ಬ್ಯಾಂಕ್ ನೂತನ ನಿರ್ದೇಶಕರಿಗೆ ಮಾರ್ಗದರ್ಶನ

Guidance for new bank directors

ಬ್ಯಾಂಕ್ ನೂತನ ನಿರ್ದೇಶಕರಿಗೆ ಮಾರ್ಗದರ್ಶನ  

ಬೆಳಗಾವಿ 04: ಬೆಳಗಾವಿ ಜಿಲ್ಲಾ ಅರ್ಬನ್ ಸಹಕಾರಿ ಬ್ಯಾಂಕ್ ಸಂಘದ ಪರವಾಗಿ ಮರಾಠಾ ಬ್ಯಾಂಕಿನ ಛತ್ರಪತಿ ಶಿವಾಜಿ ಸಭಾಂಗಣದಲ್ಲಿ ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ಬ್ಯಾಂಕಿನ ನಿರ್ದೇಶಕರಿಗೆ ಅವರ ಕರ್ತವ್ಯಗಳ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.  ಜಿಲ್ಲೆಯ 24 ಸದಸ್ಯ ಬ್ಯಾಂಕುಗಳಲ್ಲಿ ಹಲವು ಬ್ಯಾಂಕುಗಳ ಮಂಡಳಿಯ ಚುನಾವಣೆಗಳು ಇತ್ತೀಚೆಗೆ ನಡೆದ ಕಾರಣ, ಹೊಸದಾಗಿ ಆಯ್ಕೆಯಾದ ನಿರ್ದೇಶಕರು ಮತ್ತು ಸಂಘದ ಸದಸ್ಯರಿಗೆ ಮಾರ್ಗದರ್ಶನ ನೀಡಲು ಈ ಶಿಬಿರವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷರು ಮತ್ತು ಬಸವೇಶ್ವರ ಬ್ಯಾಂಕಿನ ಹಿರಿಯ ನಿರ್ದೇಶಕ ಬಾಳಪ್ಪ ಕಗ್ಗಣಗಿ ಅಧ್ಯಕ್ಷತೆ ವಹಿಸಿದ್ದರು. ಅನೇಕ ಬ್ಯಾಂಕುಗಳು ಹೊಸದಾಗಿ ಆಯ್ಕೆಯಾದ ಸದಸ್ಯರು ಹಾಜರಿದ್ದರು.  ಸಂಸ್ಥೆಯ ಸಲಹೆಗಾರ ಮತ್ತು ದೈವಜ್ಞ ಬ್ಯಾಂಕಿನ ಉಪಾಧ್ಯಕ್ಷ ಮಂಜುನಾಥ ಶೇಠ್ ಸ್ವಾಗತಿಸಿದರು. ಬಾಳಪ್ಪ ಕಗ್ಗಣಗಿ ಪ್ರಸ್ತಾವನೆ ನಂತರ ದೀಪ ಬೆಳಗಿಸಿದರು.  ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮತ್ತು ಮರಾಠಾ ಬ್ಯಾಂಕಿನ ನಿರ್ದೇಶಕ ಬಾಳಾಸಾಹೇಬ್ ಕಾಕತಕರ,  ಖಜಾಂಚಿ ಮತ್ತು ಪಾಶ್ಚಾಪುರ ಬ್ಯಾಂಕಿನ ನಿರ್ದೇಶಕ ಅಮರನಾಥ ಮಹಾಜನ್ ಶೆಟ್ಟಿ, ಕಾರ್ಯದರ್ಶಿ ಮತ್ತು ತುಕಾರಾಮ ಬ್ಯಾಂಕಿನ ನಿರ್ದೇಶಕ ರಾಜು ಒವುಳಕರ  ಮುಂತಾದವರು ಉಪಸ್ಥಿತರಿದ್ದರು.  ಶಾಂತಪನ್ನಾ ಮಿರಜಿ ಬ್ಯಾಂಕ್ ಚಿಕ್ಕೋಡಿಯ ನಿವೃತ್ತ ವ್ಯವಸ್ಥಾಪಕ ಬಿ.ಎ. ಭೋಜಕರ ಮತ್ತು ಗೋಕಾಕ್ ಅರ್ಬನ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎಸ್‌.ಎಸ್‌. ಪಾಟೀಲ್ ಅವರು ಬ್ಯಾಂಕ್ ನಿರ್ದೇಶಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.  ಸಭಿಕರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಊಟದ ನಂತರ ಕಾರ್ಯಕ್ರಮ ಮುಕ್ತಾಯವಾಯಿತು. ಮರಾಠಾ ಬ್ಯಾಂಕ್ ಅಧ್ಯಕ್ಷ ಬಾಳಾರಾಮ ಪಾಟೀಲ, ಖಾನಾಪುರ ಬ್ಯಾಂಕ್ ಅಧ್ಯಕ್ಷ ಅಮೃತ ಶೆಲಾರ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಇಂತಹ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಿದ್ದಕ್ಕೆ ಅನೇಕರು ತೃಪ್ತಿ ವ್ಯಕ್ತಪಡಿಸಿದರು.