ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
ರಾಯಬಾಗ 03: ಪಟ್ಟಣದ ಮಹಾವೀರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 1994-95 ನೇ ಸಾಲಿನ 7 ನೇ ವರ್ಗದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅಂಗವಾಗಿ "ನೆನಪಿನ ದೋಣಿ" ಕಾರ್ಯಕ್ರಮದಲ್ಲಿ ಗುರುಮಾತೆಯರನ್ನು ವಿದ್ಯಾರ್ಥಿಗಳು ಸತ್ಕರಿಸಿದರು.
ಶಿಕ್ಷಕಿಯರಾದ ನಿರ್ಮಲಾ ಖಟಾರೆ, ಪುಷ್ಪಾ ಮಗ್ಗೇನ್ನವರ, ರಾಜಶ್ರೀ ಪಾಟೀಲ, ಅರುಣಾ ಪೊಮ್ಮಾಯಿ, ಸುನೀತಾ ಕುಂದರಗಿ, ಸುಜಾತಾಕುಮಾರಿ ಭಾಂಗ, ಕಸ್ತೂರಿ ಚೌಗಲಾ, ಹಾಗೂ ಹಳೆ ವಿದ್ಯಾರ್ಥಿಗಳು ಇದ್ದರು.