ಹಾರೂಗೇರಿ,10: ಅಕ್ಷರದ ದಾರಿ ತೋರಿದ ಗುರುವೇ ಶಿಕ್ಷಕರು. ನಮ್ಮ ಉಪಜೀವನಕ್ಕಾಗಿ ಹತ್ತಾರು ದೇವರುಗಳನ್ನು ನಾವುಗಳು ನಂಬುವ ಪರಿಸ್ಥಿತಿ ನಿಮರ್ಾನವಾಗಿದೆ. ಶ್ರೇಷ್ಠ ಕನದಾಸ ಜಯಂತಿಯ ಎಲ್ಲರೂ ಸೇರಿ ಜಾತ್ಯಾತೀತವಾಗಿ ಆಚರಣೆ ಮಾಡಿಕೊಂಡು ಹೋಗುವುದೇ ಶ್ರೇಷ್ಠವಾಗಿದೆ. ಈ ಸಮಾಜದಲ್ಲಿ ನಾವುಗಳು ಎಲ್ಲರೂ ಒಂದೇ ಎಂದು ಹೇಳಿಕೊಳ್ಳಬೇಕು ಸರ್ವ ಧರ್ಮವನ್ನು ಪ್ರೀತಿಸು ಎಲ್ಲರು ನಮ್ಮವರು ಎಂಬ ಭಾವನೆಗಳು ಬರಬೇಕೆಂದು ಸಿದ್ದಯೋಗಿ ಅಮರೇಶ್ವರ ಮಹಾರಾಜ ಹೇಳಿದರು.
ಅವರು ಸಮೀಪದ ಅಲಖನೂರು ಗ್ರಾಮದಲ್ಲಿ ಭಕ್ತಶ್ರೇಷ್ಠ ಕನಕದಾಸರ 531 ನೇ ಜಯಂತ್ಯೋತ್ಸವದ ಅಂಗವಾಗಿ ದಾಸರ ಸಾಹಿತ್ಯದಿಂದ ಈ ಸಮಾಜಕ್ಕೆ ಕೊಡುಗೆ ವಿಚಾರಗೊಷ್ಠೀಯಲ್ಲಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪವನ್ನು ಹಾಕಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ದೇವರು ಎಲ್ಲರಿಗು ಒಲಿಯುತ್ತಾರೆ. ಇಂದು ನಾವುಗಳು ಕನಕ ಜಯಂತಿ ಅಂಗವಾಗಿ ಒಂದು ಶ್ರೇಷ್ಠವಾದ ಪ್ರತಿಜ್ಞೆ ಮಾಡೋಣ ದುಷ್ಚಟಗಳಿಂದ ನಾವುಗಳು ಹೊರಬರಬೇಕು ದುಷ್ಚಟದಿಂದ ಎಷ್ಟು ವೆಚ್ಚಮಾಡುತ್ತೀದ್ದೆವೊ, ಅದನ್ನು ನಾವು ನಮ್ಮ ಸಮಾಜಕ್ಕಾಗಿ ಆ ಹಣವನ್ನು ಮೀಸಲಿಡಬೇಕು. ನಾವುಗಳು ಕೇವಲ ಕನಕ ಜಯಂತಿ ಮಾತ್ರ ಅಲ್ಲ ವಾಲ್ಮೀಕಿ, ಅಂಬೇಡ್ಕರ್ ಹೀಗೆ ಹತ್ತಾರು ಈ ಸಮಾಜದ ಜಯಂತಿಯನ್ನು ನಾವುಗಳು ಎಲ್ಲರೂ ಕೂಡಿಕೊಂಡು ಮಾಡೋಣ ಎಂದು ಕರೆ ನೀಡಿದರು.
ಸಮಾಜದಲ್ಲಿ ನಾವುಗಳು ಒಂದಿಷ್ಟು ಬದಲಾವಣೆಯಾಗಬೇಕಾಗಿದೆ. ಪ್ರತಿದಿನ ಮಕ್ಕಳು ಕೀರ್ತನೆಗಳನ್ನು ಓದುವ ಅಭ್ಯಾಸವನ್ನು ಮಾಡಿಸಬೇಕು. ಕನಕದಾಸರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡು ಹೋಗುವ ಜವಾಬ್ದಾರಿಯು ನಮ್ಮೆಲ್ಲರ ಕರ್ತವ್ಯವಾಗಿದೆ. ಕನಕ ಸಂಪ್ರದಾಯದಲ್ಲಿ ಮಂತ್ರ ತಂತ್ರ ಯಾವುದೇ ಗೊತ್ತಿಲ್ಲ. ಕನಕ ಸಮುದಾಯದ ಜನರು ಒಂದು ಕಲ್ಲನ್ನು ಪೂಜೆ ಮಾಡಿದರು. ಅದು ಕೂಡ ನಮ್ಮನು ಒಲಿಯುತ್ತದೆ. ಸಂತೋಷ ದುಃಖಗಳು ನಮಗೆ ಬರುತ್ತವೆ. ದೇವರು ನನಗೆ ಎಷ್ಟು ಒಲಿಸುತ್ತಾನೊ ಅಷ್ಟನ್ನು ಮಾತ್ರ ಪಡೆದುಕೊಂಡು ಸಮಾಧಾನವನ್ನು ಮಾಡಿಕೊಳ್ಳಬೇಕು. ಅಶೋಕ ಚಕ್ರವತರ್ಿ ಮತ್ತು ಕನಕದಾಸರ ಇವರುಗಳು ಮನಸ್ಸು ಹೇಗೆ ಪರಿವರ್ತನೆಯಾಗಿದೆಯೊ ಅದೇ ರೀತಿಯಲ್ಲಿ ಅಳವಡಿಸಿಕೊಳ್ಳಿ. ನಾವುಗಳು ರಾಜಕೀಯವಾಗಿ ಬಂದರೆ ಯಾವುದೇ ಪಕ್ಷ ರಾಜಕೀಯ ಮಾಡಿ. ಆದರೆ ತಮ್ಮ ಮನೆಗಳಿಗೆ ಸಂತರು ಶ್ರೀಗಳು ಬಂದಾಗ ಮಾತ್ರ ಎಲ್ಲರೂ ಕೂಡಿಕೊಳ್ಳಬೇಕು.
ಈ ವಿಚಾರಗೊಷ್ಠೀಯಲ್ಲಿ ಕನಕಬ್ರಹ್ಮ ವಿದ್ಯಾಶ್ರಮ ಮುಗಳಖೋಡ ಗಣಿ ಮಠದ ಚಿನ್ಮಯಾನಂದ ಮಹಾಸ್ವಾಮಿಗಳು, ಅಮೋಘ ಅರಣ್ಯಸಿದ್ಧ ಮಠ ಧುಪದಾಳದ ತಪೋರತ್ನ ಚಿದಾನಂದೇಶ್ವರ ಮಹಾರಾಜರು ಇವರುಗಳು ದಾಸರ ಸಾಹಿತ್ಯಗಳ ಬಗ್ಗೆ ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಚಚರ್ೆ ನಡೆಸಿದರು ಹಾಗೂ ಎಸ್.ಎ. ಹೀರೇಕೊಡಿ ಇವರು ಕನದಾಸರ ಬಗ್ಗೆ ಅವರ ಜೀವನ ಚರಿತ್ರೆ ಹಾಗೂ ನಡೆದು ಬಂದ ದಾರಿಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದರ ಬಗ್ಗೆ ಸಭೆಯಲ್ಲಿ ಕನಕ ಅಭಿಮಾಜಿಗಳಿಗೆ ಕರೆ ನೀಡಿ ಉಪನ್ಯಾಸವನ್ನು ನೀಡಿದರು.
ಭಕ್ತಶ್ರೇಷ್ಠ ಕನಕದಾಸರ 531 ನೇ ಜಯಂತ್ಯೋತ್ಸವದ "ದಾಸರ ಸಾಹಿತ್ಯದಿಂದ ಈ ಸಮಾಜಕ್ಕೆ ಕೊಡುಗೆ" ವಿಚಾರಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ಗ್ರಾಮದ ಸುಮಂಗಲಿಯರು ಕುಂಭವೇಳದಲ್ಲಿ ಭಾಗಿಯಾಗಿದ್ದರು. ಚಿಕ್ಕ ಚಿಕ್ಕ ಮಕ್ಕಳು ಆರತಿ ಹಿಡಿದು ಮೆರವಣಿಗೆಯ ಸರದಿ ಸಾಲಿನಲ್ಲಿ ಸಾಗಿದ್ದರು. ಜಾನಪದ ರೂಪಕಗಳು, ಡೊಳ್ಳು ಕುಣಿತ, ಕರಡಿ ಮೇಳ ಝಂಜಾ ಮೇಳ, ಆನೆ ಅಭಾರಿ ಹೀಗೆ ವಿವಿಧ ಜಾನಪದ ಕಲೆಗಳು ಮೆರವಣಿಗೆಯಲ್ಲಿ ಜನಮನ ಸೆಳೆಯುತ್ತಿದ್ದವು.
ಗ್ರಾಮಸ್ಥರು ಮುಂಬರುವ ವರ್ಷಗಳಲ್ಲಿ ಗ್ರಾಮದಲ್ಲಿ ಭಕ್ತಶ್ರೇಷ್ಠ ಕನಕದಾಸರ ಮೂತರ್ಿ ಪ್ರತಿಷ್ಠಾಪನೆ ಮಾಡುವುದಕ್ಕೆ ಹಂದಿಗುಂದ ಗ್ರಾಮದ ಶ್ರೀಮಂತ ಮಹಾರಾಜರು ದೇಣಿಗೆ ನೀಡುವ ಮೂಡಲ ಚಾಲನೆ ನೀಡಿದ ತಕ್ಷಣ ಸಭೆಯಲ್ಲಿ ಭಾಗಿಯಾಗಿರುವ ಎಲ್ಲರೂ ಒಂದೇ ದಿನದಲ್ಲೂ ಸುಮಾರು 3 ಲಕ್ಷ ಹಣವನ್ನು ಸಂಗ್ರಹವಾಗಿತ್ತು.
ಧರ್ಮಣ್ಣ ನಡಹಟ್ಟಿ ಭಕ್ತಶ್ರೇಷ್ಠ ಕನಕದಾಸರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎಸ್. ವಂಟಗೂಡಿ ಪ್ರಾರ್ಥನೆ ಹೇಳಿ ನಿರೂಪಿಸಿದರು. ಭರಮು ಪೂಜೇರಿ ವಂದಿಸಿದರು.