುರು ಸಮಸ್ತ ಶಿಕ್ಷಕ ಬಳಗದ ಸಂಕೇತವಾಗಿದ್ದು, ಗೌರವ ಹಾಗೂ ಕರ್ತವ್ಯಕ್ಕೆ ಮಾದರಿಯಾಗಿರುತ್ತಾರೆ. ಅತಂಹ ಗುರುಗಳನ್ನು ಸನ್ಮಾನಿಸುವುದರ ಮೂಲಕ ವಂದಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಭಾರತ ವಿಕಾಸ ಪರಿಷತನ ಬೆಳಗಾವಿ ಶಾಖೆಯ ಮಾಜಿಕಾರ್ಯದಶರ್ಿ ವಿ. ಆರ್. ಗುಡಿ ಅವರು ಹೇಳಿದರು. 

ಬೆಳಗಾವಿ ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾರತ ವಿಕಾಸ ಪರಿಷತನ ಬೆಳಗಾವಿ ಶಾಖೆಯಿಂದ ದಿ. 27ರಂದು ಜರುಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಭಾರತ ವಿಕಾಸ ಪರಿಷತನ ಅಧ್ಯಕ್ಷ ಸುಹಾಸ ಸಾಂಗಲಿಕರ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಕುಬೇರ ಗಣೇಶವಾಡಿ, ಕಾರ್ಯದಶರ್ಿ ಮಾಲತೇಶ ಪಾಟೀಲ ಹಾಗೂ ಪ್ರೌಢ ವಿಭಾಗದ ಮುಖ್ಯೋಪಾದ್ಯಾಯ ಎಮ. ಕೆ. ಮಾದಾರ, ಪ್ರಾಥಮಿಕ ವಿಭಾಗದ ಮುಖ್ಯೋಪಾದ್ಯಾಯಿನಿ ಮೀನಾಕ್ಷಿ ವಡೆಯರ ಉಪಸ್ಥಿತರಿದ್ದರು. 

        ಪರಿಷತ್ ವತಿಯಿಂದ ಪ್ರೌಢಶಾಲಾ ವಿಭಾಗದ ಸುನೀಲ ಪಾಟೀಲ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಅಲ್ಕಾ ಚೌಗುಲೆ ಈ ಇಬ್ಬರು ಶಿಕ್ಷಕರುಗಳಿಗೆ ಉತ್ತಮ ಶಿಕ್ಷಕರೆಂದು ಗುರುತಿಸಿ ಗುರುವಂದನೆಗೈಯಲಾಯಿತು. ಪ್ರೌಢಶಾಲಾ ವಿಭಾಗದ ಶ್ರಿದೇವಿ ಇಟಗಿಕರ ಹಾಗೂ ಸಾಕ್ಷತಾ ಬನೊಶಿ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಸೇಜಲ ಪಾಟೀಲ ಹಾಗೂ ವೈಷ್ಣವಿ ಜೋಷಿ ವಿದ್ಯಾಥರ್ಿನಿಯರನ್ನು ಉತ್ತಮ ವಿದ್ಯಾಥರ್ಿನಿಯರೆಂದು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆ ಶ್ರಿದೇವಿ ಇಟಗಿಕರ, ಸ್ವಾಗತವನ್ನು ಮುಖ್ಯೋಪಾಧ್ಯಾಯ ಎಮ. ಕೆ. ಮಾದಾರ ಮಾಡಿದರು.  ಎನ್. ಬಿ. ದೇಶಪಾಂಡೆ ವಿದ್ಯಾಥರ್ಿನಿಯರಿಗೆ ಪ್ರಮಾಣವಚನ ಬೋಧಿಸಿದರು. ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾಥರ್ಿನಿಯರು ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು.

ವಿದ್ಯಾಥರ್ಿನಿಯರು ಗುರುವನ್ನು ವಂದಿಸುವಾಗ ವಿ. ಆರ್. ಗುಡಿ ಸುಹಾಸ ಸಾಂಗಲಿಕರ ಕುಬೇರ ಗಣೇಶವಾಡಿ, ಮಾಲತೇಶ ಪಾಟೀಲ ಎನ್. ಬಿ. ದೇಶಪಾಂಡೆ ಹಾಗೂ ಇತರರು.