ಗುರು ಶಾಂತ ಶಿವಯೋಗಿಗಳು ವಿಭೂತಿ ಪುರುಷರೆಂದೇ ಖ್ಯಾತ ನಾಮರು -ಜಿ. ಬಿ. ಮಾಸಣಗಿ

Guru Shanta Shiva Yogis are famous as Vibhuti Purusha -G. B. Masanagi

ಗುರು ಶಾಂತ ಶಿವಯೋಗಿಗಳು ವಿಭೂತಿ ಪುರುಷರೆಂದೇ ಖ್ಯಾತ ನಾಮರು -ಜಿ. ಬಿ. ಮಾಸಣಗಿ

ರಾಣೇಬೆನ್ನೂರು 01: ಜ 1  ವಿಭೂತಿ ಪುರುಷರೆಂದೇ ಖ್ಯಾತರಾದ ಗುರುಶಾಂತ  ಶಿವಯೋಗಿಗಳು ಆತ್ಮೋನ್ನತಿ ಸಾಧಿಸಿ ದೈವತ್ವಕ್ಕೇರಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜಿ.ಬಿ.ಮಾಸಣಗಿ ಹೇಳಿದರು. ಅವರು, ತಾಲೂಕಿನ ಇತಿಹಾಸ ಪ್ರಸಿದ್ಧ ಜಂಗಮ ಕ್ಷೇತ್ರ ಖ್ಯಾತಿಯ ಜೋಯಿಸರಹರಳಹಳ್ಳಿ  ಜೀವಂತ ಸಮಾಧಿ ಸ್ಥಳ ಗುರುಶಾಂತೇಶ್ವರ ಬೆಟ್ಟದಲ್ಲಿ ನಡೆದ ವಾರ್ಷಿಕ, ಕಾರ್ತೀಕೋತ್ಸವ ನಿಮಿತ್ಯ ಜರುಗಿದ  ಕ.ಸಾ.ಪ. ದತ್ತಿ ಶ್ರೀ ಗುರು ಕುಮಾರ ಶಿವಯೋಗಿಗಳವರ ಜೀವನ ಮತ್ತು ಸಾಧನೆ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು. ಸಮಾಧಿ ಸ್ಥಿತಿ ಎಂದರೆ ಸಮಚಿತ್ತ ಸ್ಥಿತಿಯಲ್ಲಿದ್ದ ಸಿದ್ಧಿ ಪುರುಷರಾದ ಗುರುಶಾಂತ ಸ್ವಾಮಿಗಳು ಬಾಹ್ಯ ಪ್ರಪಂಚವನ್ನು ಮರೆತು  ಅಂತರಾತ್ಮದಲ್ಲೇ  ಪರಮ ಪಾವನನಾದ ಭಗವಂತನನ್ನು ನೆಲೆಗೊಳಿಸಿ ಕೊಂಡು ಶಿವಯೋಗಿಗಳಾದವರು. ಪೂಜ್ಯರು ತೋರಿದ ಬಾಲ-ಲೀಲೆಗಳು ಹಾಗೂ ಪವಾಡಗಳ ಕುರಿತು ಐತಿಹ್ಯಗಳನ್ನು   ಭಕ್ತರು ನಂಬಿದ್ದಾರೆ.ಅಮಾವಾಸ್ಯೆಯ  ಕತ್ತಲನ್ನೂ ಲೆಕ್ಕಿಸದೇ ಈ ಜಾಗೃತ ಸ್ಥಳಕ್ಕೆ ಶ್ರದ್ಧಾ-ಭಕ್ತಿಯಿಂದ ದೂರದ ಊರುಗಳಿಂದ ಬರುವ ಭಕ್ತಾದಿಗಳು  ಗದ್ದುಗೆಯ ದರ್ಶನ ಪಡೆದು, ಅನ್ನದಾಸೋಹ-ಜ್ಘಾನದಾಸೋಹದಲ್ಲಿ ಪಾಲ್ಗೊಂಡು ಧನ್ಯತಾ ಭಾವದಿಂದ ಮರಳುತ್ತಾರೆ.ಎಂದರು ಜಾತಿ-ಮತ-ಪಂಥಗಳ ಬೇಧವಿಲ್ಲದೇ ಸರ್ವ ಜನಾಂಗದ ಭಕ್ತರೂ ಸೇರುವುದೇ ಪೂಜ್ಯರ ಜೀವಂತ ಸಮಾಧಿ ಸ್ಥಳದ ಮಹಿಮೆಯಾಗಿದೆ. ಪೂಜ್ಯರನ್ನು ನಂಬಿ ನಡೆಯುತ್ತಿರುವ ಈ ಊರಿನಲ್ಲಿ  ಪ್ರಾಣಿ-ಬಲಿಯಂತಹ ಯಾವುದೇ ಮೌಢ್ಯ ಆಚರಣೆಗಳು ನಡೆದಿಲ್ಲ. ಶ್ರೀ ಮಳೆಶಾಂತೇಶ್ವರ, ಶ್ರೀ ಗುರು ಶಾಂತೇಶ್ವರ ಹಾಗೂ ಶ್ರೀ ಕುಮಾರೇಶ್ವರ ಶಿವಯೋಗಿಗಳಂತಹ  ವಿಭೂತಿ ಪುರುಷರ ನೆಲೆವೀಡಾದ ಜೋಯಿಸರಹರಳಹಳ್ಳಿ ಗುರು -ಲಿಂಗ-ಜಂಗಮ ಸುಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ ಎಂದು ಮಾಸಣಗಿ ಅವರು ಕ್ಷೇತ್ರದ ಐತಿಹ್ಯ ಕುರಿತು ಸಾಧ್ಯಂತವಾಗಿ ಉಪನ್ಯಾಸ ನೀಡಿದರು.