ಲೋಕದರ್ಶನ ವರದಿ
ಶಿರಹಟ್ಟಿ 13: ತಾಲೂಕಿನ ಕಡಕೋಳ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ತಾವು ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣದವರೆಗೆ ವ್ಯಾಸಂಗ ಮಾಡಿದ ಎಲ್ಲ ಗೆಳೆಯರನ್ನು ಹಾಗೂ ತಮಗೆ ಬೋಧನೆ ಮಾಡಿದ ಎಲ್ಲ ಶಿಕ್ಷಕ ಗುರುವೃಂದವನ್ನು ಒಂದೆಡೆ ಸೇರಿಸಿ ಹಳೆಯ ಎಲ್ಲ ಸವಿನೆನಪುಗಳನ್ನು ಮೆಲಕು ಹಾಕಲು ಸ್ಥಳೀಯ ಸಕರ್ಾರಿ ಪ್ರೌಢ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿದ್ಯಾಪೋಷಕ ಟ್ರಸ್ಟ್ನ ಅಧ್ಯಕ್ಷ ಡಿ.ಬಿ ಅಡವಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಈ ಕಾರ್ಯಕ್ರಮದಲ್ಲಿ ಶಿರಹಟ್ಟಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ ಸಾಲಿಮಠ ಹಾಗೂ ಶಿಕ್ಷಕರಾದ ಎಚ್.ಎಂ ಪಡ್ನೇಸಾಬ ಉಪಸ್ಥಿತಿಯಲ್ಲಿ ವಿದ್ಯಾಪೋಷಕ ಟ್ರಸ್ಟ್ ಉದ್ಘಾಟಿಸಿದರು.
ನಂತರ ಮಾತನಾಡಿದ ವಿದ್ಯಾಪೋಷಕ ಟ್ರಸ್ಟ್ನ ಅಧ್ಯಕ್ಷ ಡಿ.ಬಿ ಅಡವಿ ಕಡಕೋಳ ಗ್ರಾಮದ ಸರ್ವತೋಮುಖ ಅಭಿವೃದ್ದಿ, ವಿಧ್ಯಾಥರ್ಿಗಳಲ್ಲಿ ಉತ್ತೇಜನ, ಸಾಮಥ್ರ್ಯ ಬೆಳವಣಿಗೆ, ಶಿಕ್ಷಣದ ಗುಣಮಟ್ಟ ಹಾಗೂ ಇನ್ನೂ ಹಲವಾರು ಪ್ರಗತಿ ಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಟ್ರಸ್ಟ್ನ್ನು ಪ್ರಾರಂಭಿಸುತ್ತಿದ್ದೇವೆ, ನಮ್ಮ ಈ ಟ್ರಸ್ಟ್ನ ಎಲ್ಲ ಉದ್ದೇಶಗಳನ್ನು ಸಾಕಾರಗೊಳಿಸಲು ಗ್ರಾಮದ ಎಲ್ಲ ಹಿರಿಯರ, ಯುವಕರ ಸಂಪೂರ್ಣ ಸಹಕಾರದ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಶಿವಕುಮಾರ ಹಿರೇಮಠ ಹಾಗೂ ರವಿಕುಮಾರ ಸರ್ವರನ್ನು ಸ್ವಾಗತಿಸಿ ಪುಷ್ಪವನ್ನು ವಿತರಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಆರ್.ಪಿ ಕೆಂಚರಡ್ಡಿ ನೆರವೇರಿಸಿ ಮಕ್ಕಳ ಭವಿಷ್ಯ ಹಾಗೂ ಗ್ರಾಮದ ಸವರ್ಾಂಗೀಣ ಅಭಿವೃದ್ಧಿ ಬಗ್ಗೆ ಸವಿವರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಳೆಯ ವಿಧ್ಯಾಥರ್ಿಗಳಿಗೆ ವಿಧ್ಯಾರ್ಜನೆ ನೀಡಿದ ಎಲ್ಲ ಶಿಕ್ಷಕ ವೃಂದಕ್ಕೆ ಸನ್ಮಾನಿಸಿ ಗೌರವಿಸುವ ಮೂಲಕ ಗುರುವಂದನೆ ಅರ್ಪಿ ಸಲಾಯಿತು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಈಶ್ವರ ಹೂಗಾರ ಹಾಗೂ ಈರಣ್ಣ ಸೋನಾರ ನಡೆಸಿಕೊಟ್ಟರು.